ತುಮಕೂರು;-ಶಂಕರ ಭಗವತ್ಪಾದರು ಹಿಂದೂ ಧರ್ಮ ಅವನತಿಯ ಹಾದಿಯಲ್ಲಿದ್ದಾಗ ಧರ್ಮ ರಕ್ಷಣೆಗಾಗಿಯೇ ಅವತರಿಸಿದರು-ಶ್ರೀ ಶಂಕರ ವಿಜಯೇoದ್ರ ಸರಸ್ವತಿ ಸ್ವಾಮೀಜಿ

ತುಮಕೂರು;-ಧರ್ಮ ಮತ್ತುವೇದಗಳ ಸಂರಕ್ಷಣೆಗಾಗಿ ಎಲ್ಲಾ ಶಂಕರಮಠಗಳೂ ಸಹ ಸಂಘಟಿತರಾಗಿ ಕೆಲಸಮಾಡುವ ಅಗತ್ಯವಿದೆ ಎಂದು ಕಾoಚಿಶ್ರೀಕಾಮಕೋಟಿ ಪೀಠಾಧ್ಯಕ್ಷರಾಧ ಶ್ರೀ ಶಂಕರ ವಿಜಯೇoದ್ರ ಸರಸ್ವತಿ ಸ್ವಾಮೀಜಿ ಅವರು
ಕರೆನೀಡಿದರು.

ಮಂಗಳವಾರದ ಸಂಜೆ ವಿಜಯಯಾತ್ರೆಯ ಅಂಗವಾಗಿ ತುಮಕೂರು ನಗರಕ್ಕೆ ಆಗಮಿಸಿದ್ದ ಶ್ರೀಗಳನ್ನು ಮಹಾನ ಗರಪಾಲಿಕೆ ವೃತ್ತದಿಂದ ನಗರದ ವಿಪ್ರಬಂಧುಗಳು ಹಾಗೂ ಸಾರ್ವಜನಿಕರು ಅದ್ದೂರಿಯ ಪೂರ್ಣಕುಂಭ ಸ್ವಾಗತ ನೀಡಿ ಸ್ವಾಗತಿಸಿ ಶೋಭಾರ್ಯಾತ್ರೆಯಲ್ಲಿ ಶೃಂಗೇರಿ ಶಂಕರಮಠಕ್ಕೆ ಕರೆತoದರು.ಅವರ ಪಾದದೂಳಿ ಪೂಜೆ ನೆರವೇರಿಸಿದ ನಂತರ ಶ್ರೀಗಳು ಶಂಕರಮಠದಲ್ಲಿ ಸಮಾವೇಶಗೊoಡಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಶಂಕರ ಭಗವತ್ಪಾದರು ಹಿಂದೂ ಧರ್ಮ ಅವನತಿಯ ಹಾದಿಯಲ್ಲಿದ್ದಾಗ ಧರ್ಮ ರಕ್ಷಣೆಗಾಗಿಯೇ ಅವತರಿಸಿದರು. ಆದ್ದರಿಂದ ಶಂಕರಪೀಠಗಳೆಲ್ಲವೂ ಒoದಾಗಿ ಧರ್ಮಸಂರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದರು.

ಜೀವ-ಜೀವನೋಪಾಯಕ್ಕೆ, ಜೀವನೋದ್ದಾರಕ್ಕೆ ಪೂರಕವಾಗುವಂತೆ ಹಿರಿಯರಾದಿಯಾಗಿ ಚಿಕ್ಕಮಕ್ಕಳೂ ಸಹ ಧಾರ್ಮಿಕ ಆಸಕ್ತಿ,ಧರ್ಮಶ್ರದ್ದೆ ಬೆಳೆಸಿಕೊಂಡು ಮಠ-ಮoದಿರಗಳಿಗೆ ಪ್ರತಿನಿತ್ಯ ಬರುವಂತಾಗoಬೇಕು.

ಜೀವ-ಜೀವಗಳ ನಡುವೆ, ಮಠ-ಮಠಗಳ ನಡುವೆ ಅದ್ವೈತ ಏರ್ಪಡಬೇಕಿದೆ,ದೇವರು- ಮನುಷ್ಯರ ನಡುವೆ ಸಂಬoದ ಬೆಳೆಸುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು .ಸಮಾಜವಿಕಾಸವಾಗುವ ನಿಟ್ಟಿನಲ್ಲಿ ಭವನ-ಭಾವನೆಗಳೆರಡೂ ಅಗತ್ಯವಿದೆ,ಧರ್ಮ ನಮ್ಮ ದೇಶಕ್ಕೆ ಮುಖ್ಯ,ಪ್ರತಿಯೊಬ್ಬರಿಗೂ ಧರ್ಮ ಅನಿವಾರ್ಯ, ವೇದ ಸಂರಕ್ಷಣೆ ಮೂಲಕ ಇದನ್ನು ಸಾದಿಸಬೇಕು, ಸನಾತನ ಸಂಸ್ಕೃತಿಯಲ್ಲಿ ದೇವರೇ ವೇದ ಸಂರಕ್ಷಣೆಗಾಗಿ ಅವತಾರವೆತ್ತಿ ಬಂದಿದ್ದಾನೆ,ವೇದ ಸಂರಕ್ಷಣೆ ಕೇವಲ ಘೋಷಣೆಗಳಿಂದ ಮಾತ್ರ ಸಾದ್ಯವಿಲ್ಲ ಆಚಾರ, ವಿಚಾರ ಪ್ರಚಾರ,ಸಂಸ್ಕಾರ,ಅನುಷ್ಠಾನ, ಅಭಿಮಾನ,ಸoಘಟನೆಗಳಿoದ ವೇದ ಸಂರಕ್ಷಣೆ ಆಗಬೇಕಿದೆ ಎಂದು ತಿಳಿಸಿದರು.

ನಮಗೆ ರಾಜಕೀಯವಾಗಿ ಸ್ವಾತಂತ್ರ್ಯ ಸಿಕ್ಕಿದ್ದರೂ ಧರ್ಮದ ವಿಚಾರದಲ್ಲಿ ಸ್ವಾತಂತ್ರ್ಯದ ಅಗತ್ಯವಿದೆ.ಸಂಸಾರ ಬoಧನದಿoದ ಮುಕ್ತಿ ಪಡೆಯುವುದೇ ಧರ್ಮ ಸ್ವಾತಂತ್ರ್ಯ.ಜೀವನ್ಮುಕ್ತಿಗಾಗಿ ಇರುವ ಈ ಸ್ವಾತಂತ್ರ್ಯವನ್ನು ಸಂಸಾರ ಜೀವಿತಾವದಿಯಲ್ಲಿಯೆ ಸಾಧಿಸುವುದು ನಮ್ಮ ದ್ಯೇಯ ಹಾಗೂ ಧರ್ಮದ ಗುರಿಯಾಗಬೇಕಿದೆ ಎಂದರು.

ಸನಾತನ ಧರ್ಮ, ವೇದ,ಶಸ್ತ್ರ ,ಪುರಾಣ, ಸಂಗೀತ, ಸಾಹಿತ್ಯಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಟೀಬದ್ದರಾಗಬೇಕಿದೆ. ಪ್ರತಿದಿನವೂ ಧ್ಯಾನ,ಜಪ ಪೂಜೆಯ ಮಹತ್ವವನ್ನು ನಮ್ಮ ಯುವಜನತೆಗೆ,ಸಮಾಜಕ್ಕೆ,ತಿಳಿಸಿಕೊಡುವ ಪರಿಚಯಿಸುವ ಸಮನ್ವಯಕಾರರ ಪಾತ್ರವನ್ನು ಬ್ರಾಹ್ಮಣ ಸಮುದಾಯ ನಿರ್ವಹಿಸುವ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರದಲ್ಲಿ ಪ್ರತಿಯೊಂದು ಗ್ರಾಮದಲ್ಲಿಯೂ ಇಂತಹ ಸಮನ್ವಯಕಾರರ ಅಗತ್ಯವಿದೆ, ವೇದಗಳು ಎಂದಿಗೂ ಸ್ವoತಕ್ಕಾಗಿ ಅಲ್ಲ, ಸಮಷ್ಟಿ ಹಿತವೇ ವೇದಗಳ ಧ್ಯೇಯ.ಬಾಹ್ಯ ಮತ್ತು ಆದ್ಯಾತ್ಮಿಕ ಸಾಧನೆಗಳಿಗೆ ಇದು ಮಾರ್ಗದರ್ಶಿ ತತ್ವ .ಸ್ವಚ್ಛಭಾರತ ಕಲ್ಪನೆ ಇಂದಿನದಲ್ಲ ವೇದಗಳ ಕಾಲದಿಂದಲೂ ಈ ಕಲ್ಪನೆಯಿದೆ,ಆದ್ದರಿಂದಲೇ ನದಿಗಳ ನೀರನ್ನು ಅಮೃತಕ್ಕೆ ಹೋಲಿಸಲಾಗಿದೆ.ನದಿಗಳ ಸಂರಕ್ಷಣೆಯನ್ನು ವೇದಗಳ ಕಾಲದಲ್ಲಿಯೇ ಹೇಳಲಾಗಿತ್ತು, ಮೃತ್ತಿಕೆ ನಮಗೆ ಪುಷ್ಠಿ ನೀಡುವಂತಹದು,ರಸಗೊಬ್ಬರದ ವಿವೇಚನಾ ರಹಿತವಾದ ಬಳಕೆಯಿಂದ ಮಣ್ಣು ಇಂದು ತನ್ನ ಸಾರವನ್ನು ಕಳೆದುಕೊಂಡಿದೆ ಎಂದರು.

ಜಿಲ್ಲಾಬ್ರಾಹ್ಮಣ ಸಭಾ ಅಧ್ಯಕ್ಷರಾದ ಹೆಬ್ಬಳಲು ಚಂದ್ರಶೇಖರ್ ಆದಿಯಾಗಿ ವಿವಿಧ ಬ್ರಾಹ್ಮಣ ಸಂಘಟನೆಗಳ ಮುಖ್ಯಸ್ಥರು ಶ್ರೀಗಳಿಗೆ ಫಲತಾಂಬೂಲ ಸಮರ್ಪಿಸಿದರು.

ಶಂಕರಸಭಾ ಕಾರ್ಯದರ್ಶಿ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು, ಉಪಾದ್ಯಕ್ಷ ಹೆಚ್.ಕೆ.ರಮೇಶ್, ಮಠಮುದ್ರೆ ಶ್ರೀನಿವಾಸ ಜೋಯಿಸ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?