ತುಮಕೂರು:ಗಂಗಸoದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ 20ನೇ ಶುದ್ಧಗಂಗಾ ನೀರಿನ ಘಟಕವನ್ನು ಉದ್ಘಾಟಿಸಿದ ಶಾಸಕ ಜಿ.ಬಿ.ಜ್ಯೋತಿ ಗಣೇಶ್

ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಹಯೋಗದೊಂದಿಗೆ ತುಮಕೂರು ಗ್ರಾಮಾಂತರ ಯೋಜನಾ ಕಚೇರಿ ವ್ಯಾಪ್ತಿಯ ವಾರ್ಡ್ ನಂ.11 ಗಂಗಸoದ್ರದಲ್ಲಿ ಶುದ್ಧಗoಗಾ ನೀರಿನ ಘಟಕವನ್ನು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಉದ್ಘಾಟಸಿದರು.

ನಂತರ ಮಾತನಾಡಿದ ಶಾಸಕರು, ಸಿದ್ದಗಂಗಾ ಕ್ಷೇತ್ರದ ಈ ಮಣ್ಣಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗ ದೊಂದಿಗೆ ಈಗಾಗಲೇ 20 ಶುದ್ಧಗಂಗಾ ನೀರಿನ ಘಟಕವನ್ನು ಪ್ರಾರಂಭ ಮಾಡಿದ್ದು ಉತ್ತಮ ಮತ್ತು ಶುದ್ಧ ನೀರನ್ನ ಜನರಿಗೆ ಒದಗಿಸುವಲ್ಲಿ ಉತ್ತಮ ಕೆಲಸವನ್ನು ಮಾಡಲಾಗುತ್ತಿದೆ.

ಯೋಜನೆಯಿಂದ ಪ್ರಾರಂಭವಾದ ಎಲ್ಲಾ ಘಟಕಗಳು ಉತ್ತಮ ರೀತಿಯಲ್ಲಿ ನಿರ್ವಹಣೆ ಆಗುತ್ತಿದೆ,ಕೆರೆಗಳ ಹೊಳೆತ್ತುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಉತ್ತಮ ಕೆಲಸಗಳನ್ನು ಮಾಡಲಾಗುತ್ತಿದೆ.ಸಂಸ್ಥೆಯ ಎಲ್ಲಾ ಕೆಲಸ ಕಾರ್ಯಗಳು ಸಮಾಜಮುಖಿಯಾಗಿವೆ,ಜನರಿಗೆ ಶುಭದಾಯಕವಾಗಿರಲಿ ಎಂದು ಶುಭ ಹಾರೈಸಿದರು .

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ಯಾಂಕಿನ ವ್ಯವಹಾರ ಪ್ರತಿನಿಧಿಯಾಗಿ, ರಾಷ್ಟ್ರೀಕೃತ ಬ್ಯಾಂಕ್ ನ ಸೌಲಭ್ಯವನ್ನು ತಳಮಟ್ಟದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿ ಯೋಜನೆಯು ಕಳೆದ 42 ವರ್ಷಗಳಲ್ಲಿ ರಾಜ್ಯಾದ್ಯಂತ ಹಾಗೂ 13 ವರ್ಷಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಮಾಡಿದ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಹಾಗೂ ಶುದ್ಧ ನೀರಿನ ಕುಡಿಯುವ ಉದ್ದೇಶ ಜನರ ಆರೋಗ್ಯದ ಉತ್ತಮ ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 86 ಶುದ್ಧಗಂಗಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು ತುಮಕೂರು ತಾಲೂಕಿನಲ್ಲಿ 20 ನೇ ಘಟಕವನ್ನು ಈ ದಿನ ಉದ್ಘಾಟನೆ ಮಾಡಲಾಯಿತು.ಶ್ರೀ ಕ್ಷೇತ್ರದ ನೇತ್ರಾವತಿ ನದಿಯ ನೀರು ತೀರ್ಥವು ನಮಗೆ ಶುದ್ಧ ಗಂಗಾ ಘಟಕಗಳ ರೂಪದಲ್ಲಿ ಲಭ್ಯವಾಗುತ್ತಿದೆ ಎಲ್ಲರೂ ಘಟಕದ ರಕ್ಷಣೆ ಮಾಡಿಕೊಳ್ಳಿ ಎಂದು ಹೇಳಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮನು,ತಾಲೂಕು ಯೋಜನಾಧಿಕಾರಿಗಳಾದ ಪ್ರಭಾಕರ್ ರಾಮ್ ನಾಯಕ್ ರವರು ಉಪಸ್ಥಿತರಿದ್ದರು.

ವಲಯದ ಮೇಲ್ವಿಚಾರಕರಾದ ಸುಧೀರ್ ರವರು ಕಾರ್ಯಕ್ರಮ ನಿರೂಪಿಸಿದರು, ಮೇಲ್ವಿಚಾರಕರಾದ ಪ್ರಭಾಕರ ರವರು ಸ್ವಾಗತಿಸಿ,ಮೇಲ್ವಿಚಾರಕರಾದ ತನುಜಾ ರವರು ವಂದಿಸಿದರು.

———ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?