ತುಮಕೂರು-ನಮ್ಮ ದೇಶದಲ್ಲಿದ್ದ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವಲ್ಲಿ ವಿಶ್ವಮಾನವ ಬ್ರಹ್ಮಶ್ರೀ ನಾರಾಯಣಗುರು ಅವರ ಪಾತ್ರ ಅತ್ಯಂತ ದೊಡ್ಡದು.ಅಂದಿನ ಜನಜೀವನ ಆಧುನಿಕತೆಯಿಂದ ವಂಚಿತವಾಗಿತ್ತು,ಆ ಕ್ಲಿಷ್ಠ ಸಂದರ್ಭದಲ್ಲಿಯೂ ಸಹ ಬ್ರಹ್ಮಶ್ರೀ ನಾರಾಯಣಗುರುಗಳು ದೇಶದ ನಾನಾ ಕಡೆ ಪಾದಯಾತ್ರೆ ಮಾಡಿ ಜನರಲ್ಲಿದ್ದ ಮೂಡನಂಬಿಕೆಗಳನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಎನ್.ಕೆ.ನಿಧಿಕುಮಾರ್ ತಿಳಿಸಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ತುಮಕೂರು ನಗರದ ಅಮಾನಿಕೆರೆ ಪಾರ್ಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವಮಾನವ ಬ್ರಹ್ಮಶ್ರೀ ನಾರಾಯಣಗುರು ಅವರ 170’ನೇ
ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾರಾಯಣಗುರು ಅವರ ಆದರ್ಶಗಳು ಹಾಗೂ ಅವರು ಈ ಭೂಮಿಗೆ ನೀಡಿರುವ ಕೊಡುಗೆಗಳು ಅಪಾರವಾದವು.ಅವರಿಗೆ ದಲಿತರೆಂದರೇ ಎಲ್ಲಿಲ್ಲದ ಪ್ರೀತಿ.ವಾತ್ಸಲ್ಯವಿತ್ತು.ಅವರ ಬೋಧನೆಗಳಲ್ಲಿ ದೇವರು ಒಬ್ಬನೇ ನಾಮ ಹಲವು, ಮತ್ತೊಬ್ಬರಿಗೆ ಸಹಾಯ ಮಾಡುವುದರ ಮೂಲಕ ಅವರ ನಗುವಿನಲ್ಲಿ ದೇವರನ್ನು ಕಾಣಬೇಕು, ಮತ್ತೊಬ್ಬರಿಗೆ ಕೆಡುಕನ್ನು ಬಯಸದೇ ಸದಾ ಒಳ್ಳೆಯತನದಿಂದ ಜೀವನ ನಡೆಸಿದರೆ ಸಾರ್ಥಕ ಜೀವನ ನಡೆಸಿದಂತೆ ಆಗುತ್ತದೆ ಎಂಬ ಅಮಾಶಗಳು ಪ್ರಮುಖವಾಗಿರುತ್ತಿದ್ದವು ಎಂದರು.
ಈಡಿಗ ಸಮುದಾಯವು ಆಗಿನ ಕಾಲಘಟ್ಟದಲ್ಲಿ ನಗರ ಜೀವನದಿಂದ ಬಹಳ ದೂರದಲ್ಲಿಯೇ ವಾಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ಹೋಗಲಾಡಿಸಿ ಸಾಮಾಜಿಕ ಜನಜೀವನ ನಡೆಸಲು ನಾರಾಯಣಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರಲ್ಲದೇ ಇಂತಹ ಮಹಾನ್ ಚೇತನರ ಜನ್ಮದಿನೋತ್ಸವವನ್ನು ಆಚರಿಸುತ್ತಿರುವುದು ನಮ್ಮ ಸುದೈವ ಎಂದರು.
ಈ ಸಂದರ್ಭದಲ್ಲಿ ಆಗಮಿಸಿದ್ದ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ದಲಿತ ಕ್ರಿಯ ಸಮಿತಿ ಜಿಲ್ಲಾ ಅಧ್ಯಕ್ಷರಾದ ಎನ್.ಕೆ.ನಿಧಿ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಇಂದ್ರಕುಮಾರ್ ಡಿ.ಕೆ. ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷರಾದ ದಿವಾಕರ್, ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣ್ ಎಸ್, ಜಿಲ್ಲಾ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ಸಹ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಕೆ.ಎನ್, ನಗರಾಧ್ಯಕ್ಷರಾದ ಶ್ರೀನಿವಾಸ್.ಡಿ. ಆರ್, ಪದಾಧಿಕಾರಿಗಳಾದ ಇಮ್ರಾನ್, ವಿನಯ್, ನಾಗರಾಜ್,ಕುಮಾರ್, ಗಂಗಾಧರ್ ಜಿ.ಆರ್, ರಂಗಸ್ವಾಮಯ್ಯ, ದರ್ಶನ್,ಗೋವಿಂದರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.