ತುಮಕೂರು:ಸಹಕಾರ ರತ್ನ ಮಲ್ಲಿಕಾರ್ಜುನಯ್ಯರಿಗೆ ಗೌರವ ಸಮ ರ್ಪಣೆ-ಸಹಕಾರ ರತ್ನ ಪ್ರಶಸ್ತಿ ತುಮಕೂರಿಗೆ ಸಿಕ್ಕ ಗೌರವ-ಎಸ್.ಜಿ. ಚಂದ್ರಮೌಳಿ

ತುಮಕೂರು:ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ತುಮಕೂರು ವೀರಶೈವ ಸಹಕಾರ ಬ್ಯಾಂಕಿನ ಉಪಾಧ್ಯಕ್ಷರಾದ ಹಿರಿಯ ಸಹಕಾರಿ ಹೆಬ್ಬಾಕ ಮಲ್ಲಿಕಾರ್ಜುನ್ ಅವರನ್ನು ಮುಂಜಾನೆ ಗೆಳೆಯರ ಬಳಗದವರು ಭಾನುವಾರ ಅಭಿನಂದಿಸಿ ಗೌರವ ಸಲ್ಲಿಸಿದರು.

ನಗರದ ವಿಘ್ನೇಶ್ವರ ಕಂಫರ್ಟ್ಸ್ ಸಭಾಂಗಣದಲ್ಲಿ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ತುಮಕೂರು ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಅವರು, ಜಿಲ್ಲೆಯ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಹಲವಾರು ಮಹನೀಯರು ಕೊಡುಗೆ ನೀಡಿದ್ದಾರೆ. ಅದರ ಫಲವಾಗಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬೆಳವಣಿಗೆಯಾಗುತ್ತಿದೆ ಎಂದರು.

ಸುಮಾರು 30 ವರ್ಷ ಕಾಲ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಹಲವರಿಗೆ ಸಹಾಯಹಸ್ತ ಚಾಚಿ ನೆರವಾಗಿ ಜನಾನುರಾಗಿಯಾಗಿರುವ ಹೆಬ್ಬಾಕ ಮಲ್ಲಿಕಾರ್ಜುನ್ ಅವರ ಸೇವೆ ಪರಿಗಣಿಸಿ ಸಹಕಾರ ರತ್ನ ಪ್ರಶಸ್ತಿ ಸಂದಿರುವುದು ನಮಗೆಲ್ಲಾ ಹೆಮ್ಮೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ ಅವರು, ಹಳ್ಳಿಯಲ್ಲಿ ಹುಟ್ಟಿ ಬಂದು ಉನ್ನತ ಶಿಕ್ಷಣ ಪಡೆದು ತುಮಕೂರಿನಲ್ಲಿ ವಿವಿಧ ಸಂಘ ಸoಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಹೆಬ್ಬಾಕ ಮಲ್ಲಿಕಾರ್ಜುನ್ ಅವರು ಜನರ ವಿಶ್ವಾಸಗಳಿಸಿ ಬೆಳೆದರು ಎಂದರು.

ಇoದು ಸಹಕಾರಿ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿ ಮಾದರಿಯಾಗಿರುವ ಇವರಿಗೆ ದೊರೆತಿಸಿರುವ ಸಹಕಾರ ರತ್ನ ಪ್ರಶಸ್ತಿ ತುಮಕೂರಿಗೆ ಸಿಕ್ಕ ಗೌರವ ಎಂದು ಹೇಳಿ ಅಭಿನಂದಿಸಿದರು.

ಧನಿಯಾಕುಮಾರ್, ಟಿ.ಆರ್.ಸದಾಶಿವಯ್ಯ, ಟಿ.ಜೆ.ಗಿರೀಶ್,ಸಿ.ಎಂ.ಹಿತೇಶ್, ಮಲ್ಲಸಂದ್ರ ಶಿವಣ್ಣ, ಪಲ್ಲವಿ ನಾಗರಾಜು, ಟಿ.ಕೆ.ಆನಂದ್, ಜಗಜ್ಯೋತಿಸಿದ್ಧರಾಮಯ್ಯ, ಶ್ರೀಧರ್ ಪದ್ಮಾಶಾಲೆ,ಕನ್ನಡಪ್ರಕಾಶ್, ವಿಜಯಕುಮಾರ್ ನಾಯಕ್, ವರದರಾಜು,ಜಿ.ವಿ.ಮಂಜುನಾಥ್, ಎ.ವಿಜಯಕುಮಾರ್, ಅಂಜನಮೂರ್ತಿ ಮೊದಲಾದವರು ಭಾಗವಹಿಸಿದ್ದರು.

—–——–ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?