ತುಮಕೂರು-ಸ್ವಚ್ಛ ಭಾರತ ಶೂನ್ಯ ಪ್ರಗತಿ-ರಾಜ್ಯದ 30 ಜಿಲ್ಲೆಯ 318 ಪಿ.ಡಿ.ಒಗಳ ಅಮಾನತ್ತಿಗೆ ಶಿಫಾರಸು-ಹಲವು ಒತ್ತಡಗಳ ಮದ್ಯೆ ಗುರಿ ಸಾದಿಸಲಾಗಲಿಲ್ಲ ಎಂದು ಪಿ.ಡಿ.ಒ ಗಳು ಅಳಲು .

ಕೊರಟಗೆರೆ:-ಸ್ವಚ್ಛ ಭಾರತ ಯೋಜನೆ ಅಡಿ ಅನುದಾನ ಸದ್ಬಳಕೆಯಲ್ಲಿ ನಿರ್ಲಕ್ಷ್ಯವಹಿಸಿದ ಆರೋಪದಡಿ ರಾಜ್ಯದ 30 ಜಿಲ್ಲೆಗಳ 318 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳನ್ನ ಅಮಾನತ್ತು ಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಪಾರ ಮುಖ್ಯ ಕಾರ್ಯದರ್ಶಿ ಪ್ರತಿ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಶಿಫಾರಸ್ಸು ಮಾಡುವ ಮೂಲಕ ಪಿಡಿಒ ಗಳಿಗೆ ಶಾಕ್ ನೀಡಿದ್ದಾರೆ .

ಮಹಾತ್ಮ ಗಾಂಧಿ ಕಂಡಂತಹ ಸ್ವಚ್ಛ ಭಾರತ ಕನಸು ನನಸು ಮಾಡಲು ಅಕ್ಟೋಬರ್ 2ರ ಗಾಂಧಿಯವರ ಹುಟ್ಟುಹಬ್ಬದಂದು ದೇಶ ವ್ಯಾಪ್ತಿ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಗಾಂಧಿ ಕಂಡಂತಹ ಸ್ವಚ್ಛ ಭಾರತ್ ಕನಸು ನನಸು ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂದು ವಿಶೇಷ ಯೋಜನೆ ಅಡಿಯಲ್ಲಿ ಚಾಲನೆ ನೀಡಿದ್ದರು. ಇಡೀ ದೇಶಾದ್ಯಂತ ಸ್ವಚ್ಛತೆ ಕಾಪಾಡುವ ಗುರಿ ಹೊಂದಿದ ಸ್ವಚ್ಛ ಭಾರತ್ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಅಕ್ಟೋಬರ್ ಮಾಹೆಯಲ್ಲಿಯೇ ಪಿ ಡಿ ಓ ಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಪಾರ ಮುಖ್ಯ ಕಾರ್ಯದರ್ಶಿ ಚಾಟಿ ಬೀಸಿ ಯೋಜನೆಯ ಅನುಷ್ಠಾನದಲ್ಲಿ ಶೂನ್ಯ ಸಾಧನೆಗಳಿಸಿದ ಪಿಡಿಒಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.

ರಾಜ್ಯದ 30 ಜಿಲ್ಲೆಗಳ 318 ಗ್ರಾಮ ಪಂಚಾಯತಿ ಪಿ ಡಿ ಓ ಗಳನ್ನ ಅಮಾನತ್ತುಗೊಳಿಸಲು ಶಿಫಾರಸ್ಸು ನೀಡಲಾಗಿದ್ದು ಅದರಲ್ಲಿ ತುಮಕೂರು ಜಿಲ್ಲೆಯಿಂದಲೇ 25‌ ಜನ ಪಿಡಿಒಗಳ ಅಮಾನತ್ತಿಗೆ ಶಿಫಾರಸ್ಸು ಮಾಡಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಪಾರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಆಗಸ್ಟ್ 2024ರ ಎಂ ಪಿಕ್ ಸಭೆಯಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ಬೇಡಿಕೆಗೆ ಅನುಗುಣವಾಗಿ ಅನುದಾನ ಬಿಡುಗಡೆಯಾಗಿದೆಯಾದರೂ ಸಹ ವೆಚ್ಚ ಮಾಡದೆ ಹೆಚ್ಚು ಅನುದಾನ ಬಾಕಿ ಉಳಿಸಿಕೊಂಡಿರುವ ಗ್ರಾಮ ಪಂಚಾಯತ್ ಪಿಡಿಒಗಳ ಮೇಲೆ ಕ್ರಮ ತೆಗೆದುಕೊಳ್ಳಲು ಅಪಾರ ಮುಖ್ಯ ಕಾರ್ಯದರ್ಶಿ ಆಯಾ ಜಿಲ್ಲಾವಾರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪಿಡಿಓಗಳನ್ನ ಅಮಾನತ್ತು ಮಾಡಲು ಸೂಚನೆ ನೀಡಿದ್ದಾರೆ.

ರಾಜ್ಯದ ಜಿಲ್ಲಾ ವಾರು ಅಂಕಿ ಸಂಖ್ಯೆಗಳು

ರಾಜ್ಯದ 30 ಜಿಲ್ಲೆಗಳಿಂದ 318 ಪಿಡಿಒ ಅಧಿಕಾರಿಗಳನ್ನ ಅಮಾನತ್ತುಗೊಳಿಸಲು ಶಿಫಾರಸು ನೀಡಲಾಗಿದ್ದು ಇದರಲ್ಲಿ ತುಮಕೂರು ಜಿಲ್ಲೆಯಿಂದ 25, ಬಾಗಲಕೋಟೆ 8, ಬೆಂಗಳೂರು ರೂರಲ್ 12, ಬೆಂಗಳೂರು ನಗರ 4 ,ಬೆಳಗಾವಿ 24 ,ಬಳ್ಳಾರಿ 2,ಬೀದರ್ 12, ಚಾಮರಾಜನಗರ 1, ಚಿಕ್ಕಬಳ್ಳಾಪುರ 6, ಚಿಕ್ಕಮಂಗಳೂರು 5, ಚಿತ್ರದುರ್ಗ 7 ,ದಾವಣಗೆರೆ 11 ,ಧಾರವಾಡ 2 ,ಗದಗ್ 17, ಹಾಸನ್ 8 ,ಹಾವೇರಿಯ 3 ,ಕಲಬುರ್ಗಿ 21, ಕೊಡಗು 8, ಕೋಲಾರ 22, ಕೊಪ್ಪಳ 7 , ಮಂಡ್ಯ 18 , ಮೈಸೂರು 19 , ರಾಯಚೂರು 3, ರಾಮನಗರ 4, ಶಿವಮೊಗ್ಗ 8, ಉಡುಪಿ 8 ,ಉತ್ತರ ಕರ್ನಾಟಕ 6, ವಿಜಯನಗರ 20 ,ವಿಜಯಪುರ 18 ,ಯಾದಗಿರಿ 9 ಜನರನ್ನ ಅಮಾನತುಗೊಳಿಸಲು ಆದೇಶ ಹೊರಡಿಸಲಾಗಿದೆ.

ತುಮಕೂರುಜಿಲ್ಲೆಯಲ್ಲಿ ಅಮಾನತ್ತು ಬೀತಿಯಲ್ಲಿರುವ ಪಿಡಿಒ ಪ್ರತಿನಿಧಿಸುವ ಗ್ರಾ‌ಮ ಪಂಚಾಯಿತಿಗಳು

ತುಮಕೂರು ಜಿಲ್ಲೆಯಲ್ಲಿ 25 ಗ್ರಾಮ ಪಂಚಾಯಿತಿಗಳ ಪಿಡಿಒಗಳ ಅಮಾನತ್ತಿಗೆ ಶಿಫಾರಸು ಮಾಡಿದ್ದು ಶೂನ್ಯ ಪ್ರಗತಿ ಸಾಧಿಸಿದ ಕೆಂಪನಹಳ್ಳಿ , ವಡ್ಡಗೆರೆ, ಚಿಕ್ಕದಾಳವಾಟ, ಕೊಂಡವಾಡಿ, ಎತ್ತೇನಳ್ಳಿ, ಕೊಡ ಗಿಹಳ್ಳಿ, ಸಿದ್ದಾಪುರ,ಮಿಡಿಗೇಶಿ, ಸೀತಕಲ್ಲು , ದಸೂಡಿ , ನಡೇಮಾವಿನಪುರ, ಯಾದವಣೆ, ಬಾಗೇನಹಳ್ಳಿ, ಮುದ್ದೇನಹಳ್ಳಿ, ಬಿಳಿದೇವಾಲಯ, ಪಡವಗೆರೆ, ಊರ್ಡಿಗೆರೆ, ಕಂಡಿಕೆರೆ, ಚೆನ್ನಗವರ, ಉಜ್ಜಿನಿ, ಮಾವಿನಕೆರೆ, ಹುಲಿಯೂರುದುರ್ಗ, ಹೂನ್ನೇಬಾಗಿ, ಜಿನ್ನಗರ, ಕಿತ್ತಮಂಗಲ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೂನ್ಯ ಆರ್ಥಿಕ ಪ್ರಗತಿ ಸಾಧಿಸಲಾದ ಗ್ರಾಮ ಪಂಚಾಯತಿಗಳು ಎಂದು ಗುರುತಿಸಲಾಗಿದ್ದು, ಇಲ್ಲಿನ ಆಡಳಿತ ಅಧಿಕಾರಿ ಪಿಡಿಒಗಳನ್ನ ಅಮಾನತುಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಪಾರ ಮುಖ್ಯ ಕಾರ್ಯದರ್ಶಿ ಶಿಸ್ತು ಕ್ರಮ ಜರುಗಿಸಿ ಅಮಾನತುಗೊಳಿಸುವಂತೆ ಸಂಬಂಧಪಟ್ಟ ಆಯಾ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದು ಅತ್ತೀ ಶೀಘ್ರವಾಗಿ ಇಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಲು ಸೂಚಿಸಿ ಆದೇಶ ಹೊರಡಿಸಿದೆ.

ಇವೆಲ್ಲವುಗಳ ಬೆಳವಣಿಗೆಯ ನಂತರ ಕೆಲವು ಗ್ರಾಮ ಪಂಚಾಯಿತಿ ಪಿಡಿಒಗಳು ತಮ್ಮ ಕಾರ್ಯ ವ್ಯಾಪ್ತಿಯ ಒತ್ತಡದ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದು,ತಳಹಂತದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಹಳ ತೀವ್ರತರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದು ಸಿಬ್ಬಂದಿಯ ಕೊರತೆ ಮೇಲಧಿಕಾರಿಗಳ ಒತ್ತಡ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ಒತ್ತಡ, ಮಾಹಿತಿ ಹಕ್ಕು ಕಾರ್ಯಕರ್ತರ ಒತ್ತಡ, ರಾಜಕಾರಣಿಗಳ ಒತ್ತಡ, ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶೌಚಾಲಯ ನಿರ್ಮಾಣ ಮಾಡಿಲ್ಲ ಎನ್ನುವ ಕಾರಣಕ್ಕೆ ಅಮಾನತ್ತಿಗೆ ಶಿಫಾರಸ್ಸು ಮಾಡಲಾಗಿದ್ದು ನಮ್ಮ ಗತಿ ಏನು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಗ್ರಾಮ ಪಂಚಾಯತಿಗಳಲ್ಲಿ ಪ್ರತಿಯೂಂದು ಯೋಜನೆಗಳ ಅನುಷ್ಠಾನಕ್ಕೆ ಭಾರತೀಯ ಆಡಳಿತಾತ್ಮಕ ಸೇವೆಯ ಅಧಿಕಾರಿಗಳಿದ್ದು, ಅವರು ತಮ್ಮ ಇಲಾಖೆಯ ಪ್ರಗತಿ ಸಾಧಿಸುವಂತೆ ತೀವ್ರತರವಾದ ಗುರಿಯನ್ನು ನಿಗದಿ ಮಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಒತ್ತಡವನ್ನು ಹೇರುತ್ತಿದ್ದಾರೆ. ವಾಸ್ತವವಾಗಿ ಪ್ರತಿಯೊಂದು ಯೋಜನೆಯು ಬೇಡಿಕೆ ಆಧಾರಿತ ಯೋಜನೆಯಾಗಿದ್ದು ಅದನ್ನು ಮರೆತಿರುವ ಮೇಲಾಧಿಕಾರಿಗಳು ಗುರಿ ಆಧಾರಿತವಾಗಿ ಒತ್ತಡವನ್ನು ಹೇರುತ್ತಿದ್ದಾರೆ. ವಾಸ್ತವದಲ್ಲಿ ಶೌಚಾಲಯದ ಹಣವನ್ನು ಪಾವತಿ ಮಾಡಲು ನಾಲ್ಕು ಆಪ್ ಗಳ ಮೂಲಕ ಮತ್ತು ಖಜಾನೆ ಎರಡರ ಮೂಲಕ ಕಾರ್ಯನಿರ್ವಹಿಸಬೇಕಾಗಿದ್ದು ಹಲವು ತಾಂತ್ರಿಕ ಸಮಸ್ಯೆಗಳು ತಲೆದೋರಿರುವುದರಿಂದ ನಿಗದಿಪಡಿಸಿದ ಸಮಯದಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳದ ಫಲಾನುಭವಿಗಳಿಗೆ ಹಣವನ್ನು ಮಂಜೂರು ಮಾಡಲು ಹೇಗೆ ಸಾಧ್ಯ ಎಂದು ಪಿಡಿಒಗಳು ಪ್ರಶ್ನಿಸಿದ್ದಾರೆ.

ಕೆಲಸದ ತೀವ್ರ ಒತ್ತಡವನ್ನು ತಾಳಲಾಗದೆ ಸುಮಾರು 14 ವರ್ಷಗಳಿಂದ 150ಕ್ಕೂ ಹೆಚ್ಚು ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಮಾನಸಿಕ ಒತ್ತಡ,ದೈಹಿಕ ಹಲ್ಲೆ,ಅಪಘಾತ,ಬಹು ಅಂಗಾಂಗ ವೈಕಲ್ಯತೆ,ಇನ್ನೂ ಹಲವು ಕಾರಣಗಳಿಂದ ಸಾವನ್ನಪ್ಪಿರುವುದು ಇಲಾಖೆ ಮತ್ತು ಸರ್ಕಾರದ ಗಮನಕ್ಕೆ ಬಂದಿದ್ದರೂ ಸಹ ನಮ್ಮ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿದೆ ಎಂದು ಕೆಲವು ಪಿಡಿಒಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

—————————–-ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?