ತುಮಕೂರು:ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಿಟ್ಟು ಜನಪದವನ್ನು ಅಪ್ಪಿಕೊಳ್ಳಬೇಕು-ಡಾ.ಎಸ್ ಬಾಲಾಜಿ

ತುಮಕೂರು:ಜನಪದವು ಜನರ ಜೀವನಾಡಿ, ಬದುಕಿನ ಪ್ರಮುಖ ಅಂಗ ,ಜನಪದದಿoದ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ನೈತಿಕತೆ ಪ್ರಾಮಾಣಿಕತೆ, ಪ್ರೀತಿ, ನಂಬಿಕೆ, ಸಾಮಾಜಿಕ ಮೌಲ್ಯಗಳು ಬರುತ್ತವೆ.ಸಂಸ್ಕಾರಯುತವಾದ ನಾಗರೀಕರು ಪ್ರಪಂಚಕ್ಕೆ ತುಂಬಾ ಅವಶ್ಯಕನಾಗಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಿಟ್ಟು ಜನಪದವನ್ನು ವಿದ್ಯಾರ್ಥಿಗಳು ಅಪ್ಪಿಕೊಳ್ಳಬೇಕು ಎಂದು ಕನ್ನಡ ಜನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿ ಅವರು ಕರೆ ನೀಡಿದರು.

ನಗರದ ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಾಂಸ್ಕೃತಿಕ ,ಕ್ರೀಡೆ,ಎನ್.ಎಸ್.ಎಸ್, ಎನ್ ಸಿ.ಸಿ, ರೆಡ್ ಕ್ರಾಸ್ ಘಟಕಗಳ ಉದ್ಘಾಟನಾ ಸಮಾರಂಭ ‘ಅಭಿವ್ಯಕ್ತಿ ‘ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತುಮಕೂರು ಹಲವಾರು ಜನಪದ ಕಲಾ ಪ್ರಕಾರಗಳಿಗೆ ಹೆಸರುವಾಸಿಯಾಗಿದೆ.ಇಲ್ಲಿನ ಜನರು ಸೋಬಾನೆ ಪದಗಳುನ್ನು ,ಜಾನಪದ ಗೀತೆಗಳನ್ನು, ಜುಂಜಪ್ಪನ ಕಾವ್ಯ, ಮಂಟೆಸ್ವಾಮಿ ಕಾವ್ಯಗಳನ್ನು ರಾತ್ರಿಯಿಡಿ ಹಾಡುವ ಮೂಲಕ ಜನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಶಿಷ್ಟ ಸಾಹಿತ್ಯದ ಜೊತೆಗೆ ಜನಪದ ಸಾಹಿತ್ಯವನ್ನು ಓದುವ ಪ್ರವೃತ್ತಿಯನ್ನು ರೂಡಿಸಿಕೊಳ್ಳಬೇಕು. ಯುವಕರು ಬುಡಕಟ್ಟು ಜನಾಂಗಗಳೊoದಿಗೆ ಬೆರೆತು ಜೀವನ ಮೌಲ್ಯಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಟಿ.ಬಿ.ನಿಜಲಿಂಗಪ್ಪನವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ವಿದ್ಯಾರ್ಥಿಗಳು ಪಠ್ಯಚಟುವಟಿಗಳ ಜೊತೆಗೆ ಪಠ್ಯೇತರ ಚಟುವಟಿಗಳಾದ ಎನ್.ಎಸ್.ಎಸ್, ಎನ್ ಸಿ.ಸಿ, ಕ್ರೀಡೆ, ಸಾಂಸ್ಕೃತಿಕ, ಚಟುವಟಿಕೆಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸನವನ್ನು ಮಾಡಿಕೊಳ್ಳಬೇಕು. ಪಠ್ಯ ಚಟುವಟಿಕೆ ಜ್ಞಾನವನ್ನು ನೀಡಿದರೆ ಪಠ್ಯೇತರ ಚಟುವಟಿಕೆಗಳು ಅನುಭವವನ್ನು ನೀಡುತ್ತವೆ. ಅನುಭವಗಳು ಬದುಕಿನಲ್ಲಿ ದೀರ್ಘಕಾಲದವರಿಗೆ ಜೊತೆಯಲ್ಲಿ ಇರುತ್ತವೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸಮಾಜದಲ್ಲಿ ಸೇವಾ ಮನೋಭಾವವನ್ನು ರೂಡಿಸಿಕೊಂಡು ಉತ್ತಮ ಸಮ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರಿಗಮಪ ಖ್ಯಾತಿಯ ಡಾ.ಶ್ರಾವ್ಯ.ಎಸ್.ರಾವ್ ಹಾಡುಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ಗಾನ ಸುಧೆಯಲ್ಲಿ ತೇಲಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಸರ್ವಮಂಗಳ,ಪ್ರೊ. ಸಿ.ಎಸ್.ಸೋಮಶೇಖರಯ್ಯ, ಡಾ. ಬಿ.ಆರ್.ಚಂದ್ರಶೇಖರಯ್ಯ,ಬಸವ, ಶ್ರುತಿ,ಮಧು.ಎಸ್. ಕುಮಾರ್ ಉಪಸ್ಥಿತರಿದ್ದರು.

——————-ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?