ತುಮಕೂರು:ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಸಹಕಾರಿ ಧುರೀಣರನ್ನು ಗುರುತಿಸಿ,ನೀಡುವ ಪ್ರತಿಷ್ಠಿತ ಸಹಕಾರಿ ರತ್ನ ಪ್ರಶಸ್ತಿಗೆ ತುಮಕೂರು ವೀರಶೈವ ಸಹಕಾರ ಬ್ಯಾಂಕ್(ನಿ)ನ ಉಪಾಧ್ಯಕ್ಷರು ಮತ್ತು ಹಿರಿಯ ವಕೀಲರಾದ ಕೆ.ಮಲ್ಲಿಕಾರ್ಜುನಯ್ಯ ಭಾಜನರಾಗಿದ್ದಾರೆ.
ಕೆ.ಮಲ್ಲಿಕಾರ್ಜುನಯ್ಯನವರಿಗೆ ಸಹಕಾರಿ ರತ್ನ ಪ್ರಶಸ್ತಿ ಬಂದಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿ ಮಾತನಾಡಿದ ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಕೆ.ಜೆ. ರುದ್ರಪ್ಪನವರು, ಕೆ.ಮಲ್ಲಿಕಾರ್ಜುನಯ್ಯನವರು ಹಿರಿಯ ಸಹಕಾರಿಗಳು,ಕಳೆದ 30 ವರ್ಷಗಳಿಂದ ನಾನು ಅವರೊಂದಿಗೆ ಇದ್ದೇನೆ,ಸಹಕಾರಿ ಬ್ಯಾಂಕ್ ಗಳ ಬಗ್ಗೆ ಅವರಿಗೆ ಅಪಾರ ಪಾಂಡಿತ್ಯವಿದೆ,ಬ್ಯಾoಕ್ ಸೇವೆಗಳು,ಠೇವಣಿಗಳು,ಸಾಲ ವಿತರಣೆ,ಸಮಾಜ ಸೇವೆ ಹೀಗೆ ಎಲ್ಲದರಲ್ಲೂ ಅವರಿಗೆ ವಿಶೇಷ ಜ್ಞಾನವಿದೆ ಎಂದು ಹೇಳಿದರು.
ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ಬಂದಿರುವುದಕ್ಕೆ ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನ ನಿರ್ದೇಶಕ ಮಂಡಳಿ,ಅಧಿಕೃತ ಅಧಿಕಾರಿ ಎಂ.ಆರ್.ತಿಪ್ಪೇಸ್ವಾಮಿ,ಸಿಇಓ(ಪ್ರಭಾರ)ಶ್ರೀಮತಿ ಕಲ್ಪನ,ಎಲ್ಲಾ ಶಾಖೆಯ ವ್ಯವಸ್ಥಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ ಮಾತನಾಡಿ,ಕೆ.ಮಲ್ಲಿಕಾರ್ಜು ನಯ್ಯನವರಿಗೆ ಸಹಕಾರಿ ರತ್ನ ಪ್ರಶಸ್ತಿ ಬಂದಿ ರುವುದಕ್ಕೆ ಜಿಲ್ಲಾ ವಕೀಲರ ಸಂಘದ ಎಲ್ಲಾ ಸದಸ್ಯರ ಪರವಾಗಿ ಅಭಿನಂದನೆಗಳು.ಮಲ್ಲಿಕಾರ್ಜುನಯ್ಯನವರು ಹಿರಿಯ ಸಹಕಾರಿಗಳಾಗಿ ,ಹಿರಿಯ ವಕೀಲರಾಗಿ ಸಮಾಜಕ್ಕಾಗಿ ಸದಾ ದುಡಿಯುತ್ತಿದ್ದಾರೆ.ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಸುಲಭವಾಗಿ ಸಾಲ ಸಿಗುವಂತೆ ಮಾಡಲು ತುಮಕೂರು ವೀರಶೈವ ಬ್ಯಾಂಕ್ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಬಡವರಿಗೆ ಆಶಾದೀಪವಾಗಿದ್ದಾರೆ ಎಂದು ಹೇಳಿದರು.
ಶ್ರೀಯುತರಿಗೆ ಪ್ರಶಸ್ತಿ ಬಂದಿರುವುದಕ್ಕೆ ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕರಾದ ಡಾ||ಎಸ್.ಪರಮೇಶ್ವರ್,ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ತಿಪ್ಪೇಸ್ವಾಮಿ,ಶಾಸಕ ಜಿ.ಬಿ.ಜ್ಯೋತಿಗಣೇಶ್,ಕೇಂದ್ರ ಜಲಶಕ್ತಿ,ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ,ಹೆಬ್ಬಾಕ ರವಿ,ಮಾಜಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜೆ.ಕೆ.ಅನಿಲ್,ಟಿ.ಬಿ.ಶೇಖರ್,ಅತ್ತಿ ರೇಣುಕಾ,ನಗರ ವೀರಶೈವ ಸಮಾಜ, ಡಾ||ಶಿವಾನಂದಶಿವಾಚಾರ್ಯಸ್ವಾಮೀಜಿ,ಶ್ರೀವೀರಭದ್ರಶಿವಾಚಾರ್ಯಸ್ವಾಮೀಜಿ ಮುoತಾದ ಹರಚರ ಗುರುಗಳು,ವೀರಶೈವ ಸಮಾಜದ ಅಂಗಸoಸ್ಥೆಗಳು ಮತ್ತು ಅದರ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
—–—ಚಂದ್ರಚೂಡ