ತುಮಕೂರು:’ವಕೀಲ’ರ ಹೋರಾಟಕ್ಕೆ ಸಿಕ್ಕ ಜಯ-‘ಸಿ.ಪಿ.ಐ ದಿನೇಶ್’ಕುಮಾರ್ ವಿರುದ್ಧ ಎಫ್.ಐ.ಆರ್ ದಾಖಲು

ತುಮಕೂರು:ವಕೀಲರಾದ ಸಿ.ರವಿಕುಮಾರ್ ಮತ್ತು ಅವರ ತಂದೆ ಸಿ.ಚoದ್ರಶೇಖರ್ ರವರು ತುಮಕೂರು ನಗರ ಠಾಣೆಗೆ ನೀಡಿದ ದೂರಿನನ್ವಯ ವಕೀಲ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸರ್ಕಲ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಸೇರಿದಂತೆ ನಾಲ್ವರ ವಿರುದ್ಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಸಿ.ಆರ್.ಸಂಖ್ಯೆ 434/2024 ರಂತೆ ಎ1-ಸಿ.ಪಿ.ಐ ದಿನೇಶ್ ಕುಮಾರ್.ಬಿ.ಎಸ್,ಎ2-ಪ್ರಸನ್ನ ಕುಮಾರ್(ರೈಲ್ವೇ ಗುತ್ತಿಗೆದಾರರು),ಎ3-ಕುಶಾಲ್ ನಾರಾಯಣ್(ರೈಲ್ವೇ ಗುತ್ತಿಗೆದಾರರು),ಎ4-ವೀರೇಶ್ ಕುಸುಮ್ ಮತ್ತು ಇತರರ
ವಿರುದ್ಧ ಎಫ್.ಐ.ಆರ್.ದಾಖಲಾಗಿದೆ.

ನಿನ್ನೆ ಎಸ್.ಪಿ. ಅಶೋಕ್.ಕೆ.ವಿ. ರವರು ನ್ಯಾಯಾಲಯದ ಆವರಣಕ್ಕೆ ಬಂದಾಗ ಅವರನ್ನು ತಡೆದು ವಕೀಲರು ತಕ್ಷಣವೇ ಸಿ.ಪಿ.ಐ ವಿರುದ್ಧ ಎಫ್.ಐ.ಆರ್.ದಾಖಲಿಸಬೇಕು ಎಂದು ಪಟ್ಟು ಹಿಡಿದು ಮನವಿ ಮಾಡಿದ್ದರು. ಅದರಂತೆ ಸಿ.ಪಿ.ಐ ಮತ್ತು ಇತರರ ವಿರುದ್ಧ ಎಫ್. ಐ. ಆರ್ .ದಾಖಲಾಗಿದೆ.

ವಕೀಲ ರವಿಕುಮಾರ್ ಅವರು ರೈಲ್ವೆ ಕಾಮಗಾರಿ ಗುತ್ತಿಗೆದಾರರಾದ ಪ್ರಸನ್ನ ಕುಮಾರ್, ಕುಶಾಲ್ ನಾರಾಯಣ್,ವೀರೇಶ್ ಕುಸುಮ್ ಸಹಚರರ ಕುಮ್ಮಕ್ಕಿನಿಂದ ಸರ್ಕಲ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ನನ್ನ ಬಲಗಣ್ಣಿಗೆ ಕೈಯಿಂದ,ಲಾಟಿಯಿoದ ನನ್ನ ಬೆನ್ನಿಗೆ ತೀವ್ರವಾಗಿ ಗುದ್ದಿದರು. ಎಡಗಾಲಿನ ತೊಡೆಗೆ ಬೂಟುಗಾಲಿನಿಂದ ಒದ್ದರು.ತಲೆಗೆ ಹಲ್ಲೆ ಮಾಡಿದರು.ಅವಾಚ್ಯ ಶಬ್ದಗಳಿಂದ ನಿಂದಿಸಿದರು.ನನ್ನನ್ನು ಹಿಡಿದು ಎಳೆದಾಡಿ ಮುಷ್ಠಿಯಿಂದ ಗುದ್ದಿದರು ಎಂದು ದೂರಿನಲ್ಲಿ ಆಪಾದಿಸಿದ್ದಾರೆ.

ಅಷ್ಟೇ ಅಲ್ಲದೆ ಸರ್ಕಲ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ನನ್ನನ್ನು ಮಣ್ಣಿಗೆ ಕೆಡವಿ ದರದರನೆ ಎಳೆದುಕೊಂಡು ಠಾಣೆಗೆ ಹೋದರು. ನನ್ನ ತಂದೆಗೆ ವಯಸ್ಸಾಗಿದ್ದರೂ ಅವರಿಗೂ ಹಲ್ಲೆ ಮಾಡಿದ್ದಾರೆ. ಸ್ವತ್ತಿಗೆ ಸಂಬoಧಪಟ್ಟoತೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಇರುವ ಬಗ್ಗೆ ವಿಚಾರ ತಿಳಿಸಿದರೂ ನನ್ನ ಮತ್ತು ನನ್ನ ತಂದೆಯ ಮೇಲೆ ದೌರ್ಜನ್ಯ ಎಸಗಿದರು ಎಂದು ಎಫ್.ಐ.ಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಈ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತ-2023 ಸೆಕ್ಷನ್ 115(2), 118(1),351(2), 352 ಮತ್ತು 54 ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

× How can I help you?