ತುಮಕೂರು-ನ.29ರಂದು ಸಹಕಾರ ರತ್ನಪ್ರಶಸ್ತಿ ಪ್ರಧಾನ ಸಮಾರಂಭ-ಸಹಕಾರ ದ್ವಜಾರೋಹಣ ನೆರವೇರಿಸಲಿರುವ ಕೇಂದ್ರ ಸಚಿವ ವಿ.ಸೋಮಣ್ಣ- ಟಿ.ಜಿ.ವೆಂಕಟೇಗೌಡ ಮಾಹಿತಿ

ತುಮಕೂರು:ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ,ಬೆoಗಳೂರು,ತುಮಕೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ.ನಿ, ಹಾಗೂ ತುಮಕೂರು ಜಿಲ್ಲಾ ಸಹಕಾರಿ ಯೂನಿಯನ್,ನಿ ತುಮಕೂರು ವತಿಯಿಂದ ನವೆಂಬರ್ 29 ರಂದು ಹೆಗ್ಗೆರೆಯ ಹೆಚ್.ಎಂ.ಗoಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸ್ವಯಂ ಚಾಲಿತ ಹಾಲು ಶೇಖರಣ ಘಟಕಗಳ ತಂತ್ರಾoಶ ಅನುಷ್ಠಾನ, ಕಾರ್ಯದರ್ಶಿಗಳಿಗೆ ತರಬೇತಿ ಮತ್ತು ಸಹಕಾರ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ ಎಂದು ಸಹಕಾರ ಯೂನಿಯನ್ ಅಧ್ಯಕ್ಷ ಟಿ.ಜಿ.ವೆಂಕಟೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಈ ಬಾರಿಯ ಸಹಕಾರಿ ಸಪ್ತಾಹದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪಡೆದಿರುವ ಹಿರಿಯ ಸಹಕಾರಿ ಧುರೀಣರು ಹಾಗೂ ನಿವೃತ್ತ ಅಧಿಕಾರಿಗಳನ್ನು ಗೌರವಿಸಲಾಗುವುದು ಎಂದರು.

ಸಹಕಾರ ದ್ವಜಾರೋಹಣವನ್ನು ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ,ಉದ್ಘಾಟನೆಯನ್ನು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್,ಅಧ್ಯಕ್ಷತೆಯನ್ನು ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ವಹಿಸಲಿದ್ದಾರೆ. ಸಹಕಾರ ವಾರಪತ್ರಿಕೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಟಿ.ದೇವೇಗೌಡ ಬಿಡುಗಡೆ ಮಾಡಲಿದ್ದು,ಕರ್ನಾಟಕ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಸಹಕಾರ ಪಿತಾಮಹರಿಗೆ ಪುಷ್ಪಾರ್ಚನೆ ನೆರವೇರಿಸುವರು ಎಂದರು.

ಈ ಬಾರಿ ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಜಿಲ್ಲೆಯ 18 ಜನರನ್ನು ಗುಬ್ಬಿ ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದು ವೆಂಕಟೇಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಗೋವಿಂದಕಾರಜೋಳ, ಡಾ.ಸಿ.ಎನ್.ಮಂಜುನಾಥ್,ಶಾಸಕರುಗಳಾದ
ಜಿ.ಬಿ.ಜ್ಯೋತಿಗಣೇಶ್, ಕೆ.ಷಡಕ್ಷರಿ, ಆರ್.ರಾಜೇಂದ್ರ,ಕೆ.ಎ.ತಿಪ್ಪೇಸ್ವಾಮಿ,ಎo.ಟಿ.ಕೃಷ್ಣಪ್ಪ, ಸುರೇಶ್ ಬಾಬು, ಬಿ.ಸುರೇಶಗೌಡ, ಡಾ.ಹೆಚ್.ಡಿ.ರಂಗನಾಥ್, ಹೆಚ್.ವಿ.ವೆಂಕಟೇಶ್, ಚಿದಾನಂದಗೌಡ,ಡಿ.ಟಿ.ಶ್ರೀನಿವಾಸ್, ಡಾ.ಎಂ.ಎನ್.ಅಜಯ ನಾಗಭೂಷಣ್, ಟಿ.ಹೆಚ್.ಎಂ.ಕುಮಾರ್ ಅವರುಗಳು ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಸಹಕಾರಿ ಧುರೀಣರಾದ ಕಲ್ಲಹಳ್ಳಿದೇವರಾಜು,ಲಕ್ಷ್ಮಿ ನಾರಾಯಣ್,ಸಿಂಗದಹಳ್ಳಿ ರಾಜಕುಮಾರ್,ನಾರಾಯಣಗೌಡ, ನಾಗೇಶಬಾಬು,ಸಿದ್ದಲಿಂಗೇಗೌಡ,ಕಾoತರಾಜು, ತುಮುಲ್ ಆಡಳಿತಾಧಿಕಾರಿ ಉಮೇಶ್, ತುಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸನ್ ಮತ್ತಿತರರು ಉಪಸ್ಥಿತರಿದ್ದರು.

—————–—–ವರದಿ: ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?