ತುಮಕೂರು-ಭಾನುವಾರದಂದು’ವೈಶ್ಯ ಕೋ-ಆಪರೇಟಿವ್ ಬ್ಯಾಂಕ್’ ಶತಮಾನೋತ್ಸವ ಸಂಭ್ರಮ-ಕೆ.ಎನ್.ಗೋವಿಂದರಾಜು ಮಾಹಿತಿ

ತುಮಕೂರು-ವೈಶ್ಯ ಸಮುದಾಯದ ಹಿರಿಯರು,ದಾನಿಗಳು ಆದ ಎ.ವಿ.ನಂಜುoಡಶೆಟ್ಟರ ನೇತೃತ್ವದಲ್ಲಿ 1925ರಲ್ಲಿ ವೈಶ್ಯ ಕೋ-ಆಪರೇಟಿವ್ ಸೊಸೈಟಿ ಲಿ. ಹೆಸರಿನಲ್ಲಿ 49 ಸದಸ್ಯರು ಮತ್ತು 6025 ರೂ.ಗಳ ಬಂಡವಾಳದಿoದ ಆರಂಭಗೊoಡ ನಮ್ಮ ಬ್ಯಾಂಕ್ ಚಾಲ್ತಿ ಖಾತೆಯಲ್ಲಿ 722 ಮತ್ತು 340 ರೂ. ಖಾಯಂ ಠೇವಣಿ ಹೊಂದಿದ್ದು, ಆಡಳಿತ ಮಂಡಳಿ ಮತ್ತು ನಿರ್ದೇಶಕರು, ಸದಸ್ಯರು ಗ್ರಾಹಕರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಹಂತಹoತವಾಗಿ ಬೆಳೆದು 100 ವರ್ಷಗಳನ್ನು ಪೂರೈಸಿದೆ ಎಂದು ಬ್ಯಾಂಕಿನ ಹಾಲಿ ಅಧ್ಯಕ್ಷ ಕೆ.ಎನ್.ಗೋವಿಂದರಾಜು ಸಂತಸ ಹಂಚಿಕೊಂಡರು.

ನಗರದ ಬ್ಯಾಂಕಿನ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯೆಂದು ತಿಳಿಸಿದರು.

ನ.10 ರಂದು ಬೆಳಿಗ್ಗೆ 10.30 ಗಂಟೆಗೆ ನಗರಕ್ಕೆ ಸಮೀಪದ ಹೆಗ್ಗೆರೆ ಬಳಿಯ ಡಾ. ಹೆಚ್.ಎಂ.ಗoಗಾಧರಯ್ಯ ಸ್ಮಾರಕ ಭವನದಲ್ಲಿ ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ವಾಸವಿ ಪೀಠಂನ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠ ಅಧ್ಯಕ್ಷ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ಉದ್ಘಾಟಿಸುವರು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಯೋಜನೆ ಮತ್ತು ಸಾಂಕಿಕ ಖಾತೆ ಸಚಿವ ಡಿ.ಸುಧಾಕರ್, ಆಂಧ್ರ ಮಾಜಿ ರಾಜ್ಯಸಭಾ ಸದಸ್ಯ ಟಿ.ಜಿ.ವೆಂಕಟೇಶ್, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಡಿ.ಎಸ್.ಅರುಣ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪದಾ ಧಿಕಾರಿಗಳು,ಗಣ್ಯರುಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಈ ಸಮಾರಂಭದ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆ,ಬ್ಯಾಂಕಿನ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ, ಸಂಜೆ 5 ಗಂಟೆಗೆ ಸನ್ಮಾನ ಮತ್ತು ಸಂಗೀತ ಸoಜೆ ಕಾರ್ಯಕ್ರಮ ಹೆಸರಾಂತ ಹಿನ್ನೆಲೆ ಗಾಯಕ ವಿಷ್ಣು ಸುರೇಶ್ ತಂಡ ಹಾಗೂ ಝಿ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಗಾಯಕರಿಂದ ನಡೆಯಲಿದೆ ಎಂದರು.

ಉಪಾಧ್ಯಕ್ಷ ಕೆ.ಎಸ್.ರಾಮಮೂರ್ತಿ, ಬ್ಯಾಂಕಿನ ಸಿಇಓ ಎಸ್.ಸುಮ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *

× How can I help you?