ತುಮಕೂರು-ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ 2ನೇ ಬಾರಿ ಎನ್.ನರಸಿಂಹರಾಜು ಅವಿರೋಧ ಆಯ್ಕೆ-ಗ್ರಾಮ ಆಡಳಿತ ಅಧಿಕಾ ರಿಗಳ ಸಂಘದ ಗೌರವಾಧ್ಯಕ್ಷ ಎನ್.ರವಿಕುಮಾರ್ ಅಭಿನಂದನೆ

ತುಮಕೂರು-ರಾಜ್ಯ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾ ಅಧ್ಯಕ್ಷರಾಗಿ ಎನ್.ನರಸಿಂಹರಾಜು ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತುಮಕೂರಿನ ಕಂದಾಯ ಇಲಾಖೆಯ ಎನ್.ನರಸಿಂಹರಾಜು,ತಿಪಟೂರು ತಾಲ್ಲೂಕು ಸಂಘದ ಅಧ್ಯಕ್ಷ ಹೆಚ್.ಇ. ರಮೇಶ್ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಂಘದ ಅಧ್ಯಕ್ಷ ಪರಶಿವಮೂರ್ತಿ ನಾಮಪತ್ರ ಸಲ್ಲಿಸಿದ್ದರು.

ರಮೇಶ್ ಹಾಗೂ ಪರಶಿವಮೂರ್ತಿ ತಮ್ಮ ನಾಮಪತ್ರ ವಾಪಸ್ ಪಡೆದು, ಕಣದಲ್ಲಿ ಉಳಿದ ಎನ್.ನರಸಿಂಹರಾಜು ಅವರು 2029ರವರೆಗಿನ ಅಧಿಕಾರವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಇದೇ ವೇಳೆ ಸರ್ಕಾರಿ ನೌಕರರ ಸಂಘದ ಖಜಾಂಚಿ ಸ್ಥಾನಕ್ಕೆ ನ್ಯಾಯಾಂಗ ಇಲಾಖೆಯ ಹರೀಶ್‌ಕುಮಾರ್ ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ ಆರೋಗ್ಯ ಇಲಾಖೆಯ ಗಂಗಾಧರ್ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 81 ಇಲಾಖೆಗಳಿಂದ 66 ಜನ ನಿರ್ದೇಶಕರು ಹಾಗೂ ಗುಬ್ಬಿ, ಕುಣಿಗಲ್,ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕು ಘಟಕಗಳ ಅಧ್ಯಕ್ಷರು ಜಿಲ್ಲಾ ಸಮಿತಿಯಲ್ಲಿದ್ದಾರೆ.ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಎನ್.ನರಸಿಂಹರಾಜು ಅವರನ್ನು ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘಸoಸ್ಥೆಗಳ ಮುಖಂಡರು ಅಭಿನಂದಿಸಿ ಶುಭಕೋರಿದರು.

ಎನ್‌ಪಿಎಸ್ ಬಿಟ್ಟು ಒಪಿಎಸ್ ಮುಂದುವರೆಸಬೇಕು ಎಂಬ ಸರ್ಕಾರಿ ನೌಕರರ ಬೇಡಿಕೆಯೂ ಸೇರಿದಂತೆ ಎಲ್ಲಾ ನೌಕರರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದ ನೂತನ ಅಧ್ಯಕ್ಷರು, ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವ ವಿ.ಸೋಮಣ್ಣ,ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ಶಾಸಕರ ಮಾಗದರ್ಶನದಲ್ಲಿ ಜಿಲ್ಲೆಯ ನೌಕರರಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ಸಂಘದ ಚಟುವಟಿಕೆ ಹಾಗೂ ಸರ್ಕಾರಿ ಸೇವೆ ಒದಗಿಸಲು ಬದ್ಧರಾಗೋಣ. ಸರ್ಕಾರಿ ನೌಕರರ ಆಶಯದಂತೆ ನೌಕರರ ಬಡಾವಣೆ ನಿರ್ಮಿಸಿ ಕಡಿಮೆ ದರದಲ್ಲಿ ವಸತಿ, ನಿವೇಶನ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

ಅಭಿನಂದನೆ 2ನೇ ಬಾರಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎನ್. ನರಸಿಂಹರಾಜು ಅವರನ್ನು ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷ ಎನ್.ರವಿಕುಮಾರ್ ಅಭಿನಂದಿಸಿದರು.

———–—–ವರದಿ-ಕೆ ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?