ತುಮಕೂರು-ಸೈಬರ್ ಸುರಕ್ಷತೆಗೆ-ಪರಿಣಾಮಕಾರಿ-ತಾಂತ್ರಿಕ ವ್ಯವಸ್ಥೆ- ಬೇಕು-ತುಮಕೂರು ನಗರ-ತಾಂತ್ರಿಕವಾಗಿ-ಸುರಕ್ಷತೆಯಲ್ಲಿದೆ- ತುಮಕೂರು-ಮಹಾನಗರ ಪಾಲಿಕೆ-ಆಯುಕ್ತೆ- ಬಿ ಅಸ್ವಿಜಾ

ತುಮಕೂರು: ಇತ್ತೀಚಿಗೆ ಬದಲಾಗುತ್ತಿರುವ ತಾಂತ್ರಿಕ ವ್ಯವಸ್ಥೆಗಳು ಮಾನವನಿಗೆ ಸಹಕಾರಿ, ಸಹಾಯವು ಅಲ್ಲದೆ ಆರ್ಥಿಕವಾಗಿಯೂ ಅಪಾಯ ತಂದುಡ್ಡುವಂತಹ ವ್ಯವಸ್ಥೆಗೆ ದಾರಿ ಮಾಡಿ ಕೊಟ್ಟಿದ್ದು ಸಮಾಜದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಸುರಕ್ಷತೆಗೆ ಸುಧಾರಿತ ಮತ್ತು ಪರಿಣಾಮಕಾರಿಯಾದಂತಹ ತಾಂತ್ರಿಕ ವ್ಯವಸ್ಥೆ ರೂಪುಗೊಳ್ಳಬೇಕಾಗಿದೆ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ ಅಸ್ವಿಜಾ ಅವರು ತಿಳಿಸಿದರು.


ತುಮಕೂರು ನಗರ ಹೊರವಾಲಯದ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಂದು ವಾರಗಳ ಕಾಲ ಏರ್ಪಡಿಸಲಾಗಿದ್ದ ‘ಇ ಆಡಳಿತದ ಸುರಕ್ಷತೆ ಮತ್ತು ಸೈಬರ್ ಕ್ರೈಂ ವಸ್ತುಸ್ಥಿತಿ ಆಧುನಿಕ ಕೃತಕ ಬುದ್ಧಿಮತ್ತೆ ವಿಷಯ ಕುರಿತಾದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ತುಮಕೂರು ನಗರ ಅತಿ ವೇಗವಾಗಿ ಬೆಳೆಯುತ್ತಿದೆ ಅನೇಕ ತಂತ್ರಜ್ಞಾನದ ವ್ಯವಸ್ಥೆಗಳು ಇಲ್ಲಿಗೆ ಅವಶ್ಯಕವಾಗಿದ್ದು, ತುಮಕೂರು ನಗರ ಸ್ಮಾರ್ಟ್ ಸಿಟಿಯಾಗಿ ಅನೇಕ ಬದಲಾವಣೆಗಳನ್ನು ಕಂಡಿದೆ .

100 ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಐದನೇ ಸ್ಥಾನವನ್ನು ಪಡೆದು ಶಿಕ್ಷಣ, ವಸತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿ ಬೈಜೀಕರಣ ವ್ಯವಸ್ಥೆಯಡಿ ವಿಲೀನಗೊಳಿಸಲಾಗಿದ್ದು, ವಿಶೇಷವಾಗಿ ತುಮಕೂರು ನಗರವನ್ನ ಕಮಾಂಡ್ ಸೆಂಟರ್ ನಲ್ಲಿ ನಿರ್ವಹಿಸುವ ವ್ಯವಸ್ಥೆ ಹೊಂದಿ ಆಯಾ ಕಟ್ಟಿನ ರಸ್ತೆ ಪ್ರದೇಶ, ವೃತ್ತಗಳು ಸೇರಿದಂತೆ ಇತರೆ ವ್ಯವಸ್ಥೆಗಳಿಂದ ತಾಂತ್ರಿಕವಾಗಿ ಕಣ್ಗಾವಲಿನಲ್ಲಿ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.


ತುಮಕೂರು ನಗರವನ್ನ ಆಕರ್ಷಣೀಯ ಕ್ಷೇತ್ರವನ್ನಾಗಿ ಮಾರ್ಪಡಿಸಲು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರು ಅನೇಕ ರೀತಿಯ ಯೋಜನೆ ಮತ್ತು ಅನುದಾನಗಳನ್ನು ಕಲ್ಪಿಸಿದ್ದು ಅಮಾನಿ ಕೆರೆಯ ಐಲ್ಯಾಂಡ್ ಗೆ ಗಾಜಿನ ಸೇತುವೆ ನಿರ್ಮಾಣ, ಸುಸಜ್ಜಿತ ಆಧುನಿಕ ಶೈಲಿಯ ಖಾಸಗಿ ಬಸ್ ನಿಲ್ದಾಣ, ಸುಮಾರು ಮೂರು ಕೋಟಿಯಲ್ಲಿ ತುಮಕೂರು ನಗರಕ್ಕೆ ಸುಸಜ್ಜಿತ ಚರಂಡಿ, ರಸ್ತೆ, ಯುಜಿಡಿ ಸಂಪರ್ಕ, ಪಾರ್ಕ್ ನಿರ್ಮಾಣ, ಅಕ್ಕ ತಂಗಿ ಕೆರೆಯಲ್ಲಿ ವಿಶೇಷ ಸಸ್ಯ ಕಾಶಿ ನಿರ್ಮಾಣ ಸೇರಿದಂತೆ 10 ಹಲವು ಯೋಜನೆಗಳಿಂದ ತುಮಕೂರು ನಗರವನ್ನ ಬದಲಾವಣೆ ಮಾಡುತ್ತಿದ್ದು ಅದೇ ರೀತಿಯಾಗಿ ಸಾರ್ವಜನಿಕರ ಸಂರಕ್ಷಣೆಗಾಗಿ ತಾಂತ್ರಿಕವಾಗಿ ಅನೇಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.


ಅಸ್ತಾಕ್ಷ ಲ್ಯಾಬ್ ಪ್ರವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಅವರು ಮಾತನಾಡಿ, ತಾಂತ್ರಿಕತೆ ಬೆಳದಂತೆ ಅನೇಕ ಅಪಾಯಕಾರಿ ಸಮಸ್ಯೆಗಳು ಎದುರಾಗುತ್ತಿವೆ ಹೊಸದಾಗಿ ಬಂದಿರುವ ಬೈಜಿಕ ತಂತ್ರಜ್ಞಾನದಿಂದಾಗಿ ಹ್ಯಾಕಿಂಗ್ ಸಮಸ್ಯೆ ಎದುರಾಗುತ್ತಿದ್ದು, ಸಾರ್ವಜನಿಕರು ತಮ್ಮ ಸ್ಮಾರ್ಟ್ ಸಾಧನ ಸಲಕರಣೆಗಳನ್ನು ಸುರಕ್ಷಿತವಾಗಿಡಲು ಅನೇಕ ತಂತ್ರಜ್ಞಾನಗಳು ಬರುತ್ತಿದ್ದು, ಹ್ಯಾಕಿಂಗ್ ನಿಂದ ಮುಕ್ತಿ ಹೊಂದಬಹುದಾಗಿದೆ. ಜನಸಾಮಾನ್ಯರಿಗೆ ಡಿಜಿಟಲ್ ಬಳಕೆ ಬಗ್ಗೆ ಹೆಚ್ಚು ಹೆಚ್ಚು ಜ್ಞಾನ ತಿಳಿಸಬೇಕಿದ್ದು ಇಂತಹ ಕಾರ್ಯಗಾರಗಳು ಚರ್ಚಾ ವಿಚಾರಗಳು ತುಂಬಾ ಅವಶ್ಯಕವಾಗಿದ್ದು ತಾಂತ್ರಿಕವಾಗಿ ಮುಂದೆ ಬರುವ ವಿದ್ಯಾರ್ಥಿಗಳು ಇದರ ಸಂಶೋಧನೆಗೆ ಮುಂದಾಗಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಸಂಜೀವ್ ಕುಮಾರ್, ಕಂಪ್ಯೂಟರ್ ಸೈನ್ಸ್, ಡಾ.ರೇಖಾ, ಅಸ್ತಾಕ್ಷ ಲ್ಯಾಬ್ ಲಿಮಿಟೆಡ್ ನ ಡಾ. ಗಿರೀಶ್, ವಾಸೀಮ್‌ವುದ್ದೀನ್, ರಾಜೇಶ್ ಎಚ್ ಎಮ್, ಸೇರಿದಂತೆ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಬೋಧಕ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?