ತುಮಕೂರು:ಸಮಾಜದ ಅಸಮಾನತೆ ದೂರಾಗಬೇಕು,ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು ಎಂಬ ಸoದೇಶ ಸಾರಿದ ಮಹರ್ಷಿ ನಾರಾಯಣ ಗುರುಗಳು ಧ್ವನಿ ಇಲ್ಲದ ಸಮಾಜದ ಧ್ವನಿಯಾಗಿ ಮೂಡಿಸಿದರು.ಅವರ ತತ್ವ,ಆದರ್ಶಗಳನ್ನು ಅನುಸರಿಸಿಕೊಂಡು ಆದರ್ಶ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕರಿಸ ಬೇಕು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಜಿಲ್ಲಾ ಆರ್ಯ ಈಡಿಗರ ಸಂಘ, ಬ್ರಹ್ಮರ್ಷಿ ನಾರಾಯಣ ಗುರು ಜಿಲ್ಲಾ ಜಯಂತೋತ್ಸವ ಸಮಿತಿ, ಜಗದ್ಗುರು ನಾರಾಯಣ ಗುರು ಸಮಾಜ ಟ್ರಸ್ಟ್, ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಶನಿವಾರ ನಗರದ ಡಾ.ಗುಬ್ಬಿ ವೀರಣ್ಣ ರಂಗಮoದಿ ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವರು,ನಾರಾಯಣ ಗುರು, ಬುದ್ಧ, ಬಸವಣ್ಣ,ಅಂಬೇಡ್ಕರ್ ಅಂತಹವರು ಮಾನವ ಕಲ್ಯಾಣಕ್ಕಾಗಿ ದೇವರ ಮತ್ತೊಂದು ರೂಪದಲ್ಲಿ ಅವತರಿಸಿ ಬಂದ್ದಿದ್ದಾರೆ ಎಂಬ ಭಾವನೆ ವ್ಯಕ್ತಪಡಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಕರಾಳ ಜಾತಿ ವ್ಯವಸ್ಥೆಯ ಕಾಲದಲ್ಲಿ ನಾರಾಯಣ ಗುರುಗಳು ಎಲ್ಲಾ ಜಾತಿಯವರು ಸಮಾನರು ಎಂಬ ಸಂದೇಶ ಸಾರಿದ್ದರು. ಆಗಿನ ಕಠಿಣ ಕಟ್ಟುಪಾಡುಗಳ ವಿರುದ್ಧ ಜನಜಾಗೃತಿ ಮೂಡಿಸಿ ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದ್ದರು. ಇವರು ಒಂದು ಜಾತಿಗೆ ಸೀಮಿತವಲ್ಲ, ಎಲ್ಲಾ ಸಮಾಜದ ಗೌರವಕ್ಕೆ ಪಾತ್ರರು. ಈಗಲೂ ಅಂತಹ ಕರಾಳ ಆಚರಣೆಗಳು ಕೆಲವು ಕಡೆ ಮುಂದುವರೆದಿವೆ, ಇವು ಬದಲಾಗಬೇಕು ಎಂದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಸೇವಾ ಸಾಧಕರಿಗೆ ಈ ಸಂದರ್ಭದಲ್ಲಿ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಧು ಸಾಹುಕಾರ್, ಆರ್.ನಾರಾಯಣಸ್ವಾಮಿ, ನ್ಯಾತೇಗೌಡ, ಕರಾಟೆ ಕೃಷ್ಣಪ್ಪ, ಧನಿಯಾಕುಮಾರ್, ಉದ್ಯಮಿ ಟಿ.ಕೆ.ರವಿ, ಪಿ.ಎಂ.ಸoತೋಷ್ ಕುಮಾರ್ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ರೇಣುಕಾನಂದ ಸ್ವಾಮೀಜಿ ಸಮಾರಂಭದ ಸಾನಿಧ್ಯವಹಿಸಿದ್ದರು.ಎಂ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು.
ಅಜಯ್ಕುಮಾರ್,ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ,ಜೆ.ಪಿ.ಸುಧಾಕರ್, ಮಲ್ಲಸಂದ್ರ ಶಿವಣ್ಣ,ಆರ್. ನಾರಾಯಣಸ್ವಾಮಿ, ಹೆಚ್.ಎಂ.ಕುಮಾರ್, ಓ.ಎಲ್. ಪುರುಷೋ ತ್ತಮ್,ರವೀಂದ್ರಕುಮಾರ್, ನಾರಾಯಣ್, ಕೆ.ವೇದಮೂರ್ತಿ,ಎಂ.ಜಿ.ಶ್ರೀನಿವಾಸಮೂರ್ತಿ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು.