ತುಮಕೂರು-ಜಿಲ್ಲಾ ವಕೀಲರ ಸಂಘದಲ್ಲಿ ವಕೀಲರ ದಿನಾಚರಣೆ-ಉಚಿತ ಆರೋಗ್ಯ ತಪಾಸಣೆ

ತುಮಕೂರು:ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಇಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ರವರು ವಕೀಲರ ದಿನಾಚರಣೆ ಪ್ರಯುಕ್ತ ವಕೀಲರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು,ಇಂದು ಭಾರತದ ಪ್ರಥಮ ರಾಷ್ಟ್ರಪತಿ ಡಾ||ಬಾಬುರಾಜೇಂದ್ರಪ್ರಸಾದ್ ರವರ ಹುಟ್ಟುಹಬ್ಬದ ನಿಮಿತ್ತ ವಕೀಲರ ದಿನಾಚರಣೆಯನ್ನು ಪ್ರಪಂಚದಾದ್ಯoತ ಆಚರಿಸಲಾಗುತ್ತಿದೆ.ವಕೀಲರು ದೇಶದ ಕಣ್ಣು.ನೊಂದವರ ಕಣ್ಣೀರು ಒರೆಸಿ ನ್ಯಾಯಾಲಯದ ಮೂಲಕ ನ್ಯಾಯದಾನ ಒದಗಿಸುವಲ್ಲಿ ವಕೀಲರ ಪಾತ್ರ ಅತ್ಯಂತ ಹಿರಿದು.ಈ ನಿಟ್ಟಿನಲ್ಲಿ ವಕೀಲರು ಸದಾ ಒತ್ತಡದಲ್ಲಿ ರುತ್ತಾರೆ,ಅವರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು,ಆದ್ದರಿಂದ ಇಂದು ನಮ್ಮ ಜಿಲ್ಲಾ ವಕೀಲರ
ಸಂಘದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘ,ಶ್ರೀದೇವಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳ ಜಂಟಿ ಆಶ್ರಯದಲ್ಲಿ ವಕೀಲರು,ವಕೀಲರ ಕಚೇರಿಯ ಗುಮಾಸ್ತರುಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಳಿಗ್ಗಿನಿಂದ ಸಂಜೆವರೆಗೂ ಆಯೋಜಿಸಲಾಗಿದೆ ಎಂದರು.

ಈ ಶಿಬಿರದಲ್ಲಿ ಬಿಪಿ, ಮಧುಮೇಹ, ಕಣ್ಣು,ಈಸಿಜಿ, ಚರ್ಮರೋಗ, ಉಚಿತ ರಕ್ತದಾನ ಶಿಬಿರ,ತಜ್ಞ ವೈದ್ಯರಿಂದ ಸೂಕ್ತ ಸಲಹೆಯನ್ನು ಏರ್ಪಡಿಸಲಾಗಿದೆ ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ, ಡಿ.ಸಿ.ಹಿಮಾನಂದ್, ನವೀನ್ ನಾಯಕ್, ಖಜಾಂಚಿ ಕು.ಭಾರತಿ, ಶಿವಲಿಂಗರಾಜು, ತಜ್ಞ ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು ಹಾಜರಿದ್ದರು.

——–ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?