ತುಮಕೂರು:ಕನ್ನಡ ಭಾಷೆಗೆ ಕನ್ನಡಗಿರಲ್ಲದೆ,ಕರ್ನಾಟಕದಲ್ಲಿ ವಾಸಿಸುವ ಎಲ್ಲಾ ಧರ್ಮದವರ ಅಪಾರ ಕೊಡುಗೆ ಇದೆ-ಡಾ.ಜಿ. ವಿ.ಆನಂದಮೂರ್ತಿ

ತುಮಕೂರು:ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಈ ಭಾಷೆಗೆ ಕನ್ನಡಗಿರಲ್ಲದೆ, ಕರ್ನಾಟಕದಲ್ಲಿ ವಾಸಿಸುವ ಎಲ್ಲಾ ಧರ್ಮದವರ ಅಪಾರ ಕೊಡುಗೆ ಇದೆ. ಕನ್ನಡ ಭಾಷೆ ಅಂಧಾಭಿಮಾನ ಬೆಳೆಸುವುದಿಲ್ಲ. ಅದು ವೈಚಾರಿಕ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ಜಿ.ವಿ.ಆನಂದಮೂರ್ತಿ ರವರು ಎಂದು ತಿಳಿಸಿದರು.

ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರದoದು ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಶ್ವ ಮಾನವ ಸಂದೇಶ ಸಾರಿದ ಕುವೆಂಪುರವರು, ವಚನಕಾರರು ನಮಗೆ ಮೌಢ್ಯವನ್ನು ಬೆಳೆಸಲಿಲ್ಲ. ವೈಚಾರಿಕತೆಯನ್ನು ಬೆಳೆಸಿದರು ಎಂದು ಡಾ.ಜಿವಿ.ಆನಂದಮೂರ್ತಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಧ್ಯಾಪಕ ಡಾ. ಮಾರುತಿ ಎನ್ ಎನ್ ರವರು ಕನ್ನಡ ನಮ್ಮೆಲ್ಲರ ಅಹಂನಲ್ಲಿ ಬೆರೆಯಬೇಕು, ಕನ್ನಡವನ್ನು ಬೆಳೆಸೋಣ, ಕಲಿಸೋಣ ಎಂದರು.

ಪ್ರಾoಶುಪಾಲರಾದ ಡಾ.ಸಿದ್ದರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಹಾಯಕ ಪ್ರಾಧ್ಯಾಪಕರಾದ ಹೇಮಲತಾ, ಲಲಿತಾ, ಕನ್ಯಾಕುಮಾರಿ. ವಿಧ್ಯಾರ್ಥಿಗಳು ಹಾಜರಿದ್ದರು.

ಕರ್ನಾಟಕದ ಭೂಪಟವನ್ನು ಚಿತ್ರಿಸಿ 69 ಹಣತೆಗಳನ್ನು ಹಚ್ಚುವುದರ ಮೂಲಕ ವಿಶೇಷವಾಗಿ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯಿತು.

Leave a Reply

Your email address will not be published. Required fields are marked *

× How can I help you?