
ತುಮಕೂರು:ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಕೆ.ಎ.ಐ.ಡಿ.ಬಿ. ಸಿ.ಇ.ಓ ಆದ ಡಾ,ಎಂ.ಮಹೇಶ್ ರವರನ್ನು ಬೆಂಗಳೂರಿನ ಕೇoದ್ರ ಕಚೇರಿಯಲ್ಲಿ ಭೇಟಿ ಮಾಡಿ ಕೈಗಾರಿಕಾ ಪ್ರದೇಶಗಳಲ್ಲಿ ಅತ್ಯವಶ್ಯಕವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳ ನಿರ್ಮಾಣ ಹಾಗೂ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಅತಿ ಶೀಘ್ರವಾಗಿ ಪರಿಹರಿಸಿ ಕೊಡುವಂತೆ ಮನವಿ ಮಾಡಲಾಯಿತು,
ಇದೇ ಸಂದರ್ಭದಲ್ಲಿ ನ್ಯಾಷನಲ್ ಹೈವೇಯಿಂದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೋಗುವವರು ಹಾಗೂ ಬರುವವರಿಗೆ ಅನುಕೂಲವಾಗುವಂತೆ ಫ್ಲೈ ಓವರ್ ಬ್ರಿಡ್ಜ್ ನಿರ್ಮಿಸಲಾಗುತ್ತಿದೆ,ಹಿರೇಹಳ್ಳಿಗೆ ರಸ್ತೆ ಹಾಗು ಮೂಲಭೂತ ಸೌಕರ್ಯಕ್ಕೆ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ, ಕೆಲವೇ ದಿನಗಳಲ್ಲಿ ಇನ್ನು ಮಿಕ್ಕ ಕೈಗಾರಿಕಾ ಪ್ರದೇಶಕ್ಕೂ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಡಾ,ಎಂ.ಮಹೇಶ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಟಿ.ಜೆ.ಗಿರೀಶ್, ಸುಜ್ಞಾನ್ ಹಿರೇಮಠ್, ಶ್ರೀಕಂಠಸ್ವಾಮಿ, ಜಿ.ಆರ್.ಸುರೇಶ್,
ಮಹಮ್ಮದ್ ವಾಜೀದ್ ರವರು ಇದ್ದರು.
————ಕೆ.ಬಿ ಚಂದ್ರಚೂಡ