ತುಮಕೂರು:ಗ್ರಾಮೀಣ ಭಾಗದ ಅಮಾಯಕರ ಮೆಲಾಗುವ ದೌರ್ಜನ್ಯ ದಬ್ಬಾಳಿಕೆ ಸಾರಾಂಶವನ್ನು ‘ನಸಾಬ್’ ಚಿತ್ರ ಹೊಂದಿದೆ.ಶೋಷಿತ ಸಮುದಾಯ ಒಂದು ಸಾಂಪ್ರದಾಯಿಕ ಉಪ ಕಸಬನ್ನ ಜೀವನಕ್ಕೆ ಆಧಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ವೇಳೆ ಮೇಲ್ಜಾತಿ ಯವರು ಅವರ ಮೇಲೆ ಮಾಡುವ ದಬ್ಬಾಳಿಕೆಯನ್ನ ನಿರ್ದೇಶಕರು ಕಣ್ಣಿಗೆ ಕಟ್ಟುವಂತೆ ಮೂಡಿಸಿದ್ದಾರೆ ಎಂದು ಉಮಾಪ್ರಗತಿ ಕಾಲೇಜಿನ ನಿವೃತ್ತ ಅಧೀಕ್ಷಕ ಜೈ ಪ್ರಕಾಶ್ ತಿಳಿಸಿದರು.
ಪ್ರಶಾಂತ್ ಚಿತ್ರ ಮಂದಿರದಲ್ಲಿ ‘ನಸಾಬ್’ ಚಿತ್ರವನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸವರ್ಣೀಯರ ದೌರ್ಜನ್ಯ ದಬ್ಬಾಳಿಕೆ ವಿರುದ್ದ ಸಿಡಿದೆದ್ದ ನಾಯಕ ನಟನ ಕಥಾ ಹಂದರವೇ ‘ ‘ನಸಾಬ್’ ಚಿತ್ರ.
ಕೀರ್ತಿಕುಮಾರ್ ನಾಯ್ಕ್ ಅವರ ಕೃತಿ ಆಧಾರಿತ ಚಿತ್ರ ಇದಾಗಿದ್ದು ನಾಯಕ ನಟ/ನಿರ್ದೇಶಕ ಕೀರ್ತಿಕುಮಾರ್ ಎರಡು ಹಂತದಲ್ಲೂ ಅದ್ಭುತ ಕೆಲಸವನ್ನು ಮಾಡಿದ್ದಾರೆ.ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಿ ನವ ಯುವಕರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ನಾಯಕ ನಟ ಹಾಗೂ ನಿರ್ದೇಶಕ ಕೀರ್ತಿ ಕುಮಾರ್ ರವರ ತಂದೆ ಕೀಶೋರ್ ಕುಮಾರ್ ನಾಯ್ಕ್ ಮಾತನಾಡಿ,ಕೆ.ಸುಜಾತ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಕುಗ್ರಾಮಗಳಲ್ಲಿ ಇಂದಿಗೂ ಜೀವಂತವಿರುವ ಜಾತಿ ತಾರತಮ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಪ್ರತಿಯೊಬ್ಬರೂ ಈ ಸಿನಿಮವನ್ನು ನೋಡಿ ಬೆಂಬಲಿಸುವಂತೆ ಮನವಿ ಮಾಡಿದರು.
ತುಮಕೂರು ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಚಿತ್ರ ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿದರು.
ಚಿತ್ರ ಪ್ರದರ್ಶನಕ್ಕೂ ಮುನ್ನ ಪ್ರಶಾಂತ್ ಚಿತ್ರ ಮಂದಿರವನ್ನು ಶೃoಗರಿಸಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು,
ಚೇಳೂರು ಶಿವನಂಜಪ್ಪ, ವೆಂಕಪ್ಪ ನಾಯ್ಕ, ನರಸಿಂಹರಾಜು, ನರಸೀಯಪ್ಪ ಲಕ್ಕೇನಹಳ್ಳಿ ಮುಂತಾದವರು ಇದ್ದರು.