ತುಮಕೂರು- ಜಿಲ್ಲಾ ವಕೀಲರ ಸಂಘದ ಆಡಳಿತ ಮಂಡಳಿಯ 2025-27ನೇ ಸಾಲಿನ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕಾಗಿ ಹಿರಿಯ ವಕೀಲರಾದ ವಸಂತ ಕುಮಾರ್ ಬಿ.ವಿ.ರವರು ತಮ್ಮ ಅಭಿಮಾನಿಗಳು,ಹಿರಿಯ,ಕಿರಿಯ,ಮಹಿಳಾ ವಕೀಲರೊಂದಿಗೆ ಆಗಮಿಸಿ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಾಗೇಶ್ ರಾವ್ ಗಾಯಕ್ ವಾಡ್,ಪಾಲಾಕ್ಷಯ್ಯ,ಬಿ.ಆರ್.ದೇವರಾಜು,ಹರೀಶ್,ಜಯಣ್ಣ,ಆರ್.ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು.
-ಕೆ.ಬಿ.ಚಂದ್ರಚೂಡ