ತುಮಕೂರು-‘ಗೂಳೂರು ಗ್ರಾಮಸ್ಥರ ನೀರಿನ ಗೋಳನ್ನು’ ನಿವಾರಿಸಿದ ಶಾಸಕ ಬಿ ಸುರೇಶ್ ಗೌಡ-ಧನ್ಯವಾದಗಳನ್ನು ತಿಳಿಸಿದ ಗ್ರಾಮಸ್ಥರು

ತುಮಕೂರು-ತಾಲೂಕಿನ ಇತಿಹಾಸ ಪ್ರಸಿದ್ದ ಗೂಳೂರು ಗ್ರಾಮದ ಜನತೆ ಗ್ರಾಮದ ಕೆರೆಗೆ ನೀರು ಹರಿದು ಬರಲು ಕ್ರಮ ಕೈಗೊಂಡ ಶಾಸಕ ಬಿ ಸುರೇಶ್ ಗೌಡ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.

ಗಣಪತಿ ಪ್ರತಿಷ್ಠಾಪನೆಯಿಂದ ಇತಿಹಾಸ ಪ್ರಸಿದ್ದಿ ಹೊಂದಿರುವ ಗೂಳೂರು ಗ್ರಾಮದ ಕೆರೆಗೆ ಪ್ರತಿವರ್ಷ ಇತಿಹಾಸ ಪ್ರಸಿದ್ದ ಗಣಪತಿ ಮೂರ್ತಿಯನ್ನ ವಿಸರ್ಜನೆ ಮಾಡುತ್ತ ಬಂದಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಆ ಕೆರೆಗೆ ನೀರು ಹರಿದು ಬರುವ ಕಾಲುವೆಗಳಲ್ಲಿ ಹೂಳು ತುಂಬಿಕೊಂಡು ನೀರು ಹರಿದು ಬರಲು ಸಾಧ್ಯವಾಗದೆ ಹೋಗಿತ್ತು.ಜೊತೆಗೆ ನೀರು ಬರುವ ಇತರ ಎಲ್ಲಾ ಮಾರ್ಗಗಳು ಬಂದ್ ಆದ ಕಾರಣ ಕೆರೆಗೆ ನೀರು ಹರಿದು ಬರುವುದು ಸಂಪೂರ್ಣ ನಿಂತೇಹೋಗಿತ್ತು.

ಅಡ್ಡಿ ಇದ್ದ ಸಮಸ್ಯೆಗಳನ್ನು ಸರಿಪಡಿಸಿ ಕೆರೆಗೆ ನೀರು ಬರುವಂತೆ ಮಾಡಲು ಗೂಳೂರು ಕೆರೆ ಅಭಿವೃದ್ಧಿ ಸಂಘದ ಕಾರ್ಯಕರ್ತರು ಹರ ಸಾಹಸ ಪಟ್ಟರು ಕಾಲುವೆಗಳನ್ನ ಸರಿಪಡಿಸಿ ನೀರು ಬರುವಂತೆ ಮಾಡಾಗಲಿಲ್ಲ.

ಇದರಿಂದ ಹತಾಶೆಗೊಂಡ ಕೆರೆ ಅಭಿವೃದ್ಧಿ ಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಈ ವಿಷಯವನ್ನು ಶಾಸಕರಾದ ಸುರೇಶ್ ಗೌಡರವರ ಬಳಿ ತಿಳಿಸಿದಾಗ ಅವರು ತಕ್ಷಣ ಕಾರ್ಯ ಪ್ರವೃತರಾಗಿ ಸಂಬಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕಸಕಡ್ಡಿಗಳಿಂದ ಕಟ್ಟಿಕೊಂಡಿದ್ದ ಕಾಲುವೆದಾರಿಯನ್ನ ಸ್ವಚ್ಛಗೊಳಿಸಿ ಕೆರೆಗೆ ನೀರು ಸರಾಗವಾಗಿ ಹರಿದು ಬರುವಂತೆ ಕ್ರಮ ಕೈಗೊಂಡರು.

ಅಲ್ಲದೆ ಕೆರೆ ಕೊಡಿಗೆ ನಿರ್ಮಿಸಲಾಗಿದ್ದ ಹಳೆಯ ಗೇಟ್‌ನ್ನು ಹೊಸದಾಗಿ ಪೊಲೀಸ್,ಭದ್ರತೆಯೊಂದಿಗೆ ಮತ್ತೆ ಅಳವಡಿಸಿ ಪೋಲಾಗಿ ಹರಿಯುತ್ತಿದ್ದ ನೀರನ್ನು ಗೂಳೂರು ಕೆರೆಯತ್ತ ಹರಿಯುವಂತೆ ಮಾಡಿ ಗೂಳೂರು ಗ್ರಾಮಸ್ಥರ ದೊಡ್ಡ ಗೊಳೊಂದನ್ನು ನಿವಾರಿಸಿಕೊಟ್ಟಿದ್ದಾರೆ.

ಈ ಕಾರಣಕ್ಕೆ ಸಂತಸಗೊಂಡಿರುವ ಗ್ರಾಮಸ್ಥರು ಶಾಸಕ ಬಿ ಸುರೇಶ್ ಗೌಡ ಅವರರಿಗೆ ಅಭಿನಂದನೆಗಳನ್ನ ತಿಳಿಸಿದ್ದಾರೆ.

ಕೆರೆಗೆ ಹರಿದು ನೀರು ಹರಿದು ಬರುವ ಎಲ್ಲಾ ಕಾಲುವೆಗಳಲ್ಲಿ ಕಸ ಕಡ್ಡಿ ಸೇರಿದಂತೆ ಇತರೆ ಸಮಸ್ಯೆಗಳಿಂದ ಹಾಗೂ ಪಕ್ಕದ ಗ್ರಾಮವಾದ ಪಾಲಸಂದ್ರದ ಕಟ್ಟೆ ಕಾಲುವೆಯಲ್ಲಿನ ಕಾಮಗಾರಿಯಿಂದ ಒಂದು ಹನಿಯು ಬಂದಿರಲಿಲ್ಲ.ಈ ಗಂಭೀರ ಸಮಸ್ಯೆಯನ್ನು ಶಾಸಕ ಸುರೇಶ್ ಗೌಡರವರಿಗೆ ತಿಳಿಸಿದ ತಕ್ಷಣ ಸಂಬoಧಪಟ್ಟ ಅಧಿಕಾರಿಗಳಿಗೆ ತಿಳಿಸಿ ನೀರು ಬರುವ ಕಾಲುವೆಯಲ್ಲಿನ ಹೂಳನ್ನು ಎತ್ತಿಸಿ ಕೆರೆಗೆ ನೀರು ಬರುವಂತೆ ಮಾಡಿದರು.

ಗ್ರಾಮಸ್ಥರ ಹಾಗೂ ಗಣಪತಿ ಮಂಡಳಿಯ ವತಿಯಿಂದ ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.

——ಬಾಬು (ಬಾಬಣ್ಣ) ಗ್ರಾಮಸ್ಥರು ಹಾಗೂ ಸದಸ್ಯರು ಕೆರೆ ಅಭಿವೃದ್ದಿ ಸಂಘ ಗೂಳೂರು

Leave a Reply

Your email address will not be published. Required fields are marked *

× How can I help you?