ತುಮಕೂರು-ಅಮಿತ್ ಶಾ ರವರೆ ನಮಗೆ ಬಾಬಾಸಾಹೇಬ್ ಅಂಬೇಡ್ಕರ್ ರವರೇ ದೇವರು-ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಬ್ರಹತ್ ಪ್ರತಿಭಟನೆ-ಗಡಿಪಾರಿಗೆ ಆಗ್ರಹ

ತುಮಕೂರು-ಇತ್ತೀಚೆಗೆ ಭಾರತ ಸರ್ಕಾರದ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮೀತ್ ಶಾ ರವರು ಸಂಸತ್ ಅಧಿವೇಶನದಲ್ಲಿ ಮಾತನಾಡುವಾಗ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ|| ಬಿ.ಆರ್ ಅಂಬೇಡ್ಕರ್ ರವರ ಬಗ್ಗೆ ಅತ್ಯಂತ ಹಗುರವಾಗಿ ಬೇಜವಾಬ್ದಾರಿಯಿಂದ ಹಾಗೂ ನಾಲಿಗೆ ಮೇಲೆ ಹಿಡಿತವಿಲ್ಲದೇ ಅವಹೇಳನಕಾ ರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಇಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ತುಮಕೂರು ಜಿಲ್ಲಾ ಘಟಕದ ವತಿಯಿಂದ ತುಮಕೂರು ನಗರದ ಬಿ.ಜಿ.ಎಸ್. ವೃತ್ತ (ಟೌನ್ ಹಾಲ್ ವೃತ್ತದಲ್ಲಿ) ಬೃಹತ್ ಪ್ರತಿಭಟನೆಯನ್ನು ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಪ್ರತಿಭಟನೆಯನ್ನುದ್ದೇಶಿಸಿ ದಲಿತ ಕ್ರಿಯಾ ಸಮಿತಿ ಜಿಲ್ಲಾದ್ಯಕ್ಷರಾದ ಎನ್.ಕೆ.ನಿಧಿಕುಮಾರ್‌ರವರು ಮಾತನಾಡುತ್ತಾ,ಕೇಂದ್ರ ಸಚಿವರು ಸಂಸತ್ ಭವನದಲ್ಲಿ ಭಾಷಣ ಮಾಡುವ ಭರದಲ್ಲಿ ಅಂಬೇಡ್ಕರ್ ಹೆಸರು ಈಗ ಪ್ಯಾಷನ್ ಆಗಿದೆ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುತ್ತಿರುವ ಇವರೆಲ್ಲಾ ಇಷ್ಟು ಸಾರಿ ಭಗವಂತನ ಸ್ಮರಣೆ ಮಾಡಿದ್ದೇ ಆಗಿದ್ದಲ್ಲಿ 7 ಜನ್ಮದವರೆಗೆ ಸ್ವರ್ಗವಾದರೂ ದೊರೆಯುತ್ತಿತ್ತು ಎಂದು ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ ಡಾ|| ಬಿ.ಆರ್.ಅಂಬೇಡ್ಕರ್ ರವರ ಬಗ್ಗೆ ಇಷ್ಟೊಂದು ಹಗುರವಾಗಿ ನಾಲಿಗೆ ಹರಿಬಿಟ್ಟಿದ್ದಾರೆ. ಈ ಪ್ರತಿಭಟನೆಯ ಮೂಲಕ ಅಮೀತ್ ಶಾ ಗೆ ಒಂದು ಗಂಭೀರವಾದ ಎಚ್ಚರಿಕೆಯೊಂದನ್ನು ನಾವುಗಳು ರವಾನಿಸಬೇಕಾಗಿದೆ ಅದಕ್ಕಾಗಿ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದೆಂದರು.

ಮುoದುವರೆದು ಮಾತನಾಡುತ್ತಾ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರವರೇ ನಮಗೆ 7 ಜನ್ಮದ ಪುಣ್ಯ ಸ್ವರ್ಗ ಬೇಡವೇ ಬೇಡ, ನಮಗೆ ಸ್ವರ್ಗ ನರಕಗಳಲ್ಲಿ ನಂಬಿಕೆಯಿಲ್ಲ, ನಮಗೆ ಅಗತ್ಯವಿಲ್ಲ, ನಮಗೆ ಅಂದಿಗೂ, ಇಂದಿಗೂ ಎಂದೆoದಿಗೂ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ ಡಾ|| ಬಿ.ಆರ್ ಅಂಬೇಡ್ಕರ್ ಒಬ್ಬರೇ ಜ್ಞಾನದ ಖಣಜ, ಏಕೈಕ ದೇವರು. ಅದರಲ್ಲಿ ಎಂದಿಗೂ ರಾಜಿ ಇಲ್ಲ. ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ|| ಬಿ.ಆರ್ ಅಂಬೇಡ್ಕರ್‌ರವರ ಹೆಸರನ್ನು ನಮ್ಮ ಉಸಿರಾಗಿಸಿಕೊಂಡಿರುತ್ತೇವೆ. ನಮ್ಮ ಕೊನೆ ಉಸಿರು ಇರುವವರೆವಿಗೂ ಅಂಬೇಡ್ಕರ್‌ರವರ ಹೆಸರನ್ನು ಉಸಿರಾಗಿಸಿಕೊಳ್ಳುತ್ತೇವೆ ಎಂದು ಹೇಳಿದರಲ್ಲದೇ ಸಂವಿಧಾನ ಶಿಲ್ಪಿ, ಭಾರತ ರತ್ನ, ಬಾಬಾ ಸಾಹೇಬ ಡಾ|| ಬಿ.ಆರ್.ಅಂಬೇಡ್ಕರ್‌ರವರ ಬಗ್ಗೆ ಅತ್ಯಂತ ಅವಹೇಳನಕಾರಿಯಾದ ಹೇಳಿಕೆಯನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ನೀಡಿರುವುದು ಸಂವಿಧಾನ ಶಿಲ್ಪಿ, ಡಾ|| ಬಿ.ಆರ್.ಅಂಬೇಡ್ಕರ್‌ರವರ ಅನುಯಾಯಿಗಳಾದ ನಮ್ಮಗಳಿಗೆ ನೋವುಂಟಾಗಿದ್ದು ತಾವು ಸಾರ್ವಜನಿಕವಾಗಿ ಕ್ಷಮೆ ಕೇಳುವುದು ಇಲ್ಲವಾದಲ್ಲಿ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡುವವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಸಿಕೊoಡು ಹೋಗುತ್ತೇವೆಂದು ಆಗ್ರಹ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ದಲಿತಾ ಕ್ರಿಯಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದ್ರಕುಮಾರ್ ಮಾತನಾಡುತ್ತಾ, ಅಮಿತ್ ಶಾ ರವರೇ ನೀವೆಲ್ಲಾ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ರವರ ಸಾಧನೆ, ಏಳ್ಗೆ ಸಹಿಸದೇ ಅವರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ನಿಮ್ಮ ವಿಕೃತ ಮನಸ್ಥಿತಿ, ಅಶಿಸ್ತು ಪ್ರದರ್ಶನ ಮಾಡುತ್ತಿದ್ದೀರಾ, ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್‌ರವರನ್ನು ಮತ್ತವರ ಸಮುದಾಯಗಳನ್ನು ಒಪ್ಪಿಕೊಂಡು ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳಲು ನೀವು ಎಂದಿಗೂ ತಯಾರಿಲ್ಲ.ಇಡೀ ವಿಶ್ವವೇ ಒಪ್ಪಿಕೊಂಡು ವಿಶ್ವಸಂಸ್ಥೆಯು ಸಹ ಡಾ|| ಬಿ.ಆರ್ ಅಂಬೇಡ್ಕರ್ ರವರ ಜನ್ಮ ದಿನವಾದ ಏಪ್ರಿಲ್ 14ರ ದಿನವನ್ನು ವಿಶ್ವಜ್ಞಾನದ ದಿನವೆಂದು ಘೋಷಿಸಿದೆ ಎಂದರೆ ಅಂಬೇಡ್ಕರ್ ರವರು ಜ್ಞಾನದ ಸಂಕೇತವಲ್ಲವೇ? ನೀವು ಅವರ ಏಳ್ಗೆಯನ್ನು ಅರಗಿಸಿಕೊಳ್ಳಲಾಗದಂತ ಅಸೂಯೆ ನಿಮ್ಮಲ್ಲಿದೆ, ನೀವು ಹೇಳುವ ಸ್ವರ್ಗ, ದೇವರ ಸ್ಮರಣೆ ನಮಗೆ ಬೇಡ, ಅಂಬೇಡ್ಕರ್‌ರವರ ಹೆಸರೊoದೇ ಸಾಕು, ನಮಗೆ ಅದೇ ಶಕ್ತಿ, ಅದೇ ಚೈತನ್ಯ ಮತ್ತು ಸ್ಪೂರ್ತಿ, ಸಾವಿರಾರು ವರ್ಷಗಳಿಂದ ನೀವು ಹೇಳಿರುವ ದೇವರುಗಳನ್ನು ಪೂಜಿಸಿ ಸಾಕಾಯಿತು.ನಿಮ್ಮ ದೇವರು ನಮ್ಮನ್ನು ದೂರವೇ ಇಟ್ಟು, ಎಲ್ಲಾ ಕಡೆ ಎಲ್ಲರಂತೆ ನಮ್ಮನ್ನೂ ದೇವಾಲಯದೊಳಗೆ ಬಿಟ್ಟುಕೊಳ್ಳಲಿಲ್ಲ. ಮಾತ್ರವಲ್ಲ ದೇವಾಲಯದೊಳಗೆ ಸುಳಿದರೂ ನಮಗೆ ಕಷ್ಟ ಕೊಡುತ್ತಾ ದೌರ್ಜನ್ಯ ಮಾಡುತ್ತಿರುವುದು ಈಗಲೂ ಚಾಲ್ತಿಯಲ್ಲಿದ್ದು, ನಮ್ಮ ದೇವರಾದ ಅಂಬೇಡ್ಕರ್ ಬಂದ ಮೇಲೆ ಸ್ವರ್ಗ ಮೋಕ್ಷ ಎಲ್ಲವೂ ಲಭ್ಯವಾಗಿರುತ್ತವೆ ಎಂದರು.

ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ.ನರಸಿಂಹಮೂರ್ತಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕ ರ್‌ರವರ ವಿರುದ್ಧ ಹಗುರವಾಗಿ ಮಾತನಾಡುವ ಇವರು, ಸಂವಿಧಾನಕ್ಕೆ ಎಷ್ಟು ಮಾತ್ರ ಗೌರವ ನೀಡಬಲ್ಲರು? ಇಂತಹವರು ನಮ್ಮ ಸಮಾಜಕ್ಕೆ ಬೇಕಾ? ಅಂಬೇಡ್ಕರ್ ಯಾವುದೇ ಒಂದು ಸಮುದಾಯ ಅಥವಾ ಜಾತಿಗೆ ಸೀಮಿತರಾದ ವ್ಯಕ್ತಿಯಲ್ಲ, ಅವರು ವಿಶ್ವಮಾನವ, ಸರ್ವಜನರ ಸಂರಕ್ಷಕ, ಸಮಾನತೆಯ ಹರಿಕಾರ, ಪ್ರತಿಯೊಬ್ಬ ವ್ಯಕ್ತಿಯನ್ನೂ ಸಮಾಜದ ಮುಖ್ಯವಾಹಿನಿಗೆ ತಂದoತಹ ಧೀಮಂತ ವ್ಯಕ್ತಿ ಅವರ ಹೆಸರನ್ನು ಬಳಸಿಕೊಂಡು ಅವಹೇಳನಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ ಇಂತಹವರಿಗೆ ಸಂವಿಧಾನಾತ್ಮಕವಾಗಿ ಶಿಕ್ಷೆಯಾಗಲೇ ಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾಧಿಕಾರಿಗಳ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಸರ್ಕಾರದಿಂದ ವಜಾಗೊಳಿಸುವುದಲ್ಲದೇ ದೇಶದ ಗಡಿಪಾರು ಮಾಡಬೇಕೆಂಬ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದ್ರಕುಮಾರ್ ಡಿ, ಸಂಘಟನಾ ಕಾರ್ಯದರ್ಶಿ ದರ್ಶನ್ ಬಿ.ಆರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ.ಕೆ, ಎಸ್.ಎನ್.ಮಹದೇವ್, ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣ್ ಎಸ್, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ಎನ್.ವಿ, ಹನುಮನರಸಯ್ಯ, ಪರಮೇಶ್ ಡಿ.ಎನ್,ಸಿದ್ಧಲಿಂಗಯ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?