ತುಮಕೂರು:ಕನಕದಾಸರು ತಮ್ಮ ಕೀರ್ತನೆ ಮತ್ತು ವಚನಗಳ ಮೂಲಕ ವೈಚಾರಿಕತೆಗೆ ಹೊಸ ಅರ್ಥ ತಂದು ಕೊಟ್ಟ ಶ್ರೇಷ್ಠ ದಾಸ ಸಂತರು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಭಿಪ್ರಾಯಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಳಿದಾಸ ವಿದ್ಯಾವರ್ಧಕ ಸಂಘ ಮತ್ತು ಜಿಲ್ಲೆಯ ಕುರುಬರ ಸಂಘ-ಸoಸ್ಥೆಗಳ ವತಿಯಿಂದ ಸೋಮವಾರ ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಸಂತಶ್ರೇಷ್ಠ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಕನಕದಾಸರು ಬಾಲ್ಯದಲ್ಲಿ ಅಪಾರ ದೈವಭಕ್ತಿಯನ್ನು ಹೊಂದಿ ದ್ದರು.ದೇವರಿಲ್ಲದ ಸ್ಥಳವೇ ಇಲ್ಲಾ, ದೇವರು ನಮ್ಮ ಸರಿ-ತಪ್ಪುಗಳನ್ನು ಗಮನಿಸು ತ್ತಿರುತ್ತಾನೆ. ಸರಿದಾರಿಯಲ್ಲಿ ನಡೆದಾಗ ಮಾತ್ರ ದೇವರಿಗೆ ನಾವು ಪ್ರಿಯವಾಗುತ್ತೇವೆ ಎಂದು ನಂಬಿದ್ದರು.
ಕನಕದಾಸರ ನಂಬಿಕೆಯoತೆ ನಾವು ಮಾಡುವ ಪ್ರತಿಯೊಂದು ಕೆಲಸವನ್ನು ನಮ್ಮ ಸುತ್ತಮುತ್ತಲಿನ ಜನ ಗಮನಿಸುತ್ತಿರುತ್ತಾರೆ ಎಂಬ ಎಚ್ಚರಿಕೆ ಇರಬೇಕು. ಯಾವುದೇ ಕೆಲಸವಾಗಲಿ ಶ್ರದ್ಧೆ- ಭಕ್ತಿಯಿಂದ ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರಲ್ಲದೆ ಕನಕದಾಸರ ಜೀವನ ಮೌಲ್ಯಗಳನ್ನು ನಾವೆಲ್ಲರೂ ಸ್ಮರಿಸಿ ಪಾಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಕನಕದಾಸರು ಕವಿಯಾಗಿ, ಸಂತನಾಗಿ, ಸಮಾಜ ಸುಧಾರಕರಾಗಿ ಸಾರ್ವತ್ರಿಕ ಮೌಲ್ಯಗಳನ್ನು ತಿಳಿಸಿದರು. ಕನಕ ದಾಸರ ಸಾರ್ವಕಾಲಿಕ ಸತ್ಯಗಳನ್ನು ನಾವೆಲ್ಲರೂ ತಿಳಿದು ಬದುಕಬೇಕು ಎಂದು ಹೇಳಿದರು .
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ.ಮಾತನಾಡಿ, ದಾಸಸಾಹಿತ್ಯ ಮತ್ತು ವಚನಸಾಹಿತ್ಯದ ಮೂಲಕ ಸಮಾಜದ ಅಂಕು-ಡೊoಕುಗಳನ್ನು ತಿದ್ದುವ ಕೆಲಸ ಮಾಡಿದ ಶ್ರೇಷ್ಠ ಸಂತ ಕನಕ ದಾಸರ ಸಾಹಿತ್ಯದ ವಿಚಾರಧಾರೆಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಜನಸಾಮಾನ್ಯರೊಂದಿಗೆ ಬದುಕಿ ಜನರಿಗೆ ಸನ್ಮಾರ್ಗದಲ್ಲಿ ನಡೆಯುವುದನ್ನು ಕಲಿಸಿದ ಕನಕ ದಾಸರ ಕೀರ್ತನೆಗಳು ಈಗಲೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜಸೇವೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಕೀಲರು ಮತ್ತು ಸಮಾಜ ಸೇವ ಕರಾದ ಆರ್.ತಿಪ್ಪೇಸ್ವಾಮಿ ಅವರನ್ನು ಜಿಲ್ಲಾಡಳಿತದ ಪರವಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಸನ್ಮಾನಿಸಿದರು.
ವೇದಿಕೆಯಲ್ಲಿ ಶ್ರೀಶ್ರೀ ಬಿಂಧುಶೇಖರ ಒಡೆಯರ್ ಮಹಾಸ್ವಾಮಿಗಳು ಅಶ್ವಿಜ ಬಿ.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ.,ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ಈಶ್ವರ್ ಕು. ಮಿರ್ಜಿ, ಡಾ|| ಎಂ.ಆರ್.ಹುಲಿನಾಯ್ಕರ್, ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
———–ಚಂದ್ರ ಚೂಡ