ತುಮಕೂರು:ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯಲ್ಲಿ ಔಷಧಿ ಸುರಕ್ಷತೆ, ಸೇವೆನೆ, ಅಡ್ಡ ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮ

ತುಮಕೂರು: ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಔಷಧಿ ಸೇವನೆಯ ಸುರಕ್ಷತೆ, ಔಷಧಿ ಸೇವೆನೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಅಡ್ಡ ಪರಿಣಾಮಗಳ ವೈದ್ಯಕೀಯ ಕ್ಷೇತ್ರದ ವೃತ್ತಿಪರರ ಪಾತ್ರಗಳ ಕುರಿತು ಆರೋಗ್ಯ ಜಾಗೃತಿ ಸಪ್ತಾಹ ಕಾರ್ಯಕ್ರಮ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಜರುಗಿತು.

ಫಾರ್ಮಕಾಲಜಿ ವಿಭಾಗದ ವೈದ್ಯರ ತಂಡ ಏರ್ಪಟ್ಟಿದ್ದ 4 ನೇ ರಾಷ್ಟ್ರೀಯ ಫಾರ್ಮಾಕೋವಿಜಿಲೆನ್ಸ್ ಸಪ್ತಾಹದ ಕಾರ್ಯಕ್ರಮವನ್ನು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ಬಿ.ಲಿಂಗೇಗೌಡ ಉದ್ಘಾಟಿಸಿ, ಔಷಧಿ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು, ಪ್ರತಿಕೂಲ ಔಷಧ ಪ್ರತಿಕ್ರಿಯೆಗಳನ್ನು ವರದಿ ಮಾಡುವುದು ಮತ್ತು ಸುರಕ್ಷಿತ ಆರೋಗ್ಯ ಅಭ್ಯಾಸಗಳನ್ನು ಉತ್ತೇಜಿಸಲು ಆರೋಗ್ಯ ವೃತ್ತಿಪರರು ಮಾಡಬೇಕಾದ ಮಹತ್ತರ ಕೆಲಸಗಳಾಗಿವೆ ಎಂದರು.

ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ್ ಬಿ.ಸಾನಿಕೋಪ್ ಅವರು ಮಾತನಾಡಿ, ರೋಗಿಗಳ ಆರೈಕೆಯನ್ನು ಸುಧಾರಿಸಲು ಮತ್ತು ಔಷಧಿಗಳನ್ನು ಸುರಕ್ಷಿತವಾಗಿ ಬಳಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣೆ ಮಾಡುವುದು ಮತ್ತು ಅದಕ್ಕೆ ಸಂಬoಧಿಸಿದoತೆ ವರದಿ ಮಾಡುವುದು ಸೂಕ್ತ. ಇದರಿಂದ ರೋಗಿಗಳಿಗೆ ಬೇಗ ಸುಧಾರಿಸಕೊಳ್ಳಲು ಸಹಾಯ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯಕರ್ತರು ಕ್ರಿಯಾತ್ಮಕವಾಗಿ ಕೆಲಸ ಮಾಡಬೆಕು ಎಂದರು.

ಉಪಪ್ರಾoಶುಪಾಲರಾದ ಡಾ. ಜಿ.ಎನ್ ಪ್ರಭಾಕರ್, ವೈದ್ಯಕೀಯ ಅಧೀಕ್ಷಕರಾದ ಡಾ. ಎನ್.ಎಸ್.ವೆಂಕಟೇಶ್ ಎಎಂಸಿ ಸಂಯೋಜಕರಾದ ಡಾ. ನವೀನ್ ಕುಮಾರ್ ಸಪ್ತಾಹದ ಸಂಯೋಜಕಿ ಮತ್ತು ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ನಂದಿನಿ ಟಿ., ಡಾ. ರಾಜೇಂದ್ರ ಪ್ರಸಾದ್ ಆರ್, ಡಾ.ಪವಿತ್ರ ಜಿ, ಡಾ.ಪದ್ಮಜಾ ಶೆಟ್ಟಿ ಕೆ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಔಷಧಿ ಸೇವೆನೆ ಮತ್ತು ಅಡ್ಡ ಪರಿಣಾಮಗಳ ಕುರಿತು ವಹಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ಈ ಸಪ್ತಾಹದಲ್ಲಿ ಸಂವಾದ, ಚರ್ಚೆ ನಡೆಸಲಾಗುವುದು.

Leave a Reply

Your email address will not be published. Required fields are marked *

× How can I help you?