ತುಮಕೂರು: ಟ್ಯೂಷನ್ ತರಗತಿಗಳಿಂದ ಮಕ್ಕಳ ಮುಂದಿನ ಭವಿಷ್ಯದ ಶಿಕ್ಷಣಕ್ಕೆ ಭದ್ರ ಬುನಾದಿಯಾಗಲಿದೆ ಸಂದೇಶ್ ಪಿ.ಬಿ.ರವರು ತಿಳಿಸಿದರು.
ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ.ಟ್ರಸ್ಟ್ ಕಾರ್ಯಕ್ರಮದಡಿಯಲ್ಲಿ ಯಲ್ಲಾಪುರ ವಲಯದ ಊರುಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 10ನೇ ತರಗತಿ ಮಕ್ಕಳಿಗೆ ಮೂರು ತಿಂಗಳು ಟ್ಯೂಷನ್ ಕ್ಲಾಸ್ ಹಮ್ಮಿಕೊಂಡಿದ್ದು, ಇಂದು ಸಮಾರೋಪ ಕಾರ್ಯಕ್ರಮದಲ್ಲಿ ತುಮಕೂರು ಗ್ರಾಮಾಂತರ ತಾಲ್ಲೋಕಿನ ಯೋಜನಾಧಿಕಾರಿಗಳಾದ ಸಂದೇಶ್.ಪಿ.ಬಿ.ರವರು ಯೋಜನೆಯ ಕಾರ್ಯಕ್ರಮಗಳಾದ ಚತುರ್ಥ ದಾನಗಳ ಬಗ್ಗೆ, ಜ್ಞಾನ ದೀಪ ಶಿಕ್ಷಕರ ಆಯ್ಕೆ, ಶಾಲೆಗೆ ಡೆಸ್ಕ್ ಬೆಂಚ್, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಸಂಸ್ಕೃತಿ, ಸಂಸ್ಕಾರ, ಮಕ್ಕಳ ಶಿಕ್ಷಣಕ್ಕೆ ತಂದೆ ತಾಯಿಯರು ಪ್ರಗತಿನಿಧಿ ಪಡೆದು ಅತ್ಯುತ್ತಮ ಶಿಕ್ಷಣ ನೀಡುತ್ತಿದ್ದೂ ಎಲ್ಲಾ ಮಕ್ಕಳು ಉತ್ತಮ ಫಲಿತಾಂಶ ಪಡೆಯಿರಿ ಹಾಗೆ ಎಸ್ ಎಸ್ ಎಲ್ ಸಿ ಯಲ್ಲಿ ಮಕ್ಕಳು ಉತ್ತಮ ಅಂಕ ಗಳಿಸಿ ಎಲ್ಲರು ಪ್ರಥಮ ದರ್ಜೆಯಲ್ಲಿ ಪಾಸಾಗಿ ಎಂದು ಸಣ್ಣ ಸಣ್ಣ ಕಥೆಗಳ ಮೂಲಕ ಮಾಹಿತಿ ನೀಡಿ ಶುಭ ಹಾರೈಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಂಜುನಾಥ್‌ರವರು ಮಕ್ಕಳು ಬೆಳಿಗ್ಗೆ ಬೇಗ ಎದ್ದು ಓದುವ ಬಗ್ಗೆ ತಿಳಿಸಿ ಮಕ್ಕಳಿಗೆ ಛಲ ಇರಬೇಕು. ಹಸಿವು, ನಿದ್ರೆ ಬಿಟ್ಟು ಓದಿ ಉತ್ತಮ ಫಲಿಂತಾಶ ಬಂದರೆ ನಾವು ಧರ್ಮಸ್ಥಳಕ್ಕೆ ಮತ್ತು ಪೂಜ್ಯ ದಂಪತಿಗಳಿಗೆ ಅದೇ ನಮ್ಮ ಶಾಲೆಯ ಕೊಡುಗೆ ಆಗಬೇಕು ಎಂದು ತಿಳಿಸಿ ಯೋಜನೆಯ ಕಾರ್ಯಕ್ರಮ ಅತ್ಯುತ್ತಮ ಎಂದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಮಮತ ಎಚ್.ಜಿ, ಶಾಲೆಯ ಶಿಕ್ಷಕ ವೃಂದದವರು, ಏರ್ಟೆಲ್ ಸಂಸ್ಥೆಯ ಅಧಿಕಾರಿ ಮಂಜುನಾಥ್, ಸೇವಾಪ್ರತಿನಿಧಿ ರಮ್ಯ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.
- ಕೆ.ಬಿ.ಚಂದ್ರಚೂಡ