ಚಿಕ್ಕಮಗಳೂರು-ಅಂಬೇಡ್ಕರ್-ಮತದಾನದ-ಬ್ರಹ್ಮಸ್ತ್ರದಿಂದ- ಪ್ರಜಾಪ್ರಭುತ್ವ-ಆಳ್ವಿಕೆ-ಸಿ.ಟಿ.ರವಿ

ಚಿಕ್ಕಮಗಳೂರು:- ದೇಶದಲ್ಲಿ ಪ್ರಜಾಪ್ರಭುತ್ವ ಆಳ್ವಿಕೆಗಾಗಿ ಬಿ.ಆರ್.ಅಂಬೇಡ್ಕರ್ ಹಲವಾರು ನೋವು, ಅವಮಾನವನ್ನು ಸಹಿಸಿಕೊಂಡು ಸಂವಿಧಾನ ರಚಿಸಿ, ಅಮೂಲ್ಯ ಮತದಾನದ ಬ್ರಹ್ಮಸ್ತ್ರವನ್ನು ಜನತೆಗೆ ನೀಡಿ ರಾಷ್ಟ್ರದ ಪರಿವರ್ತನೆಗೆ ಭದ್ರಕೋಟೆ ನಿರ್ಮಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ನಗರದ ಜಿಲ್ಲಾ ಪಾಂಚಜನ್ಯ ಕಚೇರಿಯಲ್ಲಿ ಭಾರತ ರತ್ನ ಡಾ|| ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಸೋಮವಾರ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಮತದಾನ ಯಾವುದೇ ಸ್ಥಾನಪಲ್ಲಟ ಹಾಗೂ ಭವ್ಯಭಾರತ ನಿರ್ಮಾಣಕ್ಕೆ ಪ್ರಮುಖ ಅಸ್ತ್ರ. ಆ ನಿಟ್ಟಿನಲ್ಲಿ ಅಂಬೇಡ್ಕರ್ ಸಂವಿಧಾನ ರಚಿಸುವ ಕಾಲಘಟ್ಟದಲ್ಲಿ ಶ್ರೀಮಂತರು, ತೆರಿಗೆ ಕಟ್ಟುವವರು ಸೀಮಿತಗೊಳಿಸದೇ ದೇಶದ ಪ್ರತಿಯೊಬ್ಬ ಪ್ರಜೆಗೂ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಿ ರಾಷ್ಟ್ರದ ಸಮಸ್ತ ವರ್ಗಕ್ಕೂ ಆಸರೆಯಾದರು ಎಂದರು.

ವಿಶ್ವವೇ ಭಾರತದತ್ತ ತಿರುಗಿ ನೋಡುವಂಥ ಸಂವಿಧಾನ ರಚಿಸಿದ ಅಂಬೇಡ್ಕರ್ ಬಡತನ, ಅಸ್ಪಶ್ಯತೆ ಇನ್ನಷ್ಟು ಹೋಗಲಾಡಿಸಲು ಚುನಾವಣೆ ಅಖಾಡಕ್ಕೆ ಕಾಲಿಟ್ಟರು. ಆದರೆ ಕಾಂಗ್ರೆಸ್ ಕೆಲವು ಕಮ್ಯೂನಿಸ್ಟ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಂಬೇಡ್ಕರ್ ವಿರುದ್ಧವೇ ಪರಿಶಿಷ್ಟರನ್ನು ಎತ್ತಿಕಟ್ಟಿ ಸೋಲಿಸಿ, ಅಪಮಾನಿಸಿದರು ಎಂದು ಹೇಳಿದರು.

ಅಂಬೇಡ್ಕರ್‌ಗೆ ಭಾರತ ರತ್ನ ಕೊಡುವಲ್ಲಿ ಕಾಂಗ್ರೆಸ್ ವಿಫಲತೆ ಹೊಂದಿತು. ಬದುಕಿದ್ದಾಗಲೇ ನೆಹರು, ಇಂದಿರಾಗಾಂಧಿ ತಮಗೇ ತಾವೇ ಶ್ರೇಷ್ಟರು ಎಂದು ಭಾರತ ರತ್ನ ಪಡೆದುಕೊಂಡಿತು. ಸ್ಮಾರಕ ವಿಚಾರದಲ್ಲೂ ಕಾಂಗ್ರೆಸ್ ಹಿನ್ನೆಡೆ ತೋರಿತು. ತದನಂತರ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ 1991ರಲ್ಲಿ ಅಧಿಕಾರ ಹಿಡಿದು ಮೊಟ್ಟಮೊದಲು ಸ್ಮಾರಕ ನಿರ್ಮಿಸಿ ಗೌರವ ಸೂಚಿಸಿತು ಎಂದರು.

ಕಾಂಗ್ರೆಸ್ ಅಧಿಕಾರ ಉಳಿವು, ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಸಂವಿಧಾನ ಅನೇಕ ಭಾರಿ ತಿದ್ದುಪಡಿ ಮಾಡಿದೆ. ಇದೀಗ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಭಯದಿಂದ ಸಂವಿಧಾನ ಕೈಪಿಡಿ ಹಿಡಿದುಕೊಂಡಿದೆ. ವಿ. ಪಕ್ಷ ನಾಯಕ ರಾಹುಲ್ ಸಂವಿಧಾನ ಅಂಬೇಡ್ಕರ್ ರಚನೆಯಲ್ಲ, ಹಿಂದೆಯೇ ರಚಿಸಲಾಗಿತ್ತು ಎಂದೇಳಿ ಅಂ ಬೇಡ್ಕರ್ ಆಶಯಕ್ಕೆ ಕೊಡಲಿಪೆಟ್ಟು ಹಾಕಿದ್ದು ಈ ಬಗ್ಗೆ ಕ್ರಮ ಯಾವ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಭಾಜಪ ಕಾರ್ಯಕರ್ತರು ಭಾರತಾಂಬೆಗೆ ಸೂಚಿಸುವ ಗೌರವ ಅಂಬೇಡ್ಕರ್‌ಗೂ ಸೂಚಿಸುತ್ತಾರೆ. ಆದ್ದರಿಂದಲೇ ಅಂಬೇಡ್ಕರ್‌ಗೆ ಭಾರತ ರತ್ನವನ್ನು ವಾಜಪೇಯಿ ನೀಡಿದರು. ಅಂಬೇಡ್ಕರ್ ಸಾವಿನಲ್ಲೂ ಕಾಂಗ್ರೆಸ್ ಸ್ಥಳ ನೀಡಲಿಲ್ಲ. ಬಳಿಕ ಅಂತ್ಯಸಂಸ್ಕಾರ ಕಡಲತೀರದಲ್ಲಿ ನಡೆಯಿತು. ಇದೀಗ ಮೋದಿ ಸರ್ಕಾರ ಅಂಭೇಡ್ಕರ್ ಸಂಬಂಧಿಸಿದ ಒಂದೊಂದು ಸ್ಥಳವನ್ನು ಸಮಾನತೆ ಸಾರುವ ಸ್ಥಳವಾಗಿ ಮಾರ್ಪಾಡಿಸುತ್ತಿದೆ ಎಂದರು.

ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ನೋವು, ಶೋಷಣೆಯಿಂದ ಒಳಗಾಗಿದ್ಧ ಕಾಲದಲ್ಲಿ ದೇಶದ ಜನತೆಗೆ ಮಹಿಳಾ ಸಬಲೀಕರಣಕ್ಕೆ ಮೀಸಲಾತಿ ಹಾಗೂ ಮತದಾನದ ಅಸ್ತ್ರವನ್ನು ಅಂಬೇಡ್ಕರ್ ನೀಡಿದ್ದು, ಆಸೆ ಆಮಿಷಕ್ಕೆ ಒಳಗಾಗದೇ ಸಮರ್ಪಕ ನಾಯಕರನ್ನು ಗುರುತಿಸುವ ಮಹತ್ತ ರ ಜವಾಬ್ದಾರಿ ಪರಿಶಿಷ್ಟರಲ್ಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಅಂಬೇ ಡ್ಕರ್ ಜಯಂತಿ ಸಮಾರಂಭಗಳಿಗೆ ಕಾರ್ಯಕರ್ತರು ಸೀಮಿತಗೊಳಿಸದೇ ಗ್ರಾಮೀಣ ಪ್ರದೇಶದ ದಲಿತರ ಕೇರಿಗಳಿಗೆ ತೆರಳಿ ಅಂಬೇಡ್ಕರ್ ವಿಚಾರಧಾರೆ ಮನದಟ್ಟು ಮಾಡಬೇಕು. ನಿರಂತರ ಜನತೆಯೊಂದಿಗೆ ಸಂಪರ್ಕ ಇಟ್ಟುಕೊಂಡು ವಿಚಾರ ಮಂಡಿಸಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು, ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಮಾರಲ್ ಪೊಲೀಸ್ ಹೆಸರಿನಲ್ಲಿ ಜನರ ನಡುವೆ ಉಂಟಾಗಿದ್ದ ಕಂದಕವನ್ನು ಮತ್ತಷ್ಟು ವಿಸ್ತರಿಸುವ ಕೆಲಸ ಮಾಡುತ್ತಿದೆ.ಇದು ಸಂವಿಧಾನ ವಿರೋಧಿಯಾಗಿದ್ದು, ಬಾಬಾ ಸಾಹೇಬರ ಹೆಸರಿಗೆ ಮಸಿ ಬಳಿಯುವ ಕೆಲಸವಾಗಿದೆ. ಸಂವಿಧಾನದ ಮೇಲಿನ ಪರೋಕ್ಷ ದಾಳಿಯಾಗಿದೆ.ದೇಶದಲ್ಲಿ ಶಾಂತಿ ನೆಲಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗಿದೆ. ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಕಾಂಗ್ರೆಸ್ ಅಧ್ಯಕ್ಷಚಂದ್ರಶೇಖರ್‌ಗೌಡ ಮಾತನಾಡಿ, ತಾವು ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಷ್ಯತೆಯ ನೋವುಗಳಿಗೆ ಸಂವಿಧಾನದ ಮೂಲಕ ಪರಿಹಾರಕಂಡುಕೊಂಡವರು ಬಾಬಾ ಸಾಹೇಬ್‌ಅಂಬೇಡ್ಕರ್, ದೇಶಕ್ಕೆ ಸ್ವಾತಂತ್ರದೊರೆಯುವ ಮುನ್ನ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ನಿಮ್ಮ ವರ್ಗಗಳಿಗೆ ಸ್ವಾತಂತ್ರ ಲಭಿಸಬೇಕು ಎಂಬುದು ಅಂಬೇಡ್ಕರ್ ಅವರ ವಾದವಾಗಿತ್ತು. ಅದನ್ನು ಸಕಾರ ಮಾಡಿದರು. ಸಂಸ್ಕೃತವನ್ನುಅಭ್ಯಾಸ ಮಾಡಿ, ಶೋಷಣೆಗೆಕಾರಣವಾಗಿದ್ದ ಮನುಸೃತಿಯನ್ನು ಓದಿ, ಅರ್ಥ ಮಾಡಿಕೊಂಡು,ಅದನ್ನು ಸುಡುವ ಮೂಲಕ ದಲಿತರನ್ನು ಶೋಷಣೆಯಿಂದ ಮುಕ್ತಗೊಳಿಸಲು ಕಾರಣರಾದರು ಎಂದರು.

ಈ ಸಂದರ್ಭದಲ್ಲಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತರಾಮಭರಣ್ಯ, ಜಿಲ್ಲಾ ವಕ್ತಾರ ಹಿರೇ ಮಗಳೂರು ಪುಟ್ಟಸ್ವಾಮಿ, ಮಹಿಳಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ನಗರಸಭೆ ಉಪಾಧ್ಯಾಕ್ಷೆ ಅನು ಮಧುಕರ್, ಸದಸ್ಯೆ ರೂಪ, ಮುಖಂಡರುಗಳಾದ ಕೆಂಪನಹಳ್ಳಿ ಪುಷ್ಪರಾಜ್, ಕೋಟೆ ರಂಗನಾಥ್, ಸೋಮಶೇಖರ್, ನಂದೀಶ್ ಮದಕರಿ, ಹೆಚ್.ಕೆ.ಕೇಶವಮೂರ್ತಿ, ಬಿ.ರಾಜಪ್ಪ, ನಾಗರಾಜ್, ನೆಟ್ಟೆಕೆರೆಹಳ್ಳಿ ಜಯಣ್ಣ, ಸಂತೋಷ್ ಕೋಟ್ಯಾನ್, ದುರ್ಗೇಶ್, ರೇವ್‌ನಾಥ್,ಜಿಲ್ಲಾ ವಕ್ತಾರರಾದ ಕೆ.ಎಂ.ಸುಜಾತ,ಮಹೇಶ್(ಮೆಸ್),ನರಸೀಯಪ್ಪ,ತೋವಿನಕೆರೆ ಪುಟ್ಟರಾಜು,ಕೆಂಪರಾಜು ಮತ್ತಿತರರು ಉಪಸ್ಥಿತರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?