ತುಮಕೂರು-ನಮ್ಮ ರೋಟರಿ ತುಮಕೂರಿನ 67 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ರಾಜೇಶ್ವರಿ ರುದ್ರಪ್ಪನವರು ಕಳೆದ 60 ದಿನಗಳಲ್ಲಿ ಈಗಾಗಲೇ 67 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಇವರು ಮಾಡುತ್ತಿರುವ ಎಲ್ಲಾ ಉಪಯುಕ್ತ ಕಾರ್ಯಕ್ರಮಗಳಿಂದ ಇತಿಹಾಸ ಸೃಷ್ಟಿಸುತ್ತಿದ್ದು ರೋಟರಿ ತುಮಕೂರಿಗೆ ಖ್ಯಾತಿಯನ್ನು ತರುತ್ತಿದ್ದಾರೆ ಎಂದು ರೋಟರಿ ಛಾರಿಟಬಲ್ ಟ್ರಸ್ಟ್ (ರಿ.)ನ ಅಧ್ಯಕ್ಷರಾದ ರೊ|| ಎಸ್.ಎಲ್.ಕಾಡದೇವರ ಮಠ್ ಅಭಿಪ್ರಾಯಪಟ್ಟರು.
ಅವರು ರೋಟರಿ ತುಮಕೂರು ಹಾಗೂ ರೋಟರಿ ತುಮಕೂರು ಛಾರಿಟಬಲ್ ಟ್ರಸ್ಟ್ (ರಿ.)ವತಿಯಿಂದ ನಗರದ ಸಿದ್ಧಗಂಗಾ ಆಸ್ಪತ್ರೆಯ ಆಡಿಟೋರಿಯಂನಲ್ಲಿ ಆಯೋಜಿಸಿದ್ದಸಂತೃಪ್ತಿಸೇವಾಸ್ಮರಣೆ ಅಂಗವಾಗಿ ಶಿಕ್ಷಕರಿಗೆ ಹಾಗೂ ಅಭಿಯಂತರರಿಗೆ ರೋಟರಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತ
ಅಧ್ಯಕ್ಷರಾದ ರಾಜೇಶ್ವರಿ ರುದ್ರಪ್ಪನವರು ಈ ವರ್ಷದಲ್ಲಿ 365 ಕಾರ್ಯಕ್ರಮಗಳನ್ನು ಮಾಡಲೇಬೇಕೆಂದು ಗುರಿಯನ್ನು ಹಾಕಿಕೊಂಡಿದ್ದು ಅವರು ಖಂಡಿತಾ ಗುರಿ ಮುಟ್ಟುತ್ತಾರೆಂಬ ಭರವಸೆ ನಮಗೆಲ್ಲಾ ಇದೆ. ಅವರಿಗೆ ಬೇಕಾದ ಎಲ್ಲಾ ಸಹಕಾರ ನಾವೆಲ್ಲಾ ನೀಡುತ್ತಿದ್ದೇವೆ. ನಮ್ಮ ರೋಟರಿ ಜಿಲ್ಲೆಯಲ್ಲಿ ಸುಮಾರು 80-85ಕ್ಲಬ್‌ಗಳನ್ನು ಒಳಗೊಂಡಿರುವ ನಮ್ಮ ರೋಟರಿ ತುಮಕೂರಿನಲ್ಲಿ ಅತಿದೊಡ್ಡ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ರೋಟರಿ ತುಮಕೂರಿಗೆ 67 ವರ್ಷ ತುಂಬಿದ ಸವಿನೆನಪಿಗಾಗಿ ಕೆಳವರ್ಗದಿಂದ ಬಂದ ವಿವಿಧ ಕ್ಷೇತ್ರಗಳ 67ಸಾಧಕರನ್ನು ಗುರುತಿಸುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದಾರೆ. ಜೀವಮಾನದಲ್ಲೇ ಪ್ರಶಸ್ತಿಯನ್ನೇ ನೋಡಿರದಂತಹ ನಿಜವಾದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ನಮ್ಮ ರೋಟರಿಯಲ್ಲಿ ಕಮ್ಯುನಿಟಿ ಸರ್ವೀಸ್, ಯೂತ್ ಸರ್ವೀಸ್, ಹೆಲ್ತ್,ಸರ್ವೀಸ್ ಮುಂತಾದ ಕಾರ್ಯಕ್ರಮಗಳಿವೆ. ಈಗಾಗಲೇ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆಯನ್ನು ಅಧ್ಯಕ್ಷರಾದ ರಾಜೇಶ್ವರಿ ರುದ್ರಪ್ಪನವರು ಯಶಸ್ವಿಯಾಗಿ ನಡೆಸಿದ್ದಾರೆಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಅಭಿಯಂತರರ ವಿಭಾಗದದಲ್ಲಿ ಸನ್ಮಾನವನ್ನು ಸ್ವೀಕರಿಸಿದ ರೋಟರಿ ಜಿಲ್ಲೆ 3192 ಡಿ.ಆರ್.ಎಫ್.ಸಿ.ಯ ಛರ‍್ಮನ್ ಆದ ರೊ|| ಸುರೇಶ್ ಎ. ರವರು ಮಾತನಾಡುತ್ತಾ “ನಾವು ಬೆಲ್ಜಿಯಂ ವ್ಹೀಲ್ ಛೇರ್‌ಗಳನ್ನು ಕೊಟ್ಟಿರಬಹುದು, ಆದರೆ ಅದಕ್ಕೆ ಅರ್ಹರಾದವರನ್ನು ಹುಡುಕಿಕೊಟ್ಟವರು ಕಾಡದೇವರಮಠ್‌ರವರು. ಒಬ್ಬ ಮನುಷ್ಯ ವ್ಯಕ್ತಿತ್ವದಿಂದ ಎತ್ತರಕ್ಕೆ ಏರಬೇಕಾದರೆ ಎಲ್ಲರ ಸಹಕಾರ ಬೇಕಾಗುತ್ತದೆ. ರೋಟರಿ ತುಮಕೂರಿನ ಅಧ್ಯಕ್ಷರಾದ ರಾಜೇಶ್ವರಿ ರುದ್ರಪ್ಪನವರ ಉತ್ಸಾಹ ನೋಡಿದರೆ ತುಂಬಾ ಖುಷಿಯಾಗುತ್ತದೆ. ನಾವು ಯಾರಿಗೆ, ಯಾವುದು ಅವಶ್ಯಕತೆ ಇದೆಯೋ ಅದನ್ನು ಮಾಡೋಣ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತುಮಕೂರು ಜಿಲ್ಲಾ ಅಧ್ಯಕ್ಷರಾದ ಹಾಗೂ ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥರಾದ ಡಾ||ಎಸ್.ಪರಮೇಶ್‌ರವರು ಮಾತನಾಡುತ್ತಾ “ತುಮಕೂರು ಜಿಲ್ಲೆಯಲ್ಲಿ ರೋಟರಿ
ತುಮಕೂರು ತುಂಬಾ ಹಳೆಯದಾಗಿದ್ದು ಹಲವಾರು ಅತ್ಯುತ್ತಮ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ರೋಟರಿಯಿಂದ ಮಾಡುವ ಆರೋಗ್ಯ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಯಾವಾಗಲೂ ಇರುತ್ತದೆ. ನಾನು
ರೋಟರಿ ತುಮಕೂರಿನ ಸದಸ್ಯನಾಗಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದರು.ಅಭಿಯಂತರರಾದ ಪ್ರಶಾಂತ್ ಕೂಡ್ಲಿಗಿ, ಕುಮಾರಸ್ವಾಮಿ, ರವಿ ಎನ್.ಕೆ., ರೊ||ಎ.ಸುರೇಶ್, ಚೇತನ್ ಮೂರ್ತಿ ಹಾಗೂ ಪ್ರಭಾಕರ್‌ರವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಹಾಗೂ ಉಪನ್ಯಾಸಕರಾದ ಡಾ|| ಬಿ.ಟಿ.ಸಂಪತ್‌ಕುಮಾರ್, ಡಾ|| ಮನೋಜ್ ಸಿ.ಆರ್., ಡಾ|| ಪವನಗಂಗಾಧರ ಹಾಗೂ ಶ್ರೀಮತಿ ಆಶಾಲತಾ ಎಸ್.ರವನ್ನು ಸನ್ಮಾನಿಸಲಾಯಿತು.
ಅಭಿಯಂತರರನ್ನು ರೊ|| ಸುದರ್ಶನ್ ಪರಿಚಯಿಸಿದರೆ, ಶಿಕ್ಷಕ ಹಾಗೂಉಪನ್ಯಾಸಕರನ್ನು ಶ್ರೀಮತಿ ಅನಿತಾ ನಾಗೇಶ್ ಪರಿಚಯಿಸಿದರು.ರೋಟೋಗ್ರಾಫ್ ಪತ್ರಿಕೆಯನ್ನುಬಿಡುಗಡೆ ಮಾಡಿದ ರೋಟರಿ ಜಿಲ್ಲೆಯ ಲೆಫ್ಟಿನೆಂಟ್ ಗವರ್ನರ್ ರೊ|| ಎಂ.ಎಸ್.ಉಮೇಶ್ ಮಾತನಾಡಿದರು. ಈ ಸಭೆಗೆ ಆಗಮಿಸಿದ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಿದ ರೊ|| ಚಂದ್ರಕಲಾ ಶಿವಕುಮಾರ್ ದಂಪತಿಗೆ ರೋಟರಿ ತುಮಕೂರಿನ ವತಿಯಿಂದ ಸನ್ಮಾನಿಸಲಾಯಿತು.
ರೊ|| ಚಂದ್ರಕಲಾ ಶಿವಕುಮಾರ್,ಪ್ರಾರ್ಥಿಸಿದರು, ರೋಟರಿ ತುಮಕೂರಿನ ಅಧ್ಯಕ್ಷೆ ರೊ|| ರಾಜೇಶ್ವರಿ ರುದ್ರಪ್ಪ
ಸ್ವಾಗತಿಸಿದರು. ರೋಟರಿ ತುಮಕೂರಿಗೆ ಎನ್.ಎಲ್.ಚಂದ್ರಶೇಖರ್, ಕಾವ್ಯಶೇಖರ್ ಹಾಗೂ ಡಾ||ಸಂಪತ್‌ಕುಮಾರ್ ಹೊಸ ಸದಸ್ಯರಾಗಿ ಸೇರ್ಪಡೆಗೊಂಡರು. ರೋಟರಿ ತುಮಕೂರಿನ ಕಾರ್ಯದರ್ಶಿಯಾದ ರೊ|| ನಾಗಮಣಿ ಪ್ರಭಾಕರ್ ವಂದಿಸಿದರು. ಜಂಟಿ ಕಾರ್ಯದರ್ಶಿಯಾದ ರೊ|| ಪ್ರಭಾ ವಸಂತ್ ಕಾರ್ಯಕ್ರಮ ನಿರೂಪಿಸಿದರು.