
ತುಮಕೂರು:ಸರಕಾರಿ ನೌಕರರ ಸಂಘ 2019-24ರ ಅವಧಿಯಲ್ಲಿ ನೌಕರರ ಹಿತ ಕಾಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಹೋರಾಟವಿಲ್ಲದೆ,7ನೇ ವೇತನ ಆಯೋಗದ ಶಿಫಾರಸ್ಸು,ಕೇಂದ್ರ ಸರಕಾರ ರೀತಿಯಲ್ಲಿಯೇ ತುಟ್ಟಿಭತ್ಯೆ ಹೆಚ್ಚಳ ಎಲ್ಲವನ್ನು ರಾಜ್ಯ ಸರಕಾರಿ ನೌಕರರಿಗೆ ಸಕಾಲದಲ್ಲಿ ಒದಗಿಸಲು ಶಕ್ರಿ ಮೀರಿ ಪ್ರಯತ್ನಿಸಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಷಡಕ್ಷರಿ ತಿಳಿಸಿದ್ದಾರೆ.
ತುಮಕೂರು ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಎನ್.ನರಸಿಂಹ ರಾಜು ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊoಡು ಮಾತನಾಡುತಿದ್ದ ಅವರು,ಇದೊಂದು ತಂಡದ ಕೆಲಸ.ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು, ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಹಕಾರದಿಂದ ಈ ಯಶಸ್ಸು ಲಭಿಸಿದೆ ಎಂದರು.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜು ಮಾತನಾಡಿ,ತುಮಕೂರು ಜಿಲ್ಲೆಯ 66 ಸ್ಥಾನಗಳಲ್ಲಿ 39ಸ್ಥಾನ ಗಳಿಗೆ ಚುನಾವಣೆ ನಡೆದಿದೆ.ಇದರಲ್ಲಿ 59 ಜನ ಹೊಸದಾಗಿ ಆಯ್ಕೆಯಾಗಿದ್ದಾರೆ.ಅವರೆಲ್ಲರಿಗೂ ಅಭಿನಂದನೆಗಳು.ಮೊನ್ನೆ ಶಿವಮೊಗ್ಗದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಒಂದು ವಿಷಯವನ್ನು ಮಂಡಿಸಿದೆ.ಒಮ್ಮೆ ಅಧ್ಯಕ್ಷರಾದವರಿಗೆ ಮತ್ತೊಮ್ಮೆ ಅವಕಾಶವಿಲ್ಲ ಎಂಬ ನಿಯಮ ರೂಪಿಸಬೇಕೆಂದೆ. ಇದರ ಹಿಂದಿರುವ ಉದ್ದೇಶ, ಹೊಸಬರಿಗೆ ಅವಕಾಶ ದೊರೆಯುಬೇಕು. ಅವರು ಸಹ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂಬುದಾಗಿದೆ.ಎರಡನೇ ಅವಧಿಗೆ ಸೀಮಿತವಾದರೆ ಹೆಚ್ಚು ಅನುಕೂಲವಾಗಲಿದೆ. ನಮ್ಮ ಕಾಲದಲ್ಲಿ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕೆಲಸ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಬಸವರಾಜು,ಖಜಾಂಚಿ ಡಿ.ಆರ್.ಹರೀಶ್ ಕುಮಾರ್,ಪ್ರದೀಪ್, ರಾಜ್ಯ ಪರಿಷತ್ ಸದಸ್ಯ ಗಂಗಾಧರ್, ಪರಶಿವಮೂರ್ತಿ, ರಮೇಶ್, ಪರಮೇಶ್,ನ್ಯಾಯಾಂಗ ಇಲಾಖೆಯ ಶಿರಸ್ತೇದಾರ್ ಎಂ.ಕೆ.ಜಗದೀಶ್, ಸೇರಿದಂತೆ ಎಲ್ಲಾ ತಾಲ್ಲೂಕಿನ ಅಧ್ಯಕ್ಷರು ಉಪಸ್ಥಿತರಿದ್ದರು.
————–ವರದಿ- ಕೆ ಬಿ ಚಂದ್ರಚೂಡ