ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಟೈಲರಿಂಗ್ ಕ್ಲಾಸ್ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಬಟವಾಡಿ ಕಾರ್ಯಕ್ಷೇತ್ರದ ಜೀವನದಿ ಜ್ಞಾನವಿಕಾಸ ಕೇಂದ್ರದ 3೦ ಜನ ಸದಸ್ಯರಿಗೆ ಕಳೆದ 3 ತಿಂಗಳಿನಿಂದ ನಡೆದ ಟೈಲರಿಂಗ್ ಕ್ಲಾಸ್ ಸಮಾರೋಪ ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ನಿರ್ದೇಶಕ ಸತೀಶ್ ಸುವರ್ಣ ಉದ್ಘಾಟನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಧರ್ಮಸ್ಥಳ ಸಂಸ್ಥೆಯ ಮುಖೇನ ರಾಜ್ಯದಲ್ಲಿ 257 ಕಡೆಯಲ್ಲಿ ಟೈಲರಿಂಗ್ ತರಬೇತಿಯನ್ನು ನಡೆಸಲಾಗುತ್ತಿದ ಹಾಗೂ ಸ್ವಾವಲಂಬಿ ಬದುಕಿಗೆ ಸ್ವ ಉದ್ಯೋಗ ಮಾಡಿಕೊಂಡಲ್ಲಿ ಸಾಧ್ಯ. ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಎಸ್.ಬಿ.ಐ.ನ ಬ್ಯಾಂಕ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು ಬ್ಯಾಂಕ್ ನಿಂದ ಸಾಲ ಒದಗಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಸಂದೇಶ್ ಪಿ.ಬಿ ಒಕ್ಕೂಟದ ಅಧ್ಯಕ್ಷ ಸವಿತಾ ರವರು ಜ್ಞಾನವಿಕಾಸ ಸಮನ್ವಯಧಿಕಾರಿಗಳಾದ ಧನಲಕ್ಷ್ಮೀ, ವಲಯ ಮೇಲ್ವಿಚಾರಕ ಪ್ರೇಮ ಹಾಗೂ ತರಬೇತಿ ನೀಡಿದ ತರಬೇತಿದಾರರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
-ಕೆ.ಬಿ.ಚಂದ್ರಚೂಡ