ತುಮಕೂರು: ತುಮಕೂರು ಜಿಲ್ಲಾ ವಕೀಲರ ಸಂಘವು ಹಲವಾರು ಉತ್ತಮ ನಾಯಕರನ್ನು ಹೊಂದಿದೆ ಬೆಳೆಯುತ್ತಿರುವ ನಗರಕ್ಕೆ ಹೆಚ್ಚುತ್ತಿರುವ ವಕೀಲರ ಸಂಖ್ಯೆಗೆ ಅನುಗುಣವಾಗಿ ನ್ಯಾಯ ಬೇಡಿ ನ್ಯಾಯಾಲಯಕ್ಕೆ ಬರುತ್ತಿರುವ ಕಕ್ಷಿದಾರರಿಗೆ ನ್ಯಾಯದಾನ ನೀಡುವಲ್ಲಿ ವಕೀಲರ ಪಾತ್ರ ಅತ್ಯಂತ ಹಿರಿದು,ಈ ನಿಟ್ಟಿನಲ್ಲಿ 2025-27 ನೇ ಸಾಲಿನ ಜಿಲ್ಲಾ ವಕೀಲರ ಸಂಘದ ಚುನಾವಣೆ ಏ.11 ರಂದು ನಡೆಯಲಿದ್ದು ಭರವಸೆಯ ವಕೀಲ ಬಿ.ಜಿ.ಸತೀಶ್(ಬಿ.ಜಿ.ಎಸ್.) ರವರು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದು ಎಲ್ಲ ವಕೀಲರು ತಮ್ಮ ಅತ್ಯಮೂಲ್ಯ ಮತವನ್ನು ನೀಡಿ ಆಶೀರ್ವದಿಸಬೇಕೆಂದು ವಕೀಲರಲ್ಲಿ ಮನವಿ ಮಾಡಿದ್ದಾರೆ,ಬಿ.ಜಿ.ಸತೀಶ್ ರವರು ವಕೀಲರಾಗಿ,ಸಮಾಜಸೇವಕರಾಗಿ -ಹಲವು ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ.
ತುಮಕೂರು ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ 2002ರಲ್ಲಿ ಕಾನೂನು ಪದವಿಯನ್ನು ಪಡೆದು ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂವಿಧಾನ-ವಿಷಯದಲ್ಲಿ ಎಲ್.ಎಲ್.ಎಂ.ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ ನಂತರದ ದಿನಗಳಲ್ಲಿ ಚಿಕ್ಕಮಗಳೂರಿನ ಶ್ರೀನಿವಾಸಶೆಟ್ಟಿ ಕಾನೂನು ಕಾಲೇಜಿನಲ್ಲಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂ ಕಾನೂನು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಕಾಲ ಸೇವೆಸಲ್ಲಿಸಿದ್ದು ನಂತರ ೨೦೦೫ರಿಂದ ವಕೀಲರಾಗಿ ಬೆಂಗಳೂರಿನ ಹಿರಿಯ ವಕೀಲರರಾದ ಕೆ.ಎನ್.ಸುಬ್ಬಾರೆಡ್ಡಿ ರವರ ಬಳಿ ಕಿರಿಯ ವಕೀಲರಾಗಿ ಸೇವೆಸಲ್ಲಿಸಿದ್ದು ನಂತರ ೨೦೦೮ರಿಂದ ತುಮಕೂರಿನಲ್ಲಿ ಸ್ವಂತ ಕಚೇರಿ ಹೊಂದಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತುಮಕೂರು ನಗರದ ವಿವಿಧ ಸಂಘ-ಸAಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿ ಬಡವರಿಗೆ,ನಿರ್ಗತಿಕರಿಗೆ,ಮಹಿಳೆಯರಿಗೆ,ಅಬಲೆಯರಿಗೆ,ಹಿರಿಯ ನಾಗರೀಕರಿಗೆ ಉಚಿತ ಕಾನೂನು ಸಲಹೆಗಳನ್ನು ನೀಡುತ್ತಾ ಬರುತ್ತಿದ್ದಾರೆ,ವಿವಿಧ ಬ್ಯಾಂಕ್ ಗಳಲ್ಲಿ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈಗ ತುಮಕೂರು ಜಿಲ್ಲಾ ವಕೀಲರ ಸಂಘದ 2025-27ನೇ ಸಾಲಿನ ಚುನಾವಣೆ ನಡೆಯುತ್ತಿದ್ದು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದು ಕ್ರಮ ಸಂಖ್ಯೆ ೦೩ರಲ್ಲಿ ಸ್ಪರ್ಧಿಸಿರುತ್ತಾರೆ.
ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಆರಿಸಿ ಬಂದರೆ ಅವರು ಪ್ರಣಾಳಿಕೆಯಲ್ಲಿ ಹೇಳಿರುವಂತೆ ಸಂಘದ ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿಯ ನೆರವಿನೊಂದಿಗೆ,

೧) ನ್ಯಾಯಾಲಯದ ಆವರಣದಲ್ಲಿರುವ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಪಡಿಸುವುದು.
೨) ಸ್ವಂತ ಖರ್ಚಿನಲ್ಲಿ ಇ-ಲೈಬ್ರರಿ ಸ್ಥಾಪಿಸುವುದು.
೩) ಕಿರಿಯ ವಕೀಲರಿಗೆ ಸಿವಿಲ್ ಜಡ್ಜ್,ಎಪಿಪಿ ಪರೀಕ್ಷೆಯ ಪೂರ್ವ ತಯಾರಿಗಾಗಿ ಕಾರ್ಯಾಗಾರ ಆಯೋಜಿಸುವುದು.
೪) ಶುದ್ಧ ಹಾಗೂ ನೈರ್ಮಲ್ಯಯುಕ್ತ ಅತ್ಯಾಧುನಿಕ ಶೌಚಾಲಯ ನಿರ್ಮಾಣ.
೫) ವಕೀಲರು ಮತ್ತು ಕಕ್ಷಿದಾರರಿಗೆ ಶುದ್ಧ ಕುಡಿಯುವ ನೀರು ಘಟಕಗಳ ನಿರ್ಮಾಣ.
೬) ಬಾರ್ ಮತ್ತು ಬೆಂಚ್ ಗಳ ಮಧ್ಯೆ ಉತ್ತಮ ಭಾಂಧವ್ಯ ವೃದ್ಧಿಸುವಲ್ಲಿ ಪಾತ್ರ ವಹಿಸುವುದು ಮತ್ತು ವಕೀಲರ ಕಷ್ಟ ಸುಖಗಳಿಗೆ ಸ್ಪಂದಿಸಿ ತಕ್ಷಣವೇ ನೆರವು ನೀಡುವುದು.
ಎಲ್ಲ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ನನ್ನನ್ನು ಚುನಾಯಿಸಿ ವಕೀಲರ ಸೇವೆ ಮಾಡಲು ಆಶೀರ್ವದಿಸಬೇಕೆಂದು ಬಿ.ಜಿ.ಸತೀಶ್ ರವರು ಮನವಿ ಮಾಡಿದ್ದಾರೆ.
– ಕೆ.ಬಿ.ಚಂದ್ರಚೂಡ