ತುಮಕೂರು:ರೋಟರಿ ತುಮಕೂರಿನ 67ನೇ ಸಂಸ್ಥಾಪನ ದಿನಾಚರಣೆಯನ್ನು ರೋಟರಿ ಅಧ್ಯಕ್ಷರಾದ ರೊ. ರಾಜೇಶ್ವರಿ ರುದ್ರಪ್ಪ ನವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ರೋಟರಿ ಮಾಜಿ ಜಿಲ್ಲಾ ಪಾಲಕರಾದ ರೊ.ಆಶಾ ಪ್ರಸನ್ನಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರೋಟರಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಎಸ್.ಎಲ್.ಕಾಡದೇವರಮಠ್ ರವರು ಪ್ರಾಸ್ತಾವಿಕ ನುಡಿಗಳ ನ್ನಾಡಿದರು.ಮುಖ್ಯ ಅತಿಥಿಗಳಾಗಿ ಶ್ರೀಮತಿ ಪ್ರಮೀಳಾಶಿವಕುಮಾರ್, ಸಹಾಯಕ ಪಾಲಕರು ಜಿಲ್ಲೆ 3192 ರೋಟರಿ ಲೆಫ್ಟಿನೆಂಟ್ ಗವರ್ನರ್ ಎಂ.ಎಸ್. ಉಮೇಶ್, ವಲಯ ಪಾಲಕರಾದ ಹೆಚ್.ಎಂ.ಪ್ರಕಾಶ್, ಜಿಲ್ಲಾಕಾರ್ಯದರ್ಶಿ ಬಿಳಿಗೆರೆಶಿವಕುಮಾರ್ ಉಪಸ್ಥಿತರಿದ್ದರು.
ರೋಟರಿ ನಡೆದು ಬಂದ ಹಾದಿಯ ಬಗ್ಗೆ ರೋಟರಿ ಮಾಜಿ ಅಧ್ಯಕ್ಷರುಗಳಾದ ರೊ.ನಾಗೇಶ್ ಕುಮಾರ್,ರೊ.ಜೈರಾಮ್ ಶೆಟ್ಟಿ ಹಾಗೂ ರೊ.ಸದಾ ಶಿವಯ್ಯನವರು ಮಾತನಾಡಿದರು.
ರೋಟರಿ ಸಂಸ್ಥೆ ಅಧ್ಯಕ್ಷರುಗಳು, ರೊಟೇರಿಯನ್ಸ್ ಗಳು, ಹಾಗೂ ರೋಟರಿ ತುಮಕೂರಿನ ಮಾಜಿ ಅಧ್ಯಕ್ಷರುಗಳು, ಮತ್ತು ಎಲ್ಲಾ ರೊಟೇರಿಯನ್ಸ್ ಗಳು ಭಾಗವಹಿಸಿದ್ದರು. ಕಾರ್ಯದರ್ಶಿ ನಾಗಮಣಿ ಪ್ರಭಾಕರ್ ಅವರು ಎಲ್ಲರನ್ನು ವಂದಿಸಿದರು.
ಚಾರ್ಟರ್ ಡೇ ಪ್ರಯುಕ್ತ ಒಬ್ಬ ಅಂಗವಿಕಲ ಮಹಿಳೆಗೆ ವೀಲ್ ಛೇರನ್ನು ನೀಡಲಾಯಿತು, ರೊಟೇರಿಯನ್ ಚಂದ್ರಕಲಾ ಶಿವಕುಮಾರ್,ಮಾಜಿ ಅಧ್ಯಕ್ಷರಾದ ರೋಟೇರಿಯನ್ ಬಸವರಾಜ್ ಹಿರೇಮಠ್ ಕುಟುಂಬದವರು ಉಪಸ್ಥಿತರಿದ್ದರು.
————-—–ಕೆ.ಬಿ ಚಂದ್ರಚೂಡ