ತುಮಕೂರು:ವಿದ್ಯಾರ್ಥಿಗಳು’ನ್ಯಾನೋ ಟೆಕ್ನಾಲಜಿ ಅಂಡ್ ಅಪ್ಲಿಕೇಶನ್’ ಸಂಶೋಧನೆಯಲ್ಲಿ ತೊಡಗಬೇಕು-ಡಾ.ಟಿ.ಬಿ ನಿಜಲಿಂಗಪ್ಪ ಸಲಹೆ

ತುಮಕೂರು:ಶ್ರೀ ಸಿದ್ದಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ತುಮಕೂರು ಭೌತಶಾಸ್ತ್ರ ವಿಭಾಗದಿಂದ ನ್ಯಾನೋ ಟೆಕ್ನಾಲಜಿ ಅಪ್ಲಿಕೇಶನ್ಸ್ ಇದರ ಬಗ್ಗೆ ಒಂದು ದಿನದ ವಿಶೇಷ ಉಪನ್ಯಾಸವನ್ನು ಬಿಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು.

ವಿಶೇಷ ಉಪನ್ಯಾಸದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ,ಫಕ್ರುದ್ದೀನ್ ಭೌತಶಾಸ್ತ್ರ ಪ್ರಾಧ್ಯಾಪಕರು, ಗೌಸಿಯ ತಾಂತ್ರಿಕ ಮಹಾವಿದ್ಯಾಲಯ ರಾಮನಗರ ಭಾಗವಹಿಸಿದ್ದರು.

ಈ ವಿಶೇಷ ಉಪನ್ಯಾಸದಲ್ಲಿ ನ್ಯಾನೋ ಮೆಟೀರಿಯಲ್ಸ್ ನ ಅವಶ್ಯಕತೆ, ಅಭಿವೃದ್ಧಿ ಮುಂದೆ ಬರುವ ಅಪ್ಲಿಕೇಶನ್ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.ಅದರಲ್ಲಿಯೂ ನ್ಯಾನೋ ಟೆಕ್ನಾಲಜಿ ಅವಶ್ಯಕತೆ ಮುಂಬರುವ ದಿನಗಳಲ್ಲಿ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.

ಕಾಲೇಜನ ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪನವರು ಕಾಲೇಜಿನ ವಿದ್ಯಾರ್ಥಿಗಳು ಈ ವಿಶೇಷ ಉಪನ್ಯಾಸ ಪ್ರಯೋಜನವನ್ನು ಉಪಯೋಗಿಸಿಕೊಂಡು ಮುಂಬರುವ ದಿನಗಳಲ್ಲಿ ಭಾರತ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ನ್ಯಾನೋ ಟೆಕ್ನಾಲಜಿ ಸಂಶೋಧನೆಯನ್ನು ಮಾಡಬೇಕೆಂದು ತಿಳಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಆರ್.ರೇವಣ್ಣ ಸಿದ್ದಪ್ಪ, ಐಕ್ಯೂಎಸಿ ಸಲಹೆಗಾರರಾದ ಸಿ.ಎಸ್. ಸೋಮಶೇ ಖರಯ್ಯ,ಐಕ್ಯೂಎಸಿ ಸಂಚಾಲಕರಾದ ಪ್ರೊ.ಸರ್ವಮಂಗಳ.ಹೆಚ್.ಜಿ, ಮತ್ತು ಉಪನ್ಯಾಸಕರಾದ ಡಾ. ಕೆ.ಅಕ್ಷಯ್ ಕುಲಕರ್ಣಿ, ಹಾಗೂ ಸೋನುಜಿ ಅವರು ಉಪಸ್ಥಿತರಿದ್ದರು.

ಬಿಎಸ್ಸಿ ವಿದ್ಯಾರ್ಥಿಗಳಾದ ಮಮತಾ ಎಂ.ಎನ್ ಮತ್ತು ಧನ್ಯಶ್ರೀ ಪ್ರಾರ್ಥನೆಯೊಂದಿಗೆ,ಅಭಿಷೇಕ್ ಸ್ವಾಗತಿಸಿ, ಗೋವಿಂದರಾಜು ಅವರು ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿ, ಚಂದನ ವಂದಿಸಿದರು ಯಶಸ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

————–ಚಂದ್ರಚೂಡ

Leave a Reply

Your email address will not be published. Required fields are marked *

× How can I help you?