ತುಮಕೂರು-ಎರಡು ಜನರ ಬಾಳಿಗೆ ಬೆಳಕಾದ ಸರ್ವಮ್ಮ-ಮೃತರ ಕುಟುಂಬಸ್ಥರ ಉತ್ತಮ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ತುಮಕೂರು-ಎಸ್.ಐ.ಟಿ ಬಡಾವಣೆಯಲ್ಲಿ ವಾಸವಾಗಿದ್ದ ಸರ್ವಮ್ಮ (೮೪ ವಯಸ್ಸು) ನಿಧನರಾಗಿದ್ದು ಅವರ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬದವರು ಎರಡು ಜನರ ದೃಷ್ಟಿಗೆ ಕಾರಣೀಕರ್ತರಾಗಿದ್ದಾರೆ.

ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಹೆಸರಾಂತ ನೇತ್ರತಜ್ಞರಾದ ಡಾ|| ಲೋಕೇಶ್ ಹಾಗೂ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿಗಳ ಸಹಕಾರದಿಂದ ಮೃತರಿಂದ ಎರಡು ನೇತ್ರಗಳನ್ನು ತೆಗೆದರು. ಈ ಎರಡು ನೇತ್ರಗಳನ್ನು ಎನ್.ಎಸ್.ಐ ಫೌಂಡೇಶನ್ ಮುಖ್ಯಸ್ಥರಾದ ನಾಗದೀಶ್ ಎನ್.ಎಸ್. ರವರ ಸಹಕಾರದಿಂದ ಬೆಂಗಳೂರಿನ ಲಯನ್ಸ್ ಇಂಟರ್‌ನ್ಯಾಷನಲ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಈ ಕಾರ್ಯದಿಂದ ಇಬ್ಬರು ದೃಷ್ಠಿಹೀನರಿಗೆ ದೃಷ್ಠಿ ದೊರೆತಂತಾಗಿದೆ.

ತುಮಕೂರು ಜಿಲ್ಲೆಯಲ್ಲಿ ನೇತ್ರದಾನ ಮಾಡುವವರು ನಾಗದೀಶ್ ಎನ್.ಎಸ್. ಮುಖ್ಯಸ್ಥರು, ಎನ್.ಎಸ್. ಐ ಫೌಂಡೇಶನ್, ಎನ್.ಎಸ್. ಪೈಂಟ್ಸ್ & ಹಾರ್ಡ್ವೇರ್, ಜೆ.ಸಿ. ರಸ್ತೆ, ಮಂಡಿಪೇಟೆ ಸರ್ಕಲ್, ತುಮಕೂರು ಮೊ 9560066066 ಸಂಪರ್ಕಿಸಬೇಕೆoದು ಮನವಿ ಮಾಡಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

× How can I help you?