ತುಮಕೂರು-ಭಾರತದ ಸಹಕಾರಿ ಕ್ಷೇತ್ರದ ಬೆಳವಣಿಗೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ-ಪಂಡಿತ ನೆಹರು,ಮಹಾತ್ಮ ಗಾಂಧಿಜೀ,ಕುರಿಯನ್ ಅವರುಗಳನ್ನು ಸ್ಮರಿಸಿಕೊಳ್ಳಬೇಕಿದೆ-ಡಾ.ಜಿ.ಪರಮೇಶ್ವರ್

ತುಮಕೂರು:ಭಾರತದ ಸಹಕಾರಿ ಕ್ಷೇತ್ರದ ಬೆಳವಣಿಗೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದ ಶಿಕ್ಷಣ ಭೀಷ್ಮ ಹೆಚ್.ಎಂ.ಗoಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ಸಹಯೋಗದಲ್ಲಿ ಆಯೋಜಿಸಿರುವ ಸಹಕಾರ ರತ್ನ ಪ್ರಶಸ್ತಿ ಪ್ರಧಾನ ಮತ್ತು ಹಾಲು ಸಂಗ್ರಹ ಕೇಂದ್ರಗಳಿಗೆ ಹೊಸ ತಂತ್ರಾoಶ ಅವಳಡಿಕೆ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು, 1905ರಲ್ಲಿ ಉತ್ತರ ಕರ್ನಾಟಕದ ಗದುಗಿನ ಶಿವಾನಂದ ಪಾಟೀಲ್ ಪ್ರಾರಂಭಿಸಿದ ಈ ಆಂದೋಲನ ಮುಂದುವರೆದು ಇಂದು 8.50 ಲಕ್ಷ ಸಹಕಾರಿ ಸಂಘಗಳನ್ನು ಹೊಂದಿದೆ.ಆoದೋಲನಕ್ಕೆ ಸಹಕರಿಸಿದ ಪಂಡಿತ ನೆಹರು, ಮಹಾತ್ಮಗಾಂಧಿಜೀ, ಕುರಿಯನ್ ಅವರುಗಳನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ,ದೇಶದಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣದ ಕಾಯ್ದೆಗಳು ಜಾರಿಯಾಗುವವರೆಗೂ ಜನರಿಗೆ ಬೇಕಾದ ಆಹಾರ ಪದಾರ್ಥ, ಬಟ್ಟೆ ಇನ್ನಿತರ ವಸ್ತುಗಳನ್ನು ಸೊಸೈಟಿಗಳ ಮೂಲಕವೇ ಪೂರೈಕೆ ಮಾಡಲಾಗುತ್ತಿತ್ತು.ಆದರೆ ಗ್ಯಾಟ್ ಒಪ್ಪಂದದ ಫಲವಾಗಿ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶದಿಂದ ಸಹಕಾರ ಕ್ಷೇತ್ರ ಕೊಂಚ ಹಿನ್ನೆಡೆಯಾದರೂ ಇಂದಿಗೂ ಗಟ್ಟಿಯಾಗಿದೆ. ಗ್ರಾಮೀಣ ಭಾಗದ ಜನರು ಸಹಕಾರಿ ಸಂಘಗಳಲ್ಲಿ ಷೇರು ಬಂಡವಾಳ ಹೂಡಬೇಕು.ಹಣವನ್ನು ಅನಗತ್ಯವಾಗಿ,ಅದ್ದೂರಿ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಬದಲು, ಮಂತ್ರ ಮಾoಗಲ್ಯದoತಹ ಸರಳ ಮದುವೆಗಳಿಗೆ ಮುಂದಾಗುವoತೆ ಕರೆ ನಿಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಮಾತನಾಡಿ,ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೆಳಹಂತದ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಉದ್ದೇಶದಿಂದ ಈಗಾಗಲೇ ಸಲ್ಲಿಸಿರುವ ಸಹಕಾರ ತಿದ್ದುಪಡಿ ಕಾಯ್ದೆಯಲ್ಲಿ ಪ್ರಸ್ತಾಪಿಸಿದ್ದೇನೆ.ಒಮ್ಮೆ ಜಾರಿಗೆ ಬಂದರೆ ರಾಜ್ಯದ ಹಾಲು ಉತ್ಪಾಧನಾ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿ ಯಾಗಿ ಕೆಲಸ ಮಾಡುತ್ತಿರುವ ಎಲ್ಲಾ ನೌಕರರಿಗೆ ಭದ್ರತೆ ದೊರೆಯಲಿದೆ.ಇದರ ಜೊತೆಗೆ ನನ್ನ ಐವತ್ತು ವರ್ಷದ ಅನುಭವನದಲ್ಲಿ ಕಾಯ್ದೆಗೆ ಸಾಕಷ್ಟು ತಿದ್ದುಪಡಿ ತಂದಿದ್ದೇನೆ.ಅವಕಾಶ ವಂಚಿತ ತಳ ಸಮುದಾಯಗಳಿಗೆ ಅವಕಾಶ ಸಿಗುವಂತೆ ಮಾಡಲಾಗಿದೆ. ಇಂದಲ್ಲಾ ನಾಳೆ ಕಾನೂನಿನ ಮಾನ್ಯತೆ ದೊರೆಯಲಿದೆ ಎಂದರು.

ವೇದಿಕೆಯಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು ಮತ್ತು ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನ ಉಪಾಧ್ಯಕ್ಷರಾದ ಹೆಬ್ಬಾಕ ಮಲ್ಲಿಕಾರ್ಜುನ್,ಶಾಸಕರಾದ ಜಿ.ಬಿ.ಜ್ಯೋತಿಗಣೇಶ್,ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ, ಗಂಗಣ್ಣ,ತುಮಕೂರು ಹಾಲು ಒಕ್ಕೂಟದ ಎಂ.ಡಿ. ಶ್ರೀನಿವಾಸನ್. ಜಿ,ಕಲ್ಲಹಳ್ಳಿದೇವರಾಜು, ಲಕ್ಷ್ಮಿ ನಾರಾಯಣ್, ಸಿಂಗದಹಳ್ಳಿರಾಜಕುಮಾರ್, ನಾರಾಯಣಗೌಡ, ನಾಗೇಶಬಾಬು,ಲಕ್ಷ್ಮಿ ನಾರಾಯಣ್, ಸಿದ್ದಲಿಂಗೇಗೌಡ,ಕಾoತರಾಜು, ತುಮುಲ್ ಆಡಳಿತಾಧಿಕಾರಿ ಉಮೇಶ್, ಮತ್ತಿತರರು ಉಪಸ್ಥಿತರಿದ್ದರು.

ಸಹಕಾರ ರತ್ನ ಪಡೆದ ಹೆಬ್ಬಾಕ ಮಲ್ಲಿಕಾರ್ಜುನಯ್ಯನವರನ್ನು ತುಮಕೂರು ವೀರಶೈವ ಸಹಕಾರ ಬ್ಯಾಂಕ್ ಲಿ ನ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ,ಸಿಇಓ (ಪ್ರಭಾರ)ಕಲ್ಪನಾ,ಅಧಿಕೃತ ಅಧಿಕಾರಿ ಎಂ.ಆರ್.ತಿಪ್ಪೇಸ್ವಾಮಿ,ಬ್ಯಾoಕ್ ನ ನಿರ್ದೇಶಕರು,ವ್ಯವಸ್ಥಾಪಕರು,ಸಿಬ್ಬಂದಿಗಳು ಅಭಿನಂದಿಸಿದರು.

——–ವರದಿ-ಕೆ ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?