ತುಮಕೂರು-ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಎನ್.ಬಿ. ರಾಜಶೇಖರ್-ಉಪಾಧ್ಯಕ್ಷ ರಾಗಿ ಕೆಂಪಹನುಮಯ್ಯ ಅವಿರೋಧ ಆಯ್ಕೆ

ತುಮಕೂರು-2025-26 ರಿಂದ 2029-30ನೇ ಸಾಲಿಗೆ ನಡೆದ ತಾಲ್ಲೂಕು ಕೃಷಿ ಸಮಾಜ ಮತ್ತು ಜಿಲ್ಲಾ ಕೃಷಿ ಸಮಾಜದ ಚುನಾವಣೆಯಲ್ಲಿ ಈ ಕೆಳಕಂಡ ಪದಾಧಿಕಾರಿಗಳು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

ಮುಂದಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯಿಂದ ಮಾತ್ರ ನಾಮಪತ್ರ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಸಮಾಜದ ಅಧ್ಯಕ್ಷರು,ಉಪಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹನುಮಂತರಾಜು ಹಾಗೂ ಸಹಾಯಕ ಚುನಾವಣಾಧಿಕಾರಿ ದೇವರಾಜು ತಿಳಿಸಿದ್ದಾರೆ.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ನಂದಿಹಳ್ಳಿಯ ಎನ್.ಬಿ. ರಾಜಶೇಖರ್, ಉಪಾಧ್ಯಕ್ಷರಾಗಿ ಚಿಕ್ಕಕೊರಟಗೆರೆಯ ಕೆಂಪಹನುಮಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಜಿ. ಲಕ್ಷ್ಮೀನರಸೇಗೌಡ ಉರುಪ್ ಜಿ. ರಮೇಶ್, ಖಜಾಂಚಿಯಾಗಿ ಹೊಸೂರಿನ ಲಿಂಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಪ್ರತಿನಿಧಿಯಾಗಿ ಚಿಕ್ಕಣ್ಣದೇವರಹಟ್ಟಿಯ ಸಿ. ಪಾಪಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೊಳಲುಕುಂಟೆಯ ರಾಜಶೇಖರಯ್ಯ ಕೆ.ವಿ., ಊರ್ಡಿಗೆರೆ ಹೋಬಳಿ ಚಿಕ್ಕಹಳ್ಳಿಯ ವೀರಭದ್ರಯ್ಯ, ವಿದ್ಯಾನಗರದ ರಂಗಪ್ಪ ಕೆ., ಸೋರೆಕುಂಟೆಯ ಎಸ್.ಹೆಚ್. ರಮೇಶ್, ಐನಾಪುರದ ಎಸ್. ಬಸವರಾಜು, ಗಂಗಾ ನರ್ಸಿಂಗ್ ಹೋಂನ ಡಾ. ಹೆಚ್.ಬಿ.ಎಂ. ಹಿರೇಮಠ್, ಚೋಳೇನಹಳ್ಳಿಯ ನಾರಾಯಣಪ್ಪ, ಗೂಳಹರಿವೆ ಹೆಚ್. ಕೃಷ್ಣಯ್ಯ, ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ ಎ.ಕೆ.ಕಾವಲ್‌ನ ಟಿ.ಎಂ. ಗರುಡಯ್ಯ, ಸಿರಿವಾರದ ಎಸ್.ಬಿ. ಶ್ರೀನಿವಾಸ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?