ತುಮಕೂರು-ಇತ್ತೀಚೆಗೆ ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ನಡೆದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿದ್ಯಾರoಜಕ ಪತ್ರಿಕೆಯ ಸಂಪಾದಕರಾದ ಈ.ಎಸ್.ವೆoಕಟೇಶ ಬಾಬುರವರನ್ನು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯಪರಿಷತ್ ವತಿಯಿಂದ ಮಾದ್ಯಮ ಕ್ಷೇತ್ರದಲ್ಲಿ ಕಳೆದ 38ವರ್ಷಗಳಿಂದ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಅಭಿನಂದಿಸಲಾಯಿತು.
ಈ.ಎಸ್.ವೆoಕಟೇಶ ಬಾಬುರವರು ವಿಜಯವಾಣಿ, ಪೊಲೀಸ್ ನ್ಯೂಸ್,ಲಂಕೇಶ್ ಪತ್ರಿಕೆ, ಪೊಲೀಸ್ ವಾರ್ತೆ ಸೇರಿದಂತೆ ಇನ್ನಿತರೆ ವಾರಪತ್ರಿಕೆಗಳಲ್ಲಿ ಪೂರ್ಣಾವಧಿ ಮತ್ತು ಅರೆಕಾಲಿಕ ವರದಿಗಾರರಾಗಿ ಸೇವೆ ಸಲ್ಲಿಸಿದ ನಂತರ 2010ನೇ ಸಾಲಿನಿಂದ ವಿದ್ಯಾರಂಜಕ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀಯುತರು ಅಂಗವಿಕಲರಾಗಿದ್ದು,ಆದರೂ ಸಹ ವೃತ್ತಿಕ್ಷಮತೆಯನ್ನು ಮುಂದುವರೆಸಿಕೊoಡು ಬರುತ್ತಿದ್ದಾರೆ.ಪ್ರಸ್ತುತ ತಾನು 74ನೇ ವಸಂತದಲ್ಲಿರುವ ನನ್ನನ್ನು ಜಿಲ್ಲಾಡಳಿತ ಗುರುತಿಸಿ ಸತ್ಕರಿಸುವುದು ತನಗೆ ಸಂತಸ ತಂದಿದೆ ಎoದು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಡೆದಿರುವ ಈ ಗೌರವ ನನ್ನ ಜೀವನ್ಮಾನದ ಸ್ಮರಣೀಯ ಕ್ಷಣ ಎಂದು ಸ್ಮರಿಸಿ ಭಾವುಕರಾದರು.
ಈ ಸಂದರ್ಭದಲ್ಲಿ ಸಿದ್ಧರಬೆಟ್ಟದ ಡಾ. ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು, ಕ.ಸಾ.ಪ. ಜಿಲ್ಲಾಧ್ಯಕ್ಷರಾದ ಸಿದ್ಧಲಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಸಮ್ಮುಖದಲ್ಲಿ ಗೌರವ ಸಮರ್ಪಣೆ ಜರುಗಿದೆ.