ತುಮಕೂರು:ವಕೀಲ ರವಿಕುಮಾರ್ ಮೇಲೆ ಸಿ.ಪಿ.ಐ ದಿನೇಶ್ ಕುಮಾರ್ ದರ್ಪ-ಸಿಪಿಐ ವಿರುದ್ಧ ಎಫ್.ಐ.ಆರ್.ದಾಖಲಿಸುವಂತೆ ವಕೀಲರ ಪ್ರತಿಭಟನೆ

ತುಮಕೂರು:ತುಮಕೂರು ತಾಲ್ಲೋಕು ವಾರ್ಡ್-01ರ ಹೊನ್ನೇನಹಳ್ಳಿಯಲ್ಲಿ ರೈಲ್ವೆಗೆ ಜಮೀನು ಸ್ವಾಧೀನಪಡಿಸಿಕೊಂಡಿರುವ ಸಂಬoಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದ ಜಮೀನಿನ ಮಾಲೀಕರು ಮತ್ತು ,ವಕೀಲರಾದ ರವಿಕುಮಾರ್ ಹಾಗು ಅವರ ತಂದೆಯ ಮೇಲೆ ನಗರ ಸಿಪಿಐ ದಿನೇಶ್ ಕುಮಾರ್ ರವರು ಹಲ್ಲೆ ನಡೆಸಿ ಮನಸೋ ಇಚ್ಛೆ ಹೊಡೆದು ನಿಂದಿಸಿರುವುದನ್ನು ಖಂಡಿಸಿ ತುಮಕೂರು ವಕೀಲರು ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದ ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜು ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಕೀಲ ರವಿಕುಮಾರ್ ಮೇಲೆ ಹಲ್ಲೆ ನಡೆಸಿರುವ ಸಿಪಿಐ ದಿನೇಶ್ ಕುಮಾರ್ ಅವರನ್ನು ಅಮಾನತಪಡಿಸಬೇಕು ಎಂದು ಒತ್ತಾಯಿಸಲಾಯಿತು.

ವಕೀಲ ರವಿಕುಮಾರ್ ಮಾಧ್ಯಮಗಳ ಮುಂದೆ ಮಾತನಾಡಿ,ನಮ್ಮ ಭೂಮಿಯನ್ನು ಯಾವುದೇ ನೋಟೀಸ್ ನೀಡದೆ ರೈಲ್ವೆ ಇಲಾಖೆ ವಶಪಡಿಸಿಕೊಂಡಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಏಕಾಏಕಿ ಬಂದ ಸಿಪಿಐ ದಿನೇಶ್ ಕುಮಾರ್ ನನಗೆ ಹೊಡೆದರು. ಬೂಟು ಗಾಲಿನಿಂದ ಒದ್ದರು. ಷರ್ಟ್ ಅನ್ನು ಹಿಡಿದು ಕೈದಿಗಳನ್ನು ಎಳೆದುಕೊಂಡು ಬoದoತೆ ಎಳೆದರು.

ನಾನು ಏನೂ ಮಾಡಲಿಲ್ಲ. ಆದರೂ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು. ವಕೀಲರು ಅಂತ ಗೊತ್ತಿದ್ದರೂ ವಿನಾಕಾರಣ ಹೊಡೆದಿದ್ದಾರೆ. ಬಡಿದಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿರುವ ಸಿಪಿಐ ದಿನೇಶ್ ಕುಮಾರ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಎಸ್.ಪಿ ಅಶೋಕ್ ಅವರನ್ನು ಸುತ್ತುವರೆದ ವಕೀಲರು ಸಿಪಿಐ ಅಮಾನತಿಗೆ ಪಟ್ಟುಹಿಡಿದರು.

ಈ ಘಟನೆಗೆ ಸಂಬoಧಿಸಿದoತೆ ಕುಣಿಗಲ್,ಕೊರಟಗೆರೆ,ಮಧುಗಿರಿ, ವಕೀಲರು ಸಹ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಬೆಳಗ್ಗೆಯಿಂದ ಸಂಜೆವರೆಗೂ ಪ್ರತಿಭಟನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

× How can I help you?