ತುಮಕೂರು:ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ದಾರಿ ತೋರಿಸುವ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ-ಡಾ,ಟಿ.ಬಿ.ನಿಜಲಿಂಗಪ್ಪ

ತುಮಕೂರು:ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಉತ್ತಮ ದಾರಿ ತೋರಿಸುವ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಾ,ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನ,ರ‍್ಯಾಂಕ್ ಪಡೆದವರಿಗೆ,ವಿವಿಧ ವಿಭಾಗಗಳಲ್ಲಿ,ವಿವಿಧ ವಿಷಯಗಳಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ,ಉತ್ತಮ ಸಾಧನೆಗೈದ ಎನ್.ಎಸ್.ಎಸ್, ಎನ್.ಸಿ.ಸಿ, ಕ್ರೀಡಾ ವಿಜೇತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ನಗದು ಮತ್ತು ನೆನಪಿನ ಕಾಣಿಕೆ ನೀಡಿ ಸಂಘದ ವತಿಯಿಂದ ಗೌರವಿಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಶ್ರೀ ಸಿದ್ಧಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ, ಟಿ.ಬಿ.ನಿಜಲಿಂಗಪ್ಪನವರು ತಿಳಿಸಿದರು.

ಕಾಲೇಜಿನ ಡಾ,ಶ್ರೀ ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು 21ನೇ ಸರ್ವಸದಸ್ಯರ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲಕ್ಕಾಗಿ ಸುಮಾರು 6ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಿಸಿಕೊಟ್ಟಿರುವುದು ಸಂತೋಷದ ವಿಚಾರವಾಗಿದೆ.ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸಾಫ್ಟ್ ವೇರ್ ಇಂಜಿನಿಯರ್,ವಿಜ್ಞಾನಿ,ಪತ್ರಕರ್ತರಾಗಿ,ಕೈಗಾರಿಕೋದ್ಯಮಿಗಳಾಗಿ,ಬ್ಯಾoಕಿoಗ್ ಹೀಗೆ ಹತ್ತು ಹಲವು ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಾ ಉತ್ತಮ ಸಾಧನೆ ಮಾಡಿರುವುದು ನಮ್ಮ ಕಾಲೇಜಿನ ಹೆಮ್ಮೆ ಎಂದರು.

ಡಾ,ಶ್ರೀ ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು 21ನೇ ಸರ್ವಸದಸ್ಯರ ಮಹಾಸಭೆ
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಟಿ.ಜಿ.ಎಂ.ಸಿ ಬ್ಯಾಂಕ್ ನ ಅಧ್ಯಕ್ಷರಾದ ಕೆ.ಎಂ.ದಿವ್ಯಾನoದಮೂರ್ತಿರವರು,ಬಡತನ ದೊಡ್ಡದಲ್ಲ ಸಾಧನೆ ದೊಡ್ಡದು ಎಲ್ಲರೂ ಬಡತನ ಮರೆತು ಏನಾದರೂ ಸಾಧಿಸಿ ಸಮಾಜಕ್ಕೆ ನಮ್ಮ ಕೊಡುಗೆ ನೀಡಬೇಕು ಎಂದರು.

ಕಾಲೇಜಿನ ಹಿರಿಯ ವಿದ್ಯಾರ್ಥಿ ಎ.ಎಂ.ಡಿ.ಕoಪೆನಿಯ ಇಂಡಿಯಾ ಮತ್ತು ಏಷ್ಯಾ ಮುಖ್ಯಸ್ಥರಾದ ಎಸ್.ಶ್ರೀನಿವಾಸ್ ಮಾತನಾಡಿ ಸಮಾಜ ನಮಗೆ ಏನು ನೀಡಿದೆ ಎಂಬುದಕ್ಕಿoತ ಸಮಾಜಕ್ಕೆ ಮತ್ತು ನಾವು ಓದಿದ ಕಾಲೇಜಿಗೆ ನಾವು ಏನು ನೀಡಿದ್ದೇವೆ ಎಂಬುದು ಮುಖ್ಯ.ಈ ಕಾಲೇಜು ನಮಗೆ ಬದುಕು ಕಟ್ಟಿಕೊಳ್ಳಲು ಛಲ ತುಂಬಿದೆ.ಇಲ್ಲಿನ ಉಪನ್ಯಾಸಕರು ಪ್ರಾಮಾಣಿಕವಾಗಿ ಪಾಠ ಮಾಡಿ ನಮ್ಮ ಬದುಕು ಕಟ್ಟಿಕೊಟ್ಟಿದ್ದಾರೆ.ನಾವು ಇಂದು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದೇವೆ, ಸಂಸ್ಕಾರವoತರಾಗಿದ್ದೇವೆ ಎಂದರೆ ಪೂಜ್ಯರು ಮತ್ತು ಕಾಲೇಜಿನ ಉಪನ್ಯಾಸಕರು ಕಾರಣ ಎಂದರು.

ವೇದಿಕೆಯಲ್ಲಿ ಡಾ ಕೆ.ಮಂಜುನಾಥ್, ಪ್ರೊ.ಟಿ.ಗಂಗಾಧರಯ್ಯ, ಬಿ.ಎಸ್.ಸೂರ್ಯನಾರಾಯಣಗುಪ್ತ, ಡಾ ಬಿ.ಎಸ್.ಶೈಲೇಶ್, ಆರ್.ಬಸವರಾಜಪ್ಪ,ಸಿ.ಎಸ್.ಕುಮಾರಸ್ವಾಮಿ,ಶ್ರೀಮತಿ ಮಧು.ಎಸ್.ಕುಮಾರ್, ಸಿ.ಎಸ್.ಸೋಮಶೇಖರಯ್ಯ, ಡಿ.ಆರ್.ಮೋಹನ್ ಕುಮಾರ್, ಕೆ.ಟಿ.ಮಂಜುನಾಥ್, ಕೆ.ದಕ್ಷಿಣಾಮೂರ್ತಿ, ಕೆ.ಎಸ್.ಲಿಂಗದೇವರಪ್ಪ,

ಡಾ ಆರ್.ಕಿಶೋರ್,ಕೆ.ಬಿ.ಚoದ್ರಚೂಡ,ಆರ್.ನಾಗರತ್ನ,ಕೆ.ಎಸ್.ಇoದ್ರಾಣಿ,ಹೆಚ್.ಆರ್.ನಾಗೇಶ್,ದಿನೇಶ್. ಜಿ.ಎo,ರೇಣುಕಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?