ತುಮಕೂರು-ಉತ್ತರ ಪ್ರದೇಶದ ಸಂಬಲ್‌ನಲ್ಲಿ ಪ್ರಾರ್ಥನಾ ಸ್ಥಳ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯ ವಿರುದ್ಧ ಇಂದು ತುಮಕೂರು ನಗರದಲ್ಲಿ ಎಸ್.ಡಿ.ಪಿ.ಐ. ತುಮಕೂರು ಜಿಲ್ಲಾ ಘಟಕದ ವತಿಯಿಂದ ಬಿ.ಜಿ.ಎಸ್.ವೃತ್ತ (ಟೌನ್‌ಹಾಲ್ ವೃತ್ತ)ದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ.ಡಿ.ಪಿ.ಐ.ಜಿಲ್ಲಾಧ್ಯಕ್ಷರಾದ ಉಮ್ರುದ್ದೀನ್, ಉತ್ತರ ಪ್ರದೇಶದ ಸಂಬಲ್‌ನಲ್ಲಿ ಶಾಹಿ ಜುಮ್ಮಾ ಮಸೀದಿಯ ಸರ್ವೆ ನಡೆಸಲು ಅನುಮತಿ ನೀಡಿರುವುದು 1991ರ “ಪ್ರಾರ್ಥನಾ ಸ್ಥಳ ಸಂರಕ್ಷಣಾ ಕಾಯ್ದೆಯ” ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ. ಪ್ರತಿವಾದಿಗಳ ವಾದವನ್ನು ಮಂಡಿಸಲು ಅವಕಾಶ ನೀಡದೆ ಇರುವುದು ನ್ಯಾಯಾಲಯದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.ಹಾಗಿದ್ದರೂ ಅಲ್ಲಿನ ನಿವಾಸಿಗಳು ಮತ್ತು ಮಸೀದಿ ಆಡಳಿತ ಸಮಿತಿಯವರು ಒಂದು ಬಾರಿ ಸಭೆ ನಡೆಸಲು ಅವಕಾಶ ನೀಡಿ ಸಹಕರಿಸಿದ್ದು ಮತ್ತೊಂದು ಬಾರಿ ಸರ್ವೆ ನಡೆಸಲು ಪೂರ್ವ ಸೂಚನೆ ಇಲ್ಲದೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಇದನ್ನರಿತ ಸ್ಥಳೀಯರು ಪ್ರತಿಭಟನೆ ನಡೆಸುವಾಗ
ಪೊಲೀಸರು ಏಕಾಏಕಿ ಗೋಲಿಬಾರ್ ನಡೆಸಿ, ಐದು ಜನರ ಹತ್ಯೆ ನಡೆಸಿರುತ್ತಾರೆ.
ಈ ಪ್ರಕರಣದ ಸಲುವಾಗಿ ನಾವುಗಳು ರಾಷ್ಟ್ರಪತಿಯವರಿಗೆ ಈ ದೂರನ್ನು ಸಲಿಸುತ್ತಿದ್ದೇವೆ, ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು, ಗೋಲಿಬಾರ್‌ನಲ್ಲಿ ಪ್ರಾಣ ಕಳೆದುಕೊಂಡವರ ಮನೆಯವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರು ಉಮುದ್ದೀನ್,ಉಪಾಧ್ಯಕ್ಷರು ಅಲೀಂ ಉಲ್ಲಾ ಶರೀಫ್, ಪ್ರಧಾನ ಕಾರ್ಯದರ್ಶಿ ಹಫಿ ಉಲ್ಲಾ ಖಾನ್, ಕಾರ್ಯದರ್ಶಿ ಅಶ್ರಫ್ ಮತ್ತು ಜಿಲ್ಲಾ ಸಮಿತಿಯ ಸದಸ್ಯರಾದ ಮುಕ್ತಿಯಾರ್ ಅಹಮದ್, ಅಪ್ಸರ್ ಪಾಷಾ, ಮಹಬೂಬ್ ಪಾಷ ಮತ್ತು ಪಕ್ಷದ ನಾಯಕು ಮತ್ತು ಮುಸ್ಲಿಂ ಸಮುದಾಯದ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತಿರಿದ್ದರು.