ತುಮಕೂರು : ನಗರದ ದಿಬ್ಬೂರು ಬಡಾವಣೆಯಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ, ಮಹಾನಾಯಕ ಡಾ|| ಬಿ.ಆರ್.ಅಂಬೇಡ್ಕರ್‌ರವರ 134ನೇ ಜನ್ಮದಿನಾಚರಣೆಯನ್ನು ದಿಬ್ಬೂರಿನ ಡಾ|| ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ.ರವರು ಮಾತನಾಡುತ್ತಾ ಭಾರತದಲ್ಲಿ ಪ್ರತಿಯೊಬ್ಬರಿಗೂ ಸರ್ವ ಸಮಾನತೆ, ಸರ್ವರೂ ವಿದ್ಯಾವಂತರಾಗಬೇಕು, ಸರ್ವ ಜನರಿಗೂ ಸಾಮಾಜಿಕ ನ್ಯಾಯ ದೊರೆಯಬೇಕು, ಪ್ರತಿಯೊಂದು ಜೀವಿಗೂ ಎಲ್ಲಾ ರೀತಿಯ ಅವಕಾಶಗಳು ಈ ಭಾರತದಲ್ಲಿ ದೊರೆಯಬೇಕು ಎಂಬ ಚಿಂತನೆಯನ್ನು ಹೊಂದಿದ್ದAತಹ ವ್ಯಕ್ತಿ, ಇವರು ಹಲವಾರು ಜನರ ವಿರೋಧದ ನಡುವೆಯೇ ಭಾರತ ಸಂವಿಧಾನ ರಚನೆ ಮಾಡಿ ಸರ್ವರಿಗೂ ನ್ಯಾಯ ಒದಗಿಸಬೇಕು ಎಂಬ ಹಂಬಲದಿAದ ಸರ್ವರೂ ಒಪ್ಪುವಂತಹ ಸಂವಿಧಾನವನ್ನು ನೀಡಿದ್ದಾರೆ. ಇಂತಹ ಮಹಾನ್‌ಚೇತನರ ಜನ್ಮದಿನಾಚರಣೆಯನ್ನು ನಾವು ಸ್ಥಳೀಯರಿಗೆ ದಾಸೋಹವನ್ನು ಮಾಡುವುದರ ಮೂಲಕ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರುಗಳಾದ ನರಸೇಗೌಡ್ರು, ಧನೀಯಾ ಕುಮಾರ್, ನೇತಾಜಿ ಶ್ರೀಧರ್, ಶಿವಪ್ರಸಾದ್ (ಪ್ರಸ್ಸಿ), ಮನೋಹರ್ ಗೌಡ್ರು, ವಿಜಯ್ ಕುಮಾರ್, ರಾಮಾಂಜಿನಪ್ಪ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಸಾಮಾಜಿಕ ಹೋರಾಟಗಾರರಿಗೆ ಸನ್ಮಾನವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ವಿಜಯ್ ಕುಮಾರ್, ಭೈರೇಶ್ (ಜೆಡಿಎಸ್ ಯುವ ಮುಖಂಡರು), ಶಿವಣ್ಣ (ಶಿಕ್ಷಕರು), ನರಸಿಂಹಮೂರ್ತಿ, ಯೋಗೇಶ್, ಗಿರೀಶ್, ಹನುಮಂತರಾಜು, ಶ್ರೀನಿವಾಸ್, ಕೃಷ್ಣಮೂರ್ತಿ, ರಾಜೇಶ್, ನಾಗರಾಜು, ಅಮಿತ್, ಮಂಜುನಾಥ್, ಶಿವರಾಜು, ಸತೀಶ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.