ತುಮಕೂರು-ಜಿಲ್ಲಾ-ವಕೀಲರ-ಸಂಘದ-ಅಭಿವೃದ್ಧಿಯ-ಹರಿಕಾರ-ಅಧ್ಯಕ್ಷ ಹೆಚ್.ಕೆಂಪರಾಜಯ್ಯ

ತುಮಕೂರು: ತುಮಕೂರು ಜಿಲ್ಲಾ ವಕೀಲರ ಸಂಘದ ಹಾಲಿ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ೨೦೨೩-೨೫ನೇ ಸಾಲಿನಲ್ಲಿ ಗೆದ್ದು ಅಭಿವೃದ್ಧಿಯ ಛಾಪನ್ನು ಮೂಡಿಸಿದ್ದಾರೆ,ವಕೀಲರ ಕಲ್ಯಾಣಕ್ಕಾಗಿ,ವಕೀಲರ ಅಭ್ಯುದಯಕ್ಕಾಗಿ ಹಗಲು-ರಾತ್ರಿ ಕಾಯ,ವಾಚ,ಮನಸಾ ದುಡಿಯುತ್ತಿದ್ದಾರೆ.

2023 ರಲ್ಲಿ ಅವರು ಗೆದ್ದ ನಂತರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ,ವಕೀಲರ ಸಂಘದಿಂದ ನೌಕರರಿಗೆ, ಇತರೆ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ನಗದನ್ನು ರದ್ದು ಮಾಡಿ ನಗದು ರಹಿತ ವಹಿವಾಟನ್ನು ಪರಿಚಯಿಸಿ ಎಲ್ಲರಿಗೂ ಚೆಕ್ ಮತ್ತು ಆರ್.ಟಿ.ಜಿ.ಎಸ್ ಮೂಲಕ ನೀಡುತ್ತಿದ್ದಾರೆ,ನ್ಯಾಯಾಲಯದಿಂದ ಹೊರಹೋಗುವ ಗೇಟನ್ನು ತೆಗೆಸಿ ನೂತನ ಗೇಟನ್ನು ಇಟ್ಟು ಒಳ ಬರುವ ಮತ್ತು ಹೊರಹೋಗುವ ಗೇಟನ್ನು ಇಡಿಸಿದ್ದಾರೆ,ನ್ಯಾಯಾಲಯದ ಆವರಣದಲ್ಲಿ ವಕೀಲರಿಗೆ ಮತ್ತು ಕಕ್ಷಿದಾರರು,ನ್ಯಾಯಾಲಯದ ಸಿಬ್ಬಂದಿಗಳಿಗೆ ಅನೂಕೂಲವಾಗಲು ಕರ್ನಾಟಕ ಬ್ಯಾಂಕ್ ನ ನೂತನ ಎಟಿಎಂ ಕೇಂದ್ರವನ್ನು ಮಾಡಿದ್ದಾರೆ,25 ಲಕ್ಷ ವೆಚ್ಚದಲ್ಲಿ ನೂತನ ಗಣೇಶ ದೇವಾಲಯವನ್ನು ನಿರ್ಮಿಸಲು ಉಚ್ಛನ್ಯಾಯಾಲಯದಿಂದ ಅನುಮೋದನೆ ಕೊಡಿಸುವಲ್ಲಿ ಯಶಸ್ಸು ಸಾಧಿಸಿ ಈಗಾಗಲೇ ದೇವಸ್ಥಾನ ನಿರ್ಮಾಣವಾಗುತ್ತಿದೆ,25 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆಯ ಜಂಟಿ ಅನುದಾನದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣವಾಗುತ್ತಿದೆ.

ವಕೀಲರ ತಿಂಗಳ ವಂತಿಕೆಯನ್ನು 20 ರೂ ನಿಂದ 50ರೂಗೆ ವಕೀಲರಿಂದ ಅನುಮೋದನೆ ಪಡೆದು ಸಂಘಕ್ಕೆ ಹೆಚ್ಚು ಹಣದ ಒಳಹರಿವನ್ನು ಮಾಡಲಾಗಿದೆ ಇದರಿಂದ ಹಲವು ಅಭಿವೃದ್ಧಿ ಕೆಲಸಕ್ಕೆ ಹಣದ ನೆರವು ದೊರಕುತ್ತಿದೆ,ಸಂಘಕ್ಕೆ ಈ ಹಿಂದೆ ವಿವಿಧ ಮೂಲಗಳಿಂದ ತಿಂಗಳಿಗೆ ೩೫ ಸಾವಿರ ಬಾಡಿಗೆ ಬರುತ್ತಿದ್ದು ಈಗ 85 ಸಾವಿರ ಬಾಡಿಗೆ ಬರುತ್ತಿದೆ,15 ಲಕ್ಷ ರೂಗಳನ್ನು ಸಂಘದ ಹೆಸರಿನಲ್ಲಿ ನಿಶ್ಚಿತ ಠೇವಣಿ ಇಡಲಾಗಿದೆ,ಈ ಹಿಂದೆ ಉಪಲೋಕಾಯುಕ್ತರಾದ ಜಸ್ಟೀಸ್ ಬಿ.ವೀರಪ್ಪನವರು ಸಂಘಕ್ಕೆ ಸೌಹಾರ್ಧಯುತ ಭೇಟಿ ನೀಡಿದಾಗ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು,ವಕೀಲರ ಸಂಖ್ಯೆ ಜಾಸ್ತಿ ಇದ್ದು ಕನಿಷ್ಠ 25 ಎಕರೆ ಭೂಮಿ ಬೇಕು ಎಂದು ಮನವಿ ಮಾಡಿದಾಗ ಅವರು ತಕ್ಷಣವೇ ಸ್ಪಂದಿಸಿ ನಗರದ ತುಮಕೂರು ವಿಶ್ವವಿದ್ಯಾನಿಲಯದ ಜಾಗ ಮತ್ತು ಅಮಲಾಪುರದಲ್ಲಿ ೨೫ ಎಕರೆ ನೀಡುವಂತೆ ಜಿಲ್ಲಾಡಳಿತಕ್ಕೆ ನೋಟಿಸ್ ನೀಡಿ ಈ ಸದರಿ ಕೇಸ್ ಮಾನ್ಯ ಲೋಕಾಯುಕ್ತರ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆಗೆ ಇದೆ,ಹೊಸ ಕಟ್ಟಡದ ಜೊತೆಗೆ ಪೋಲೀಸ್ ಚೌಕಿಯನ್ನು ಸಹ ನಿರ್ಮಿಸಲಾಗಿದೆ,ಬ್ಯಾಂಕ್ ನ ಚೆಕ್ ಬೌನ್ಸ್ ಕೇಸ್ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪನೆಯಾಗಲಿದ್ದು ಅದಕ್ಕೆ ಉಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಶೀಘ್ರವೇ ನೂತನ ನ್ಯಾಯಾಲಯ ಬರಲಿದೆ.

450 ಸಿಸಿ ಕ್ಯಾಮಾರಾಗಳು ಬೇಕೆಂದು ಮನವಿ ಸಲ್ಲಿಸಿದ್ದು ಅದು ಅನುಮೋದನೆ ಹಂತದಲ್ಲಿದೆ ಸಿಸಿ ಕ್ಯಾಮೆರಾ ಬಂದರೆ ನ್ಯಾಯಾಲಯದ ಆವರಣದಲ್ಲಿ ಸೂಜಿ ಕಳೆದು ಹೋದರೂ ಪತ್ತೆ ಹಚ್ಚಲು ಸಹಾಯಕವಾಗುತ್ತದೆ,ನೂತನ ಇ-ಫೈಲಿಂಗ್ ಕೌಂಟರ್ ಪ್ರಾರಂಭವಾಗಲಿದೆ,ವಕೀಲರ ವಿಮಾ ಸೌಲಭ್ಯಕ್ಕಾಗಿ ಹೋರಾಟ ಮಾಡಲಾಗುವುದು,ವಕೀಲರು ಮರಣ ಹೊಂದಿದರೆ ಮರಣ ನಿಧಿ (ಡೆತ್ ಫಂಡ್) ಮಾಡಲು ಯೋಜನೆ ರೂಪಿಸಲಾಗುವುದು,ಮಹಿಳಾ ವಕೀಲರ ಕೊಠಡಿಗೆ 24 ಲಾಕರ್ ಉಳ್ಳ ಕಪಾಟುಗಳನ್ನು ತಮ್ಮ ಸ್ವಂತ ಹಣದಲ್ಲಿ ನೀಡಲಾಗಿದೆ,ಮಹಿಳಾ ವಕೀಲರ ಕೊಠಡಿಗೆ ಕೇರಂ ಬೋರ್ಡ್ ಮತ್ತು ಚೆಸ್ ಬೋರ್ಡ್ನ್ನು ಸ್ವಂತ ಹಣದಲ್ಲಿ ನೀಡಲಾಗಿದೆ,ಅಧ್ಯಕ್ಷರು ಮತ್ತು ಬೋರ್ಡ್ ರೂಂ ಕೊಠಡಿಗೆ ಸ್ವಂತ ಹಣದಲ್ಲಿ ಹವಾ ನಿಯಂತ್ರಣ (ಎಸಿ) ಅಳವಡಿಸಲಾಗಿದೆ.

ಕಕ್ಷಿದಾರರು ಮತ್ತು ವಕೀಲರು ವಕೀಲರ ಸಂಘದ ಅವರಣದಲ್ಲಿ ಕುಳಿತುಕೊಳ್ಳಲು 10 ಬೆಂಚುಗಳನ್ನು ಹಾಕಿಸಲಾಗಿದೆ,ಮತ್ತೆ ೧೦ ಬೆಂಚುಗಳು ಮುಂದಿನ ವಾರದಲ್ಲಿ ಬರಲಿದೆ.ಇಷ್ಟೇ ಅಲ್ಲದೆ ದೇಶದ ನೆಲ-ಜಲ-ಗಡಿ ವಿಚಾರ ಬಂದಾಗ ವಕೀಲರ ಜೊತೆ ಸೇರಿ ಹಗಲು ರಾತ್ರಿ ಹೋರಾಟ ಮಾಡುತ್ತಾರೆ,ಕೊಬ್ಬರಿ ಬೆಳೆ,ದಾಳಿಂಬೆ ಬೆಳೆ,ಭತ್ತ,ರಾಗಿ ಹೀಗೆ ಕನಿಷ್ಠ ಬೆಲೆಯ ವಿಚಾರ ಬಂದಾಗ ರೈತರ ಪರವಾಗಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.ವಕೀಲರಿಗೆ ಏನೇ ಕಷ್ಟ ಬಂದರೂ ನ್ಯಾಯಾಧೀಶರ ಗಮನಕ್ಕೆ ತಂದು ಅವಶ್ಯಕತೆ ಬಂದರೆ ಹೋರಾಟ ಮಾಡಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಹೀಗೆ ಹತ್ತಾರು ಉತ್ತಮ ಕೆಲಸಗಳನ್ನು ಮಾಡಿ ಈಗ ಪುನಃ ಶ್ರೀ ಹೆಚ್.ಕೆಂಪರಾಜಯ್ಯನವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ 2025-27ನೇ ಸಾಲಿನ ತುಮಕೂರು ಜಿಲ್ಲಾ ವಕೀಲರ ಸಂಘದ ಚುನಾವಣೆ ದಿನಾಂಕ: 11-04-2025 ನಡೆಯಲಿದ್ದು ಅವರ ಕ್ರಮ ಸಂಖ್ಯೆ 11 ಕ್ಕೆ ಎಲ್ಲ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್.ಕೆಂಪರಾಜಯ್ಯನವರಿಗೆ ಮತ ನೀಡಿ ಅವರನ್ನು ಪುನಃ ಆಯ್ಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ವರದಿ:ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?