ತುಮಕೂರು:ಆಧುನಿಕ ಕಾಲದಲ್ಲಿ ಮಾನವನಿಗೆ ಎಲ್ಲವೂ ಸುಲಭವಾಗಿ ಲಭಿಸುತ್ತಿದೆ.ತಂತ್ರಜ್ಞಾನದ ಹಿಂದೆ ಬಿದ್ದಿರುವ ಮಾನವ ತನ್ನ ಮೂಲಭೂತವಾದ ಲಕ್ಷಣಗಳನ್ನೇ ಮರೆತಿದ್ದಾನೆ.ಸಮಾಜದಲ್ಲಿನ ಹಲವಾರು ಆತಂಕಗಳನ್ನು ನಿವಾರಿಸಲು ಸದೃಢರಾದ ಯುವ ವಿದ್ಯಾವಂತ ವರ್ಗದಿಂದ ಮಾತ್ರ ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ. ಬಿ.ಶೇಖರ್
ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ದಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಕಾಲಿನಲ್ಲಿ ಪ್ರಥಮ ಎಂ.ಕಾo ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಸಮಾಜದಲ್ಲಿ ಮಾನವೀಯ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ವಿವೇಚನೆಯಿಂದ ವರ್ತಿಸಬೇಕು. ಸಮಾಜದ ಅನಿಷ್ಟ ಪದ್ದತಿಗಳನ್ನು ಶಿಕ್ಷಣ ಪಡೆಯುವ ಮೂಲಕ ತೊಡೆದು ಹಾಕಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಟಿ.ಬಿ ನಿಜಲಿಂಗಪ್ಪನವರು, ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಮೂಲಕ ಜ್ಞಾನವನ್ನು ಪಡೆದು ಜೀವನದಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಪಡೆಯಬೇಕು. ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕು,ತಮ್ಮ ಗುರಿಯನ್ನು ಬೇಗ ತಲುಪಿ ಕುಟುಂಬಕ್ಕೆ ಆಧಾರವಾಗಿ ನಿಲ್ಲಬೇಕು. ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಯೋಜಕರಾದ ಪ್ರೊ.ಸರ್ವಮoಗಳ, ನ್ಯಾಕ್ ಸಂಯೋಜಕರಾದ ಪ್ರೊ.ಸಿ. ಎಸ್.ಸೋಮಶೇಖರಯ್ಯ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ರತ್ನಮ್ಮನವರು ಪ್ರಥಮ ಎಂ.ಕಾo ಪ್ರಾಕ್ಟರ್ ಆಶಾರಾಣಿ ಮತ್ತು ವಿಭಾಗದ ಎಲ್ಲಾ ಉಪನ್ಯಾಸಕರುಗಳು ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
————————-ಕೆ.ಬಿ ಚಂದ್ರಚೂಡ