ತುಮಕೂರು:ಬೆಳ್ಳಾವಿ ಕ್ಷೇತ್ರದ ಮಾಜಿ ಶಾಸಕ ಕಾಂಗ್ರೆಸ್ ಹಿರಿಯ ಮುಖಂಡ ನಾರಾಯಣ್ ನಿಧನಕ್ಕೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಾರಾಯಣ್ ಒಬ್ಬರು ನಿಷ್ಠಾವಂತ ಕಾಂಗ್ರೆಸ್ ಕಟ್ಟಾಳು, ಎಸ್.ಎo.ಕೃಷ್ಣ,ದೇವರಾಜಅರಸು,ಕಾoಗ್ರೆಸ್ ನ ಹಿರಿಯ ರೊಂದಿಗೆ ನೇರ ಸಂಪರ್ಕವಿತ್ತು,3 ಬಾರಿ ಶಾಸಕರಾಗಿ ರಾಜ್ಯ ಗೃಹಮಂಡಳಿ ಅಧ್ಯಕ್ಷರಾಗಿದ್ದರು.ಬಡವರ ಪರ,ನೊಂದವರ ಪರ ಸದಾ ಮಿಡಿಯುತ್ತಿದ್ದರು.ಅವರು ವೃತ್ತಿಯಲ್ಲಿ ವಕೀಲರಾಗಿ ನಂತರ ಶಾಸಕರಾಗಿ ಎಲ್ಲರ ಮನಗೆದ್ದಿದ್ದರು. ನಿಧನರಾಗಿರುವುದು ಸಮಾಜಕ್ಕೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ.
ತುಮಕೂರು ಜಿಲ್ಲಾ ವಕೀಲರ ಸಂಘದಿoದ ಇಂದು ಮಾಜಿ ಶಾಸಕ ನಾರಾಯಣ್ ನಿಧನಕ್ಕೆ ವಕೀಲರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಶೋಕಾಚರಣೆ ನಡೆಸಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ ಮಾತನಾಡಿ ನಾರಾಯಣ್ ರವರು ವಕೀಲರಾಗಿ ಬಡವರ ಪರ ಸದಾ ಕಾನೂನು ಹೋರಾಟ ನಡೆಸುತ್ತಿದ್ದರು, ಸಮಾಜಮುಖಿಯಾಗಿ ನೊಂದವರ, ಧ್ವನಿ ಇಲ್ಲದವರ ಧ್ವನಿಯಾಗಿದ್ದರು ಅವರ ನಿಧನ ಸಮಾಜಕ್ಕೆ, ವಕೀಲರ ಸಮೂಹಕ್ಕೆ ದೊಡ್ಡ ಆಘಾತ ನೀಡಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರಗೌಡ,ತಿಪಟೂರು ಜೆಡಿಎಸ್ ಮುಖಂಡ ಶಾಂತಕುಮಾರ್,ಹಿರಿಯ ವಕೀಲರಾದ ಬಿ.ಆರ್.ರಾಮಕೃಷ್ಣಯ್ಯ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
———————-ಕೆ.ಬಿ ಚಂದ್ರಚೂಡ