
ತುಮಕೂರು:ತಾಲ್ಲೂಕಿನ ಶ್ರೀದೇವಿ ಆಸ್ಪತ್ರೆ ಮತ್ತು ರೋಟರಿ ಕ್ಲಬ್ ನ ಸಹಯೋಗದೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ,ಡಿ.ವೀರೇಂದ್ರಹೆಗ್ಗಡೆರವರ 77ನೇ ಜನ್ಮದಿನದ ಅಂಗವಾಗಿ ಮಹಿಳೆಯರಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ಪತ್ತೆಹಚ್ಚುವ ಪ್ಯಾಪಿಸ್ಮಿಯರ್ ಪರೀಕ್ಷೆಯನ್ನು ಸ್ವಸಹಾಯ ಸಂಘದ ಸದಸ್ಯರಿಗೆ ಉಚಿತವಾಗಿ ನಡೆಸಲಾಯಿತು.
ಕಾರ್ಯಕ್ರಮವನ್ನು ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ರುದ್ರಪ್ಪ, ಡಾ.ನಳಿನಿ,ಡಾ,ಮನೋನ್ಮನಿ .ಎಂ.ಹೆಚ್,ತುಮಕೂರು ತಾಲೂಕಿನ ಯೋಜನಾಧಿಕಾರಿಗಳಾದ ಪ್ರಭಾಕರ್ ರಾಮನಾಯಕ್,ನಿಖತ್ ಅರ್ಶಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಡಾ,ಮನೋನ್ಮನಿ.ಎಂ.ಹೆಚ್, ರವರು ಮಹಿಳೆಯರು ಯಾವ ಕಾರಣಕ್ಕೆ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟರು.
ಡಾ, ನಿಖಾತ್ ಅರ್ಶಿ ಹಾಗೂ ಡಾ,ನಳಿನಿ ರವರು ಎಲ್ಲಾ ಸದಸ್ಯರಿಗೆ ಪ್ಯಾಪಿಸ್ಮಿಯರ್ ಪರೀಕ್ಷೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ಸುಧೀರ್,ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ನಾಗಮಣಿ.ಎನ್.ವಿ,ತುಮಕೂರು ಬಿ ವಲಯದ ಮೇಲ್ವಿಚಾರಕರಾದ ಕು,ತನುಜಾರವರು ಉಪಸ್ಥಿತರಿದ್ದರು.
—–———-ಚಂದ್ರಚೂಡ