ತುಮಕೂರು-ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿoದ ಪ್ರಥಮ ಬಾರಿಗೆ ಕಲ್ಪತರು ನಗರಿ ತುಮಕೂರು ಜಿಲ್ಲೆಯಲ್ಲಿ ಪತ್ರಕರ್ತರಿಗಾಗಿ ರಾಜ್ಯಮಟ್ಟದ ಸುವರ್ಣ ಸಂಭ್ರಮ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿದ್ದು ನವಂಬರ್ ನಲ್ಲಿ ನಡೆಯುವ ಕ್ರೀಡಾ ಕೂಟಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವಿವಿಧ ತಾಲೂಕುಗಳ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ಸದಸ್ಯರುಗಳ ಜೊತೆಯಲ್ಲಿ ತುರ್ತು ಸಭೆ ನಡೆಸಿ ಮಾತನಾಡಿದರು.
ಈಗಾಗಲೇ ಕ್ರೀಡಾಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಜಿ. ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ಸೇರಿದಂತೆ ವಿವಿಧ ಗಣ್ಯರು ಶುಭಕೋರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸುವರ್ಣ ಸಂಭ್ರಮ ಕ್ರೀಡಾಕೂಟ ಲಾಂಛನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ.
ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ತುಮಕೂರಿನಲ್ಲಿ ನಡೆಸಲು ನಿಶ್ಚಯಿಸಿರು ವುದರಿಂದ ಜನವರಿಯಲ್ಲಿ ಪತ್ರಕರ್ತರ ಸಮ್ಮೇಳನ ನಡೆಸುವಂತೆ ದಿನಾoಕ ನಿಶ್ಚಯ ಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುವ ಸುವರ್ಣ ಸಂಭ್ರಮ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಎಲ್ಲ ಪತ್ರಕರ್ತರ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು.
ಈಗಾಗಲೇ ಕ್ರೀಡಾoಗಣ ಸೇರಿದಂತೆ ಇದಕ್ಕೆ ಬೇಕಾಗುವ ಸರ್ವ ಸಿದ್ಧತೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಪತ್ರಕರ್ತರ ಸಂಘದ ವತಿಯಿಂದ ವಿವಿಧ ಸಮಿತಿಗಳನ್ನ ರಚನೆ ಮಾಡಿ ಹಲವು ಪತ್ರಕರ್ತರಿಗೆ ಮಹತ್ವದ ಜವಾಬ್ದಾರಿಗಳನ್ನು ನೀಡಲಾಗಿದೆ.
ತುಮಕೂರಿನಿಂದ ಪ್ರತಿನಿಧಿಸುವ ಕ್ರೀಡಾ ಅಭ್ಯರ್ಥಿಗಳನ್ನು ನವಂಬರ್ 17 ಅಂದರೆ ಭಾನುವಾರ ಆಯ್ಕೆ ಮಾಡಿಕೊಳ್ಳಲಾಗುವುದು.ಜಿಲ್ಲೆಯ ಆಸಕ್ತ ಪತ್ರಕರ್ತರು ತಮ್ಮ ವಿವಿಧ ನೆಚ್ಚಿನ ಕ್ರೀಡೆಗಳ ಹೆಸರನ್ನು ನೋಂದಾಯಿಸಿಕೊಳ್ಳಲು ಮತ್ತು ಅಭ್ಯಾಸದಲ್ಲಿ ನಿರತರಾಗಲು ಮತ್ತು ಅದಕ್ಕಾಗಿ ಕೋಚ್ ಗಳ ಸಹಾಯ ಪಡೆಯಲು ಅಣಿಯಾಗುವಂತೆ ಅವರು ಸೂಚನೆ ನೀಡಿದರು.
ನವಂಬರ್ 20ರಂದು ಜಿಲ್ಲಾಧ್ಯಂತ ಸಂಚಾರ ಮಾಡಲಿರುವ ರಾಜ್ಯಮಟ್ಟದ ಕ್ರೀಡಾ ಜ್ಯೋತಿಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಪ್ರಮುಖ ಗಣ್ಯರು ಚಾಲನೆ ನೀಡಲಿದ್ದಾರೆ. ಪ್ರತಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಕ್ರೀಡಾ ಜ್ಯೋತಿಯನ್ನು ತಾಲೂಕಿನ ಗಣ್ಯಮಾನ್ಯರು ಮತ್ತು ಕ್ರೀಡಾ ಸಾಧಕರು ಹಾಗೂ ಅಧಿಕಾರಿಗಳನ್ನು ಆಹ್ವಾನಿಸಿ ಅಭೂತಪೂರ್ವವಾಗಿ ಸ್ವಾಗತಿಸಿ, ಗೌರವಿಸಿ ಬಿಳ್ಕೊಡಬೇಕು.ಸುವರ್ಣ ಸಂಭ್ರಮ ಕ್ರೀಡಾಕೂಟದ ಬಗ್ಗೆ ಎಲ್ಲೆಡೆ ಪ್ರಚಾರ ಪಡಿಸುವಂತೆ ತಿಳಿಸಿದರು.
ಹಿರಿಯ ಪತ್ರಕರ್ತ ರಾಕ್ ಲೈನ್ ರವಿ ಮಾತನಾಡಿ ನ. 24ರಂದು ಸುವರ್ಣ ಸಂಭ್ರಮ ಕ್ರೀಡಾಕೂಟದ ಉದ್ಘಾಟನೆಗೊ ಮುನ್ನ ಕ್ರೀಡಾ ಜ್ಯೋತಿ ಸೇರಿದಂತೆ ವಿವಿಧ ಕ್ರೀಡಾ ಸಾಧಕರ ಮೆರವಣಿಗೆ ನಡೆಯಲಿದ್ದು ಈ ಮೆರವಣಿಗೆಯಲ್ಲಿ ರಾಜ್ಯದ ಮತ್ತು ಜಿಲ್ಲೆಯಿಂದ ಆಗಮಿಸುವ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.ಈ ಸಂದರ್ಭದಲ್ಲಿ ಎಲ್ಲ ಪತ್ರಕರ್ತರು ಭಾಗವಹಿಸಿ ಐಕ್ಯತೆ ಪ್ರದರ್ಶನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ್, ಉಪಾಧ್ಯಕ್ಷ ಶಾನ ಪ್ರಸನ್ನ, ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಶಾಂತರಾಜು ಅನು,ಕಾರ್ಯದರ್ಶಿ ಹಾರೋಗೆರೆ ಸತೀಶ್, ಸೇರಿದಂತೆ ಸಂಘದ ನಿರ್ದೇಶಕರುಗಳು ಹಾಗೂ ವಿವಿಧ ತಾಲೂಕಿನ ಅಧ್ಯಕ್ಷರು, ಉಪಾಧ್ಯ ಕ್ಷರುಗಳು ವಿವಿಧ ಸಮಿತಿಗಳ ಪತ್ರಕರ್ತರುಗಳು ಉಪಸ್ಥಿತರಿದ್ದರು.