ತುಮಕೂರು: ಸಂಸ್ಕೃತಿ, ಸಂಸ್ಕಾರದೊಂದಿಗೆ ಮಕ್ಕಳ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ತುಮಕೂರು ಗ್ರಾಮಾಂತರ ತಾಲ್ಲೋಕಿನ ಯೋಜನಾಧಿಕಾರಿಗಳಾದ ಪಿ.ಬಿ.ಸಂದೇಶ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ಬೆಳ್ಳಾವಿ ವಲಯದ ಕೊತ್ತಿಹಳ್ಳಿ ಕಾವಲ್ ಶ್ರೀ ಸಿದ್ದಗಂಗಾ ಪ್ರೌಢ ಶಾಲೆಯ 1೦ನೇ ತರಗತಿ ಮಕ್ಕಳಿಗೆ ಮೂರು ತಿಂಗಳು ಟೂಷನ್ ಕ್ಲಾಸ್ ಹಮ್ಮಿಕೊಂಡಿದ್ದು ಈ ದಿನ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲಾ ಮಕ್ಕಳು ಉತ್ತಮ ಫಲಿತಾಂಶ ಪಡೆಯಿರಿ ಹಾಗೆ 1೦ನೇ ತರಗತಿ ಫಲಿತಾಂಶದಲ್ಲಿ ಮಕ್ಕಳು ಉತ್ತಮ ಅಂಕಗಳಿಸಿ ಎಲ್ಲರೂ ಪ್ರಥಮ ದರ್ಜೆಯಲ್ಲಿ ಪಾಸಾಗಿ ಎಂದು ಶುಭಹಾರೈಸಿದರು.
ಶಾಲೆಯ ಮುಕ್ಯೋಪಾಧ್ಯಾಯರಾದ ಶಶಿಕಲಾ ರವರು ಮಕ್ಕಳು ಬೆಳಿಗ್ಗೆ ಬೇಗ ಎದ್ದು ಓದುವ ಬಗ್ಗೆ ತಿಳಿಸಿ ಮಕ್ಕಳಿಗೆ ಛಲ ಇರಬೇಕು. ಹಸಿವು ನಿದ್ರೆ ಬಿಟ್ಟು ಓದಿ ಉತ್ತಮ ಫಲಿತಾಂಶ ಬಂದರೆ ನಾವು ಧರ್ಮಸ್ಥಳಕ್ಕೆ ಮತ್ತು ಪೂಜ್ಯ ದಂಪತಿಗಳಿಗೆ ಅದೇ ನಮ್ಮ ಶಾಲೆಯ ಕೊಡುಗೆ ಆಗಬೇಕು ಎಂದು ತಿಳಿಸಿ ಯೋಜನೆಯ ಕಾರ್ಯಕ್ರಮ ಅತ್ತ್ಯುತ್ತಮ ಎಂದರು.

ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಸುದರ್ಶನ್.ವೈ.ಎಂ. ಶಾಲೆಯ ಶಿಕ್ಷಕ ವೃಂದದವರು, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಜಮುನ, ಉಪಾದ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಮ್ಮ,ಸೇವಾಪ್ರತಿನಿಧಿ ಮಂಜುಳಾ ,ಶಾಲಾ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಗೌರವ ಶಿಕ್ಷಕರಾದ ಶ್ರೀಮತಿ ರೂಪಾ, ಸ್ವಾಗತವನ್ನು ಶ್ರೀಮತಿ ಭವ್ಯ ರವರು ಮತ್ತು ಕಾರ್ಯಕ್ರಮದ ವಂದನಾರ್ಪಣೆ ಶಾಲೆಯ ದೈಹಿಕ ಶಿಕ್ಷಕರು ಶ್ರೀಯುತ ಮಂಜುನಾಥ ಸರ್ ಅವರು ನೆರವೇರಿಸಿ ಕೊಟ್ಟರು.
- ಕೆ.ಬಿ.ಚಂದ್ರಚೂಡ