ತುಮಕೂರು-ಬಾಬಾ-ಸಾಹೇಬ್-ಅಂಬೇಡ್ಕರ್-ರವರ-ಹೆಸರಿಗೆ-ಬಿಜೆಪಿ-ಮಸಿ-ಬಳಿಯುವ-ಕೆಲಸ-ಮಾಡುತ್ತಿದೆ-ಇಕ್ಬಾಲ್ ಅಹಮದ್


ತುಮಕೂರು: ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತಕ್ಕೆ ಸಮಾನತೆ, ಸ್ವಾತಂತ್ರ ಮತ್ತು ಭಾತೃತ್ವವೆಂಬ ಮೂರು ತತ್ವಗಳನ್ನು ಒಳಗೊಂಡ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದು, ಇದಕ್ಕೆ ಧಕ್ಕೆತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಟಿ.ಶ್ರೀನಿವಾಸ್ ದೂರಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದಅವರು,ಜಾತಿ,ಧರ್ಮ, ಭಾಷೆಯ ಹೆಸರಿನಲ್ಲಿ ಜನರ ನಡುವೆ ಕಂದಕವನ್ನು ಉಂಟು ಮಾಡಿ, ಇಡೀ ದೇಶದ ಶಾಂತಿಯನ್ನೇ ಕದಡುವ ಕೆಲಸ ಮಾಡುತ್ತಿದೆ.ಇದರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಧ್ವನಿ ಎತ್ತಬೇಕಾಗಿದೆ ಎಂದರು
ರಾಜ್ಯದಲ್ಲಿ ಹಾಲಿನ ದರ,ಇಂಧನಗಳ ಮೇಲಿನ ಸೆಸ್ ಹೆಚ್ಚಳವನ್ನೇ ದೊಡ್ಡದು ಮಾಡಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ.ಆದರೆಕೇಂದ್ರ ಸರಕಾರ ಗ್ಯಾಸ್ ದರ ಹೆಚ್ಚಳ,ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ,ಇಂಧನ ಬೆಲೆ ಹೆಚ್ಚಳದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಹ ಹೋರಾಟ ನಡೆಸುವ ಬೆಲೆ ಹೆಚ್ಚಳದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟವರಿಗೆ ತಿರುಗೇಟು ನೀಡುವ ಕೆಲಸ ಆಗಬೇಕಾಗಿದೆ.ಶೋಷಿತರ ಪರವಾಗಿ ಧ್ವನಿ ಎತ್ತಬೇಕಾಗಿದೆ. ತುಮಕೂರು ನಗರದಲ್ಲಿ ಡಾ.ಜಿ.ಪರಮೇಶ್ವರ ಅವರು ತಮ್ಮ ಸ್ವಂತ ಹಣದಲ್ಲಿ ಬಾಬಾ ಸಾಹೇಬರ ಮೂರ್ತಿ ಪ್ರತಿಷ್ಠಾಪಿಸುತಿದ್ದು,ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಪಾಲ್ಗೊಂಡು, ಅವರ ಕೈ ಬಲಪಡಿಸುವ ಕೆಲಸ ಮಾಡಬೇಕಾಗಿದೆಎಂದು ಎಸ್.ಟಿ.ಶ್ರೀನಿವಾಸ್ ನುಡಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು, ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಮಾರಲ್ ಪೊಲೀಸ್ ಹೆಸರಿನಲ್ಲಿ ಜನರ ನಡುವೆ ಉಂಟಾಗಿದ್ದ ಕಂದಕವನ್ನು ಮತ್ತಷ್ಟು ವಿಸ್ತರಿಸುವ ಕೆಲಸ ಮಾಡುತ್ತಿದೆ.ಇದು ಸಂವಿಧಾನ ವಿರೋಧಿಯಾಗಿದ್ದು, ಬಾಬಾ ಸಾಹೇಬರ ಹೆಸರಿಗೆ ಮಸಿ ಬಳಿಯುವ ಕೆಲಸವಾಗಿದೆ. ಸಂವಿಧಾನದ ಮೇಲಿನ ಪರೋಕ್ಷ ದಾಳಿಯಾಗಿದೆ.ದೇಶದಲ್ಲಿ ಶಾಂತಿ ನೆಲಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗಿದೆ. ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಕಾಂಗ್ರೆಸ್ ಅಧ್ಯಕ್ಷಚಂದ್ರಶೇಖರ್‌ಗೌಡ ಮಾತನಾಡಿ, ತಾವು ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಷ್ಯತೆಯ ನೋವುಗಳಿಗೆ ಸಂವಿಧಾನದ ಮೂಲಕ ಪರಿಹಾರಕಂಡುಕೊಂಡವರು ಬಾಬಾ ಸಾಹೇಬ್‌ಅಂಬೇಡ್ಕರ್, ದೇಶಕ್ಕೆ ಸ್ವಾತಂತ್ರದೊರೆಯುವ ಮುನ್ನ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ನಿಮ್ನ್ ವರ್ಗಗಳಿಗೆ ಸ್ವಾತಂತ್ರ ಲಭಿಸಬೇಕು ಎಂಬುದುಅಂಬೇಡ್ಕರ್ ಅವರ ವಾದವಾಗಿತ್ತು.ಅದನ್ನು ಸಕಾರ ಮಾಡಿದರು.ಸಂಸ್ಕೃತವನ್ನುಅಭ್ಯಾಸ ಮಾಡಿ, ಶೋಷಣೆಗೆಕಾರಣವಾಗಿದ್ದ ಮನುಸೃತಿಯನ್ನು ಓದಿ, ಅರ್ಥ ಮಾಡಿಕೊಂಡು,ಅದನ್ನು ಸುಡುವ ಮೂಲಕ ದಲಿತರನ್ನು ಶೋಷಣೆಯಿಂದ ಮುಕ್ತಗೊಳಿಸಲು ಕಾರಣರಾದರು ಎಂದರು.

ವೇದಿಕೆಯಲ್ಲಿ ಜಿಲ್ಲಾ ವಕ್ತಾರರಾದ ಕೆ.ಎಂ.ಸುಜಾತ,ಮಹೇಶ್(ಮೆಸ್),ನರಸೀಯಪ್ಪ,ತೋವಿನಕೆರೆ ಪುಟ್ಟರಾಜು,ಕೆಂಪರಾಜು ಇತರರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?