ತುಮಕೂರು-ಕೋರ ಹೋಬಳಿ ಅವಳಿಪಾಳ್ಯ ಗ್ರಾಮದ ನರಸಿಂಹಯ್ಯ (85 ವರ್ಷ) ಡಿ,10ರ ಮಂಗಳವಾರ ತುಮಕೂರು ನಗರಕ್ಕೆ ಹೋಗಿ ಬರುವುದಾಗಿ ಕುಟುಂಬಸ್ಥರಿಗೆ ಹೇಳಿ ಹೋದವರು ಕಣ್ಮರೆಯಾಗಿದ್ದು ಇಲ್ಲಿಯವರೆಗೂ ಮರಳಿ ಬಾರದ ಕಾರಣ ಆತಂಕಕ್ಕೆ ಒಳಗಾಗಿರುವ ಕುಟುಂಬಸ್ಥರು ಅವರನ್ನು ಪತ್ತೆ ಮಾಡಿಕೊಡುವಂತೆ ಪೋಲೀಸರ ಮೊರೆ ಹೋಗಿದ್ದಾರೆ.
ನರಸಿಂಹಯ್ಯ 6 ಅಡಿ ಎತ್ತರವಿದ್ದು, ಕೋಲು ಮುಖ, ಸಾಧಾರಣ ಮೈಕಟ್ಟು, ,ಕೆಂಪು ಮೈ ಬಣ್ಣ ಹೊಂದಿದ್ದು ಕಾಣೆಯಾಗುವ ಸಮಯದಲ್ಲಿ ,ತುಂಬು ತೋಳು ಶರ್ಟ್ ಹಾಗೂ ಬಿಳಿ ಪಂಚೆ ತೊಟ್ಟಿದ್ದರು.
ಇವರ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ 0816 2278000,9480802900 ಅಥವಾ ಕೋರ ಪೊಲೀಸ್ ಠಾಣೆ 0816242006 ,948080 2949 ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ.
———–ಶ್ರೀನಿವಾಸ್ ಕೊರಟಗೆರೆ