ತುಮಕೂರು:ವಿವಾದ ರಹಿತ ವರ್ಣರಂಜಿತ ಐಟಿ-ಬಿಟಿ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದ ಪ್ರಬುದ್ಧ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎo.ಕೃಷ್ಣ ನಿಧನಕ್ಕೆ ತುಮಕೂರು ಜಿಲ್ಲೆಯ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಸಿದ್ದಗoಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ,ಹಿರೇಮಠದ ಡಾ||ಶ್ರೀ ಶಿವಾನಂದಶಿವಾಚಾರ್ಯಸ್ವಾಮೀಜಿ, ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮೀಜಿ,ಅಟವಿ ಶಿವಲಿಂಗಸ್ವಾಮೀಜಿ,ವೀರಶೈವ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ,ವೀರಶೈವ ಸಮಾಜದ ಅಧ್ಯಕ್ಷರಾದ ಟಿ.ಬಿ.ಶೇಖರ್,ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ,ಹಿರಿಯ ವಕೀಲರಾದ ಬಿ.ಆರ್. ರಾಮಕೃಷ್ಣಯ್ಯ (ಬಿಜವರ), ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದಸ್ವಾಮೀಜಿ,ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ,ಶ್ರೀ ಸಿದ್ಧಗoಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ||ಟಿ.ಬಿ.ನಿಜಲಿಂಗಪ್ಪ ಮತ್ತು ಪದಾಧಿಕಾರಿಗಳು,ಜಯನಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು,ಶಾಸಕರಾದ ಜಿ.ಬಿ.ಜ್ಯೋತಿಗಣೇಶ್,ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಸಚಿವರಾದ ವಿ.ಸೋಮಣ್ಣ,ಅಹಿಂದ ಮುಖಂಡರಾದ ಕೆಂಪರಾಜು,ಮಾಜಿ ಶಾಸಕ ಡಾ||ರಫೀಕ್ಅಹಮದ್,ಶಫಿಅಹಮದ್, ಡಿ.ಸಿ.ಗೌರಿಶಂಕರ್, ತಿಪಟೂರು ಜೆಡಿಎಸ್ ಮುಖಂಡರಾದ ಶಾAತಕುಮಾರ್,ಬೆಳ್ಳಿಲೋಕೇಶ್,ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ,ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು,ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ನರಸಿಂಹರಾಜು, ಮಾಜಿ ಪಾಲಿಕೆ ಸದಸ್ಯರಾದ ಎ.ಶ್ರೀನಿವಾಸ್,ಮಂಜುಳಾ ಆದರ್ಶ್,ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್, ವಕ್ತಾರರಾದ ಕೆ.ಎಂ.ಸುಜಾತ,ಮಾಧ್ಯಮ ಸಂಯೋಜಕರಾದ ತೋವಿನಕೆರೆ ಪುಟ್ಟರಾಜು ಇತರರು ತೀವ್ರ ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
—-—–ಕೆ.ಬಿ ಚಂದ್ರಚೂಡ