ತುಮಕೂರು:ವಾಣಿಜ್ಯ ವಿಭಾಗಕ್ಕಾಗಿ 5 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲು ವಿವಿಯು ನಿರ್ಧರಿಸಿದ್ದು, ಹೊಸ ವರ್ಷದಿಂದ ಕಟ್ಟಡ ನಿರ್ಮಾಣ ಕಾರ್ಯರಂಭವಾಗಲಿದೆ ಎಂದು ಕುಲಪತಿ ಪ್ರೊ. ಎಂ.ವೆoಕಟೇಶ್ವರಲು ತಿಳಿಸಿದರು.
ವಿವಿ ಕಲಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗವು ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ‘ಆರಂಭ’ಹಾಗೂ ಡಾ.ಜಿ.ಪರಮೇಶ್ವರ್ ಬ್ಲಾಕ್ಗೆ ಸ್ಥಳಾಂತರಗೊoಡಿರುವ ವಿಭಾಗದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಭವಿಷ್ಯದ ನಾಯಕರಾಗಬೇಕಾದರೆ ಸ್ವಯಂ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಯಶಸ್ವಿ ವ್ಯಕ್ತಿಯಾಗಲು ಕೋಶ ಓದಬೇಕು-ದೇಶ ಸುತ್ತಬೇಕು.ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳಾ ಸುರಕ್ಷಿತ ವಾತಾವರಣ ಸೃಷ್ಟಿಸಬೇಕು.ಅಧಿಕಾರಿಗಳು ವಿದ್ಯಾರ್ಥಿಗಳ ಜೊತೆ ಬೆರೆತು ಅವರ
ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದರು.
ಸ್ಕಿಲ್ಫಿಕ್ಸ್ ಸಂಸ್ಥೆಯ ಸಂಸ್ಥಾಪಕ ವಿನಯ್ ಪಾಟೀಲ್ ಮಾತನಾಡಿ,ಸಕಾರಾತ್ಮಕವಾಗಿ ಮಕ್ಕಳ ಮೇಲೆ ಪ್ರಭಾವ ಬೀರಿದಾಗ ಅವರಲ್ಲಿ ಜ್ಞಾನೋದಯವಾಗುತ್ತದೆ.ಸಾಮಾಜಿಕ ಮಾಧ್ಯಮಗಳಲ್ಲಿ ಇತರರ ಬದುಕಿನ ಭಾಗವನ್ನು ವೀಕ್ಷಿಸುತ್ತಾ ಕಾಲಾಹರಣ ಮಾಡುವ ಬದಲು ನಮ್ಮ ಬಲವನ್ನು, ಆತ್ಮವಿಶ್ವಾಸವನ್ನು ಅರಿಯುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಸಂಕೀರ್ಣ, ಅಸ್ಪಷ್ಟ, ಅನಿಶ್ಚಿತ ಬದುಕನ್ನು ಸಾಗಿಸುತ್ತಿದ್ದೇವೆ.ಮನಸ್ಥಿತಿಯನ್ನು ಸದೃಢ ಮಾಡಿಕೊಳ್ಳಬೇಕು.ಭವಿಷ್ಯವನ್ನುಇಂದೇ ನಿರ್ಧರಿಸಿ, ಆ ಗುರಿಯೆಡೆದೆ ಸಾಗುವ ಶ್ರಮವಹಿಸಬೇಕು.ನಮ್ಮೊಳಗಿನ ಬೆಳಕಿನ ಕಿರಣವನ್ನು ಹುಡುಕಬೇಕು ಎಂದರು.
ಕುಲಸಚಿವೆ ನಾಹಿದಾಜoಮ್ಜoಮ್, ಪ್ರೊ.ಪಿ.ಪರಮಶಿವಯ್ಯ,ಪ್ರೊ.ನೂರ್ ಅಫ್ಜಾ, ಪ್ರೊ.ಬಿ. ಕರಿಯಣ್ಣ ಡಾ.ಶ್ರೀನಿವಾಸಮೂರ್ತಿ. ಎಂ.ಡಿ.ಉಪಸ್ಥಿತರಿದ್ದರು.