ತುಮಕೂರು-ನ್ಯಾಯಾಂಗದ ಅಧಿಕ ಜಿಲ್ಲಾ ನ್ಯಾಯಾಧೀಶರುಗಳಿಗೆ ಜಿಲ್ಲಾ ನ್ಯಾಯಾಂಗ ನೌಕರರಿಂದಬೀಳ್ಕೊಡುಗೆ ಸಮಾರಂಭ


ತುಮಕೂರು: ಜಿಲ್ಲಾ ನ್ಯಾಯಾಲಯದ ನೌಕರರ ವತಿಯಿಂದ ತುಮಕೂರಿನ ಅಧಿಕ ಜಿಲ್ಲಾ ನ್ಯಾಯಾಧೀಶರುಗಳಾಗಿ ಕಾರ್ಯ ನಿರ್ವಹಿಸಿದ ಮೂರು ಜನ ದಕ್ಷ ನ್ಯಾಯಾಧೀಶರುಗಳು ತುಮಕೂರು ಜಿಲ್ಲೆಯಲ್ಲಿ ಪೂರ್ಣ ಮೂರು ವರ್ಷದ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ತುಮಕೂರು ಜಿಲ್ಲೆಯಿಂದ ತೆರಳುವ ಭಾವನಾತ್ಮಕ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಕಷ್ಟು ಉತ್ತಮ ತೀರ್ಪುಗಳನ್ನು ನೀಡಿ ತುಮಕೂರು ಜಿಲ್ಲೆಯ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದ 7ನೇ ಅಧಿಕ ಲೋಕಾಯುಕ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡರು ತುಮಕೂರು ಜಿಲ್ಲೆಯ ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನವಾಗಿದ್ದರು ಎಂದರೆ ಉತ್ಪ್ರೇಕ್ಷೆ ಅಲ್ಲ. ಭ್ರಷ್ಟ ಉನ್ನತ ಅಧಿಕಾರಿಗಳಿಗೂ ಸಹ ಶಿಕ್ಷೆ ನೀಡಿದ್ದು ಅತ್ಯಂತ ಮುಖ್ಯವಾದ ವಿಚಾರ.

ಅಧಿಕ ಜಿಲ್ಲಾ ತ್ವರಿತಗತಿ (ಪೋಕ್ಸೋ) ವಿಶೇಷ ನ್ಯಾಯಾಲಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ವಿರುದ್ಧದ ಲೈಂಗಿಕ ಶೋಷಣೆ, ಲೈಂಗಿಕ ದೌರ್ಜನ್ಯಗಳಂತಹ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ನೀಡಿ ಇತಿಹಾಸ ಬರೆದು, ಲೈಂಗಿಕ ಅಪರಾಧ ಜಗತ್ತಿಗೆ ಕಠಿಣ ಸಂದೇಶ ನೀಡಿದ ನ್ಯಾಯಾಧೀಶರಾದ ಶ್ರೀಮತಿ ಸಂಧ್ಯಾರಾವ್.ಪಿ ಅವರೂ ಸಹ ಇಂದಿಗೆ ಮೂರು ವರ್ಷ ಪೂರ್ಣಗೊಳಿಸಿ ವರ್ಗಾವಣೆಗೊಂಡಿರುತ್ತಾರೆ.

ಒಂದನೇ ಅಧಿಕ ಜಿಲ್ಲಾ ನ್ಯಾಯಾಧೀಶರಾಗಿ ಭೂಸ್ವಾಧೀನ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿದ ಪ್ರಸೀಲಾ ಕುಮಾರಿ.ಜಿ.ಎಸ್. ರವರು ಅಸಂಖ್ಯಾತ ಪ್ರಕರಣಗಳಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯದಾನ ಮಾಡಿದ್ದೂ ಒಂದು ಮೈಲಿಗಲ್ಲು.

ಅವರೂ ಸಹ ಇಂದು ಮೂರು ವರ್ಷ ಮುಗಿಸಿ ಹೊರಟ ದಿನ. ಸದರಿ ಸಮಾರಂಭವನ್ನು ತುಮಕೂರು ಜಿಲ್ಲಾ ನ್ಯಾಯಾಂಗ ನೌಕರರ ಮಾರ್ಗದರ್ಶಕರಾದ ಮತ್ತು ಆದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ವರ್ಗಾವಣೆಗೊಂಡ ಮೂರೂ ಜನ ನ್ಯಾಯಾಧೀಶರಿಗೆ ಶುಭವನ್ನು ನೌಕರರ ಸಮೂಹವು ಕೋರಿದ್ದು ಭಾವನಾತ್ಮಕವಾಗಿತ್ತು ಮತ್ತು ನೌಕರರ ಕಾರ್ಯ ವೈಖರಿಯನ್ನು ನ್ಯಾಯಾಧೀಶರು ಶ್ಲಾಘಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಎಲ್ಲಾ ಜಿಲ್ಲಾ ನ್ಯಾಯಾಧೀಶರು,ನೌಕರರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?