ತುಮಕೂರು-ದ,ಲಿತ ಕಾಲೋನಿಯ ಹತ್ತಿರದಲ್ಲೇ ವೈನ್ಸ್ ಸ್ಟೋರ್-ತೆರವು ಗೊಳಿಸಿ ಅಥವಾ ಸ್ಥಳಾಂತರಿಸಿ-ಇಲ್ಲ ಪ್ರತಿಭಟನೆ ಎದುರಿಸಲು ಮುಂದಾಗಿ-ಎನ್.ಕೆ.ನಿಧಿಕುಮಾರ್‌

ತುಮಕೂರು-ದಿಬ್ಬೂರು ಗೇಟ್ ಹತ್ತಿರ ನೂತನವಾಗಿ ಶ್ರೀನಿವಾಸ ವೈನ್ಸ್ ಪ್ರಾರಂಭವಾಗಿದ್ದು ದಲಿತ ಕಾಲೋನಿ ಹತ್ತಿರದಲ್ಲೇ ಈ ಮದ್ಯದಂಗಡಿಯನ್ನು ತೆರೆದಿರುವ ಪ್ರಯುಕ್ತ ಇಲ್ಲಿನ ಸಾರ್ವಜನಿಕರು ಸೇರಿದಂತೆ ಮಕ್ಕಳು ಸಹ ಅಡ್ಡದಾರಿ ಹಿಡಿಯುವ ಸಾಧ್ಯತೆಗಳು ಬಹಳವಿದ್ದು ಅದನ್ನು ಕೂಡಲೇ ತೆರವುಗೊಳಿಸಬೇಕೆಂದು ಇoದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಅಬಕಾರಿ ಉಪ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದ್ದಾಗಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್‌ ತಿಳಿಸಿದರು.

ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು,ಈ ವೈನ್ ಸ್ಟೋರ್ ನ ಹತ್ತಿರದಲ್ಲಿಯೇ ಸರ್ಕಾರಿ ಶಾಲೆಯು ಸಹ ಇದ್ದು ಈ ಭಾಗದಲ್ಲಿ ಹೆಣ್ಣು ಮಕ್ಕಳು, ವೃದ್ಧರು,ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಓಡಾಡುತ್ತಾರೆ, ಇಂತಹ ಜಾಗದಲ್ಲಿಯೇ ವೈನ್ ಸ್ಟೋರ್ ಪ್ರಾರಂಭವಾಗಿದ್ದು ಎಲ್ಲರಿಗೂ ತೊಂದರೆಯಾಗಿದೆ, ಅದನ್ನು ಕೂಡಲೇ ಸ್ಥಳಾಂತರಿಸಬೇಕು ಅಥವಾ ತೆರವುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಇಲ್ಲವಾದಲ್ಲಿ ನಮ್ಮ ಸಂಘಟನೆಯ ವತಿಯಿಂದ ಪ್ರತಿಭಟನೆ ಮಾಡಲು ಮುಂದಾಗಬೇಕಾ ಗುತ್ತದೆoದು ಅವರು ಸಂಬಂಧಪಟ್ಟ ಇಲಾಖೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಮನವಿ ಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದ್ರಕುಮಾರ್ ಡಿ.ಕೆ., ದರ್ಶನ್ ಬಿ.ಆರ್,ಲಕ್ಷ್ಮಿ ನಾರಾಯಣ ಎಸ್, ಶ್ರೀನಿವಾಸ್, ಇಮ್ರಾನ್, ತನ್ವೀರ್, ಶಾರು
ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?